6
ಭಟ್ಕಳದ ಚೆಲುವಿಗೆ ಬೆಂಗಳೂರಿಗರು ಫೀದಾ!

ಬೆಂಗಳೂರಿನ ಕಲಾ ನವೀನ್ ಫೀಲಂ ಅಕಾಡೆಮಿ ಆಯೋಜಿಸಿದ `ಮಿಸ್ ಗ್ರಾಂಡ್ ಸೌತ್ ಇಂಡಿಯಾ 2024-25 ಫ್ಯಾಷನ್ ಶೋ’ ಸ್ಪರ್ಧೆಯಲ್ಲಿ ಭಟ್ಕಳದ ಸಂಜನಾ ನಾಯ್ಕ ಪ್ರಥಮ ಸ್ಥಾನ ಪಡೆದಿದ್ದಾರೆ. ಆ ಮೂಲಕ ಸ್ಪರ್ಧೆಯ ಚಾಂಪಿಯನ್‌ಶಿಫ್’ನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಬೆoಗಳೂರಿನ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ…

ಹಂದಿ ಕಾಟಕ್ಕೆ ನಲುಗಿದ ಅಡಿಕೆ ತೋಟ

ಉತ್ತರ ಕನ್ನಡ ಜಿಲ್ಲೆಯಲ್ಲಿ ವನ್ಯಜೀವಿಗಳ ಕಾಟ ವಿಪರೀತವಾಗಿದೆ. ಅಡಿಕೆ, ಬಾಳೆ, ತೆಂಗು ಸೇರಿ ಇಲ್ಲಿನ ವಾಣಿಜ್ಯ ಬೆಳೆಗಳ ಜೊತೆ ಆಹಾರ ಬೆಳೆಗಳನ್ನು ಅವು ನಾಶ ಮಾಡುತ್ತಿವೆ. ಸಿದ್ದಾಪುರದ ಹರಗಿಯಲ್ಲಿ ಹಂದಿ ದಾಳಿ ನಡೆಸಿದ್ದು, ಪೂರ್ತಿ ಅಡಿಕೆ ತೋಟವನ್ನು ಧ್ವಂಸ ಮಾಡಿದೆ. ಹರಗಿಯ…

ಮೀನುಗಾರಿಗೆ ಮುಗಿಸಿ ಬಂದವನಿಗೆ ಹೃದಯಘಾತ!

ಮೀನುಗಾರಿಕೆಗೆ ತೆರಳಿ ಮನೆಗೆ ಮರಳಿದ ಅಶೋಕ ಅಂಬಿಗ ಆಯಾಸಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಹೃದಯ ಆಘಾತದಿಂದ ಸಾವನಪ್ಪಿದ್ದಾರೆ. ಹೊನ್ನಾವರ ಕಾಸರಕೋಡು ತೊಪ್ಪಲಕೇರಿಯ ಅಶೋಕ ಅಂಬಿಗೆ ಅವರು ಹೊಳೆಬದಿಕೇರಿಯ ಹೊಸಪಟ್ಟಣದಲ್ಲಿ ವಾಸವಾಗಿದ್ದರು. ಫೆ 15ರಂದು ಬೆಳಗ್ಗೆ ಬೇಗ ಎದ್ದು ಅವರು ಮೀನುಗಾರಿಕೆಗೆ ಹೋಗಿದ್ದರು.…

ಅನುಭವ ಟೂರಿಸ್ಟ್’ಗೆ ಕೆಟ್ಟ ಅನುಭವ!

ಅನುಭವ ಟೂರಿಸ್ಟ್ ಮೂಲಕ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ರೆಸಾರ್ಟಿನಲ್ಲಿ ತಂಗಿದ್ದ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದು, ಶಿರಸಿ ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೇ ಸಾವನಪ್ಪಿದ್ದಾರೆ. ಮಹಾರಾಷ್ಟದ ಪ್ರದೀಪ ಪ್ರಧಾನ ಎಂಬ 70 ವರ್ಷದ ವೃದ್ಧರಿಗೆ ಎರಡು ಬಾರಿ ಹೃದಯ ಸಮಸ್ಯೆ ಉಂಟಾಗಿತ್ತು. ಎಂಜಿಯೋಗ್ರಾಫಿ…

ಗೌರಿ ಶ್ರಮಕ್ಕೆ ಒಲಿದ ಗಂಗೆ!

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಬಮೇಳಕ್ಕೆ ತೆರಳಿ ಪವಿತ್ರ ಗಂಗಾ ನದಿ ಸ್ನಾನ ಮಾಡಬೇಕು ಎಂದುಕೊoಡಿದ್ದ ಶಿರಸಿ ಗಣೇಶ ನಗರದ ಗೌರಿ ನಾಯ್ಕ ಅವರಿಗೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಗಂಗೆಯನ್ನು ಪೂಜಿಸಿ ಅವರು ಮನೆ ಆವರಣದಲ್ಲಿ ಬಾವಿ ತೋಡಿದ್ದು, ಎರಡುವರೆ ತಿಂಗಳ ಒಂಟಿ ಜೀವದ…

ಉಳುವಿ ಜಾತ್ರೆಯಲ್ಲಿ ಮಾರಾಮಾರಿ!

ಉಳುವಿ ಜಾತ್ರೆಗೆ ಬಂದಿದ್ದ ಭಕ್ತರ ಮೇಲೆ ಇನ್ನೊಂದು ಭಕ್ತರ ಗುಂಪು ದಾಳಿ ಮಾಡಿದೆ. ಈ ವೇಳೆ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಎಂಟು ಜನ ಉಳುವಿ ಜಾತ್ರೆಗೆ ಬಂದಿದ್ದರು. ಅವರು ಕುಳಗಿ ರಸ್ತೆ ಮೂಲಕ ಹಿಂತಿರುಗುತ್ತಿದ್ದರು.…

ಗುತ್ತಿಗೆ ಕಂಪನಿಗೆ ಕೈಗಾ ಹೊಣೆ!

ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಘಟಕದಲ್ಲಿ 5 ಹಾಗೂ 6ನೇ ಘಟಕ ಸ್ಥಾಪನೆ ಕೆಲಸಗಳು ಜೋರಾಗಿದೆ. `ಮೇಘಾ ಇಂಜಿನಿಯರಿoಗ್ ಇನ್ಪಾಸ್ಟಕ್ಚರ್ ಕಂಪನಿ’ ಈ ಕೆಲಸ ನಿರ್ವಹಿಸುವ ಗುತ್ತಿಗೆ ಪಡೆದಿದೆ. ಕೈಗಾದಲ್ಲಿ ಸದ್ಯ ನಾಲ್ಕು ಘಟಕಗಳ ಮೂಲಕ ವಿದ್ಯುತ್ ಉತ್ಪಾದನೆ…

`ಹೊಸ ಅರಣ್ಯ ನೀತಿ ಜಾರಿಗೆ ಆಗ್ರಹ’

`ಅರಣ್ಯ ಅತಿಕ್ರಮಣದಾರರ ಸಮಸ್ಯೆ ಪರಿಹಾರಕ್ಕೆ ಹೊಸ ಅರಣ್ಯ ನೀತಿ ಜಾರಿಗೆ ಬರಬೇಕು’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ. ಫೆ 15ರಂದು ಹೊನ್ನಾವರದ ಮೂಡಗಣಪತಿದ ದೇವಸ್ಥಾನದ ಸಂಭಾಗಣದಲ್ಲಿ ರಾಜ್ಯ ಮಟ್ಟದ ಅರಣ್ಯವಾಸಿಗಳಿಗೆ ಕಾನೂನು…

ಭೂಮಿ ಹಕ್ಕಿನ ವಿಷಯ: ಮಾವ-ಅಳಿಯನ ನಡುವೆ ಹೊಡೆದಾಟ!

ಪೂರ್ವಜರಿಂದ ಬಂದ ಭೂಮಿ ಹಕ್ಕಿನ ವಿಷಯವಾಗಿ ಮಾವ-ಅಳಿಯನ ನಡುವೆ ಹೊಡೆದಾಟ ನಡೆದಿದೆ. ಹೋಡೆದಾಟ ತಪ್ಪಿಸಲು ಬಂದ ಮಹಿಳೆಗೆ ಸಹ ಬೈಗುಳದ ಸುರುಮಳೆ ಸಿಕ್ಕಿದೆ. ಹೊನ್ನಾವರ ತಾಲೂಕಿನ ಮೇಲಿನ ಇಡಗುಂಜಿಯ ಕುಳಿಮನೆಯಲ್ಲಿ ಸ್ಕೂಬಾ ಇನ್ಸಪೆಕ್ಟರ್ ವಿನೋದಕುಮಾರ ವಾಸವಾಗಿದ್ದಾರೆ. ಅವರ ತಮ್ಮ ಉದಯಕುಮಾರ ಹೆಸರಿನಲ್ಲಿ…

ಅಪಘಾತ | ಆ ಕಾರಿನಲ್ಲಿದ್ದವ ಒಬ್ಬ.. ಬೈಕಿನಲ್ಲಿದ್ದವರು ನಾಲ್ಕು ಜನ!

ಹೊಸದಾಗಿ ಬೈಕ್ ಖರೀದಿಸಿದ ಖುಷಿಯಲ್ಲಿದ್ದ ಕೃಷ್ಣ ಗೌಡ ಆ ಬೈಕಿನಲ್ಲಿ ತಮ್ಮೊಂದಿಗೆ ಮತ್ತೆ ಮೂವರನ್ನು ಕೂರಿಸಿಕೊಂಡು ಹೊರಟಿದ್ದರು. ಜೋರಾಗಿ ಕಾರು ಓಡಿಸಿಕೊಂಡು ಬಂದ ವೆಂಕಟೇಶ ಶೇರಿಗಾರ್ ಆ ಬೈಕಿಗೆ ಡಿಕ್ಕಿ ಹೊಡೆದಿದ್ದರಿಂದ ಬೈಕಿನಲ್ಲಿದ್ದ ನಾಲ್ವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು! ಅoಕೋಲಾ…

You cannot copy content of this page