ಅಂಕೋಲಾ: ಬಸ್ ನಿಲ್ದಾಣದ ಬಳಿ ನಡೆದು ಹೋಗುತ್ತಿದ್ದ ರವಿರಾಜ ಗೋಪಾಲ ಗುನಗಾ (40) ಎಂಬಾತರ ಮೇಲೆ ಮೂವರು ಹಲ್ಲೆ ನಡೆಸಿದ್ದು, ಇದನ್ನು ತಪ್ಪಿಸಲು ಬಂದ ಅವರ ಸಹೋದರರ ಮರ್ಮಾಂಗ ಹಾಗೂ ಕೈ’ಗೆ ಕಚ್ಚಿ ಗಾಯಗೊಳಿಸಿದ್ದಾರೆ.
ರವಿರಾಜ ಗುನಗಾ ಅವರು ಔಷಧಿ ಅಂಗಡಿಯೊoದರಲ್ಲಿ ಕೆಲಸ ಮಾಡುತ್ತಾರೆ. ಸೆಪ್ಟೆಂಬರ್ 3 ಬಸ್ ನಿಲ್ದಾಣದ ಬಳಿ ಅವರು ನಡೆದು ಹೋಗುತ್ತಿದ್ದಾಗ ತೆಂಗನಗೇರಿಯ ಪ್ರಕಾಶ ನಾಗೇಶ ಗುನಗಾ (55) ಎಂಬಾತರು ಅವರನ್ನು ಅಡ್ಡ ಹಾಕಿ ಬೈದಿದ್ದಾರೆ. ನಂತರ ಅವರ ಮಕ್ಕಳಾದ ವಿನಾಯಕ ಪ್ರಶಾಂತ ಗುನಗಾ (28), ಅಭಿಷೇಕ ಪ್ರಶಾಂತ ಗುನಗಾ (26) ಎಂಬಾತರನ್ನು ಅಲ್ಲಿಗೆ ಕರೆಯಿಸಿಕೊಂಡಿದ್ದಾರೆ.
ಈ ಮೂವರು ಸೇರಿ ರವಿರಾಜ ಗುನಗಾ ಅವರನ್ನು ಕಾಲಿನಿಂದ ತುಳಿದಿದ್ದಾರೆ. ಈ ವಿಷಯ ಅರಿತ ರವಿರಾಜ ಗುನಗಾ ಅವರ ಸಹೋದರರಾದ ಪ್ರವೀಣ ಗೋಪಾಲ ಗುನಗಾ ಹಾಗೂ ಪ್ರದೀಪ ಗೋಪಾಲ ಗುನಗಾ ಅಲ್ಲಿ ಆಗಮಿಸಿ ಹಲ್ಲೆ ತಪ್ಪಿಸಲು ಪ್ರಯತ್ನಿಸಿದರು. ಆಗ, ಮೂವರು ಆರೋಪಿತರ ಪೈಕಿ ಪ್ರಶಾಂತ ಗುನಗಾ ಪ್ರವೀಣ ಗುನಗಾ ಅವರ ಮರ್ಮಾಂಗಕ್ಕೆ ಬಾಯಿ ಹಾಕಿ ಹಲ್ಲಿನಿಂದ ಕಚ್ಚಿದ್ದಾರೆ. ಇದನ್ನು ತಪ್ಪಿಸಲು ಹೋದ ರವಿರಾಜ ಗುನಗಾ ಅವರ ಕೈ’ಗೂ ಕಚ್ಚಿ ಗಾಯಗೊಳಿಸಿದ್ದಾರೆ.
ಈ ಗಲಾಟೆ ನೋಡಿ ಜನ ಸೇರಿದ್ದು, ಜನರನ್ನು ನೋಡಿದ ಮೂವರು ಅಲ್ಲಿಂದ ಪರಾರಿಯಾದರು. ಹೋಗುವಾಗ ಮೂವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.




