ಸಿದ್ದಾಪುರ: ನಿಲ್ಕುಂದದ ಮಳ್ಗುಂದ ಸರ್ಕಲ್’ನಲ್ಲಿ ಸರಾಯಿ ಮಾರಾಟ ಮಾಡುತ್ತಿದ್ದ ಅಬ್ಬಾಸ್ ಇಬ್ರಾಹಿ ಖಾನ್ (72) ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ಮೊದಲು ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಇದೀಗ ಅಕ್ರಮವಾಗಿ ಸರಾಯಿ ಮಾರಾಟಕ್ಕಿಳಿದಿದ್ದ. ಜೊತೆಗೆ ಮದ್ಯಪ್ರಿಯರಿಗೆ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಸೇವನೆಗೆ ಅವಕಾಶ ನೀಡಿದ್ದ. ಆದರೆ, ಇದಕ್ಕೆ ಯಾವುದೇ ಅನುಮತಿ ಇರಲಿಲ್ಲ. ಹೀಗಾಗಿ ಸೆ 1ರಂದು ಪಿಎಸ್‌ಐ ಅನೀಲ ಮಾದರ್ ಹಾಗೂ ತಂಡದವರು ಈತನ ಮೇಲೆ ದಾಳಿ ನಡೆಸಿದಾಗ 5 ಸರಾಯಿ ಪ್ಯಾಕೇಟ್ ದೊರೆತಿದೆ. ಪೊಲೀಸರು 199ರೂ ಮೌಲ್ಯದ ಸರಾಯಿ ಪ್ಯಾಕೇಟ್ ಹಾಗೂ ಖಾಲಿ ಲೋಟವನ್ನು ಆತನಿಂದ ವಶಕ್ಕೆ ಪಡೆದಿದ್ದಾರೆ.




