ಸಿದ್ದಾಪುರ: ಬಳ್ಪಟ್ಟೆಯ ಕಿರಾಣಿ ಅಂಗಡಿಯಲ್ಲಿ ಸರಾಯಿ ಮಾಡುತ್ತಿದ್ದ ಸುಧಾಕರ ದ್ಯಾವಾ ನಾಯ್ಕ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಸೆ 20ರಂದು ಪಿಐ ಕುಮಾರ ಕೆ ಬಳ್ಪಟ್ಟೆಗೆ ಹೋದಾಗ ಸುಧಾಕರ್ ನಾಯ್ಕ ಅಲ್ಲಿ ಸರಾಯಿ ಮಾರಾಟ ಮಾಡುತ್ತಿದ್ದ. ಆಗ ಪೊಲೀಸರು `ಸರಾಯಿ ಮಾರಾಟಕ್ಕೆ ಅನುಮತಿ ಇದೆಯಾ?’ ಎಂದು ಪ್ರಶ್ನಿಸಿದರು. ಆತ `ಇಲ್ಲ’ ಎಂದು ತಲೆ ಅಲ್ಲಾಡಿಸಿ, ಮಾತನಾಡಲು ತಡವರಿಸಿದ. ಕೂಡಲೇ ಅಂಗಡಿ ಒಳಗೆ ನುಗ್ಗಿದ ಪೊಲೀಸರು ಅಲ್ಲಿ ದಾಸ್ತಾನು ಇರಿಸಿದ್ದ ಸರಾಯಿ ಟ್ರೆಟ್ರಾಪ್ಯಾಕೇಟ್’ಗಳನ್ನು ವಶಕ್ಕೆ ಪಡೆದರು.
ಅಕ್ಕುಂಜಿಯಲ್ಲಿಯೂ ದಾಳಿ
ಇದಾದ ನಂತರ ಅಕ್ಕುಂಜಿಗೆ ತೆರಳಿದ ಪಿಐ ಕುಮಾರ ಅವರ ತಂಡ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರನ್ನು ಓಡಿಸಿದರು. ಅಲ್ಲಿನ ಸೋಮಶೇಖರ ಬಸಯ್ಯ ನಾಯ್ಕ ಎಂಬಾತ ಜನ ಓಡಾಡುವ ಸ್ಥಳದಲ್ಲಿ ಸರಾಯಿ ಸರಬರಾಜು ಮಾಡುತ್ತಿದ್ದು, ಅಲ್ಲಿಯೇ ಕುಳಿತು ಕುಡಿಯಲು ಅವಕಾಶ ನೀಡಿದ್ದ. ಅಲ್ಲಿದ್ದ ಸರಾಯಿ ಬಾಟಲಿಗಳನ್ನು ಸಹ ಪೊಲೀಸರು ವಶಕ್ಕೆ ಪಡೆದರು.




