6
ರೈಲು ಬಿಡುವ ಯೋಜನೆ: ಕಡ್ಡಿ ಮಾಡುವವರ ವಿರುದ್ಧ ಕಿಡಿ!

ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಅಡಿಗಲ್ಲು ಹಾಕಿದ್ದ ಹುಬ್ಬಳ್ಳಿ – ಅಂಕೋಲಾ ರೈಲ್ವೇ ಯೋಜನೆ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ವರ್ಷ ಸಮೀಪಿಸಿದರೂ ಪೂರ್ಣಗೊಂಡಿಲ್ಲ! 1999ರಲ್ಲಿ ಪ್ರಧಾನಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಹುಬ್ಬಳ್ಳಿ-ಅಂಕೋಲಾ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಅದಾದ…

ಬೀದಿ ಬೀದಿಯಲ್ಲಿಯೂ ಅಕ್ರಮ ಮಾರುಕಟ್ಟೆ: ಅವಘಡ ನಡೆದರೂ ಎಚ್ಚೆತ್ತುಕೊಳ್ಳದ ಆಡಳಿತ!

ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಅಂಚಿನ ದೋಸೆ ಕ್ಯಾಂಟಿನ್’ಗೆ ಈಚೆಗೆ ಈರುಳ್ಳಿ ಲಾರಿ ನುಗ್ಗಿ ಗ್ಯಾಸ್ ಸಿಲೆಂಡರ್ ಸೋರಿಕೆ ನಡೆದರೂ ಸರ್ಕಾರ ರಸ್ತೆ ಅಂಚಿನ ಪ್ರದೇಶ ಅತಿಕ್ರಮಿಸಿ ವ್ಯಾಪಾರ ನಡೆಸುವುದನ್ನು ನಿಯಂತ್ರಿಸಿಲ್ಲ. ಪಾದಚಾರಿ ಮಾರ್ಗ ಅತಿಕ್ರಮಣ ಸೇರಿ ಪದೇ ಪದೇ ನಿಯಮ ಉಲ್ಲಂಘಿಸುವವರಿ0ದ…

ಚಿಗಳ್ಳಿ ದೀಪ | ಈ ಸುದ್ದಿ ನಂಬುವುದಾದರೆ ನಂಬಿ.. ಇಲ್ಲವಾದರೆ ಮರೆತುಬಿಡಿ!

ಎಣ್ಣೆ ಹಾಗೂ ಬತ್ತಿ ಇಲ್ಲದೇ ಕಳೆದ 45 ವರ್ಷಗಳಿಂದ ಉರಿಯುತ್ತಿದ್ದ ಚಿಗಳ್ಳಿ ದೀಪ ಬುಧವಾರ ಆರಿದ ಬಗ್ಗೆ ಊಹಾಪೋಹಗಳು ದಟ್ಟವಾಗಿದೆ. ಆದರೆ, ಈ ವಿಷಯವನ್ನು ಅಲ್ಲಿನವರು ಈವರೆಗೂ ಅಧಿಕೃತಗೊಳಿಸಿಲ್ಲ. ಚಿಗಳ್ಳಿಯಲ್ಲಿ ಮೂರು ದೀಪಗಳು ನಿರಂತರವಾಗಿ ಉರಿಯುತ್ತಿದ್ದ ಪ್ರತೀತಿಯಿದ್ದು, ಇದನ್ನು ನೋಡಲು ದೇಶ-ವಿದೇಶಗಳಿಂದ…

ಚಕ್ರಬಡ್ಡಿ: ದಾಂಡೇಲಿ ದಾಂಡಿಗರಿಬ್ಬರಿಗೆ ಜೈಲು!

ಅನಧಿಕೃತವಾಗಿ ಸಾಲ ನೀಡಿ ಬಡ್ಡಿ, ಚಕ್ರಬಡ್ಡಿ ಜೊತೆ ಮೀಟರ್ ಬಡ್ಡಿ ವಸೂಲಿ ಮಾಡುತ್ತಿದ್ದ ಇಬ್ಬರನ್ನು ದಾಂಡೇಲಿ ಪೊಲೀಸರು ಬಂಧಿಸಿದ್ದಾರೆ. ಗಾಂಧಿನಗರದ ಕಂಜರಬಾಟಿನ ಕಿಶನ ಸುಭಾಸ ಕಂಜರಬಾಟ ಹಾಗೂ ವಿನೋದ ಸುರೇಶ ಮಿನೇಕರ ಬಡ್ಡಿ ದಂಧೆ ನಡೆಸುತ್ತಿರುವ ದೂರು ಬಂದ ಹಿನ್ನಲೆ ಪೊಲೀಸರು…

ರಸ್ತೆ ಅಗೆದು ಪೈಪ್ ಅಳವಡಿಸಿದ ಗುತ್ತಿಗೆದಾರ: ಸಾಮಾನ್ಯ ಸಭೆಯ ಚರ್ಚೆಗೆ ಸಿಕ್ಕಿಲ್ಲ ತೃಪ್ತಿಕರ ಉತ್ತರ!

ಶಿರಸಿಯಲ್ಲಿ ನೀರಿನ ಪೈಪ್ ಅಳವಡಿಸಲು ವಿವಿಧ ವಾರ್ಡಿನ ರಸ್ತೆ ಅಗೆದ ಬಗ್ಗೆ ನಗರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬುಧವಾರ ನಡೆದ ಸಭೆಯಲ್ಲಿ ಈ ವಿಷಯವಾಗಿ ಭಾರೀ ಪ್ರಮಾಣದ ಚರ್ಚೆ ನಡೆದಿದ್ದು, ಅಧಿಕಾರಿಗಳು ಕೊನೆಗೂ ಸೂಕ್ತ ಉತ್ತರ ನೀಡಲಿಲ್ಲ. ನಗರಸಭೆ ಸದಸ್ಯ ಫ್ರಾನ್ಸಿಸ್…

ಆನೆ ದಾಳಿಗೆ ಬಲಿಯಾದ ಗೋಕರ್ಣ ಪ್ರವಾಸಿಗ!

ಮೂರು ತಿಂಗಳ ಗೋಕರ್ಣ ವಾಸ ಮುಗಿಸಿ ಮೂರು ದಿನದ ಹಿಂದೆ ತಮಿಳುನಾಡಿಗೆ ತೆರಳಿದ್ದ ಜರ್ಮನಿಯ ಮೈಕಲ್ ತಮ್ಮ 77ನೇ ವಯಸ್ಸಿನಲ್ಲಿ ಒಂಟಿ ಸಲಗ ದಾಳಿಯಿಂದ ಸಾವನಪ್ಪದ್ದಾರೆ. ಕಳೆದ 25 ವರ್ಷಗಳಿಂದ ಮೈಕಲ್ ಗೋಕರ್ಣಕ್ಕೆ ಬರುತ್ತಿದ್ದರು. 3-4 ತಿಂಗಳು ಇಲ್ಲಿ ಉಳಿದು ತಮ್ಮ…

ಟಾಕ್ಟರ್ ಏರಿದ ಹಿಟಾಚಿ ಪಲ್ಟಿ: ಆಪರೇಟರ್ ಸಾವು!

ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಟಾಕ್ಟರ್ ಮೂಲಕ ಸಾಗಿಸುತ್ತಿದ್ದ ಹಿಟಾಚಿ ಟಾಕ್ಟರ್‌ಸಹಿತ ಪಲ್ಟಿಯಾಗಿದ್ದು, ಹಿಟಾಚಿ ಆಪರೇಟರ್ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಹಳಿಯಾಳ ಯಲ್ಲಾಪುರ ರಸ್ತೆಯಲ್ಲಿ ಫೆಬ್ರವರಿ 4ರಂದು ಈ ಅಪಘಾತ ನಡೆದಿದೆ. ತಾಟವಾಳ ಸೇತುವೆಗಿಂತ 2ಕಿಮೀ ಹಿಂದೆ ಟಾಕ್ಟರ್ ಜೊತೆ ಹಿಟಾಚಿ ಪಲ್ಟಿಯಾಗಿದೆ.…

ಅಪಾಯ ತಡೆಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ!

`ಶಿರೂರಿನಲ್ಲಿ ಮತ್ತೆ ಗುಡ್ಡ ಕುಸಿಯದಂತೆ ಎಚ್ಚರಿಕೆವಹಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಹೆದ್ದಾರಿ ಪ್ರಾಧಿಕಾರದವರಿಗೆ ಸೂಚಿಸಿದ್ದಾರೆ. ಇದರೊಂದಿಗೆ ಯಲ್ಲಾಪುರದ ಅರಬೈಲ್ ಬಳಿ ನಡೆದ ಭೀಕರ ಅಪಘಾತವನ್ನು ನೆನಪಿಸಿಕೊಂಡ ಅವರು `ಹೆದ್ದಾರಿಯ ಉದ್ದಕ್ಕೂ ಮೊಬೈಲ್ ನೆಟ್‌ವರ್ಕ ಸಿಗುವಂತೆಯೂ ನೋಡಿಕೊಳ್ಳಬೇಕು’ ಎಂದು ಬಿಎಸ್‌ಎನ್‌ಎಲ್…

ಜನಪ್ರತಿನಿಧಿಗಳಿಲ್ಲದ ಸಾಮಾನ್ಯ ಸಭೆ: ಬರೀ ಸಪ್ಪೆ ಸಪ್ಪೆ!

ತಾಲೂಕು ಪಂಚಾಯತಗೆ ಈವರೆಗೂ ಜನಪ್ರತಿನಿಧಿಗಳ ಆಯ್ಕೆ ನಡೆಯದ ಕಾರಣ ಅಧಿಕಾರಿಗಳ ಅಧ್ಯಕ್ಷತೆಯಲ್ಲಿಯೇ ಸಾಮಾನ್ಯ ಸಭೆ ನಡೆಯುತ್ತಿದೆ. ಹೀಗಾಗಿ ಈ ಸಭೆಯಲ್ಲಿ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಬುಧವಾರ ಯಲ್ಲಾಪುರ ತಾಲೂಕು ಪಂಚಾಯತ ಸಭಾ ಭವನದಲ್ಲಿ ನಡೆದ ಸಭೆಯಲ್ಲಿಯೂ ಯಾವುದೇ ವಿಶೇಷತೆಗಳಿರಲಿಲ್ಲ! ಎಲ್ಲಾ…

ಅಭಿಮಾನಿಗಳ ಸಿಟ್ಟಿಗೆ ಅನಂತಮೂರ್ತಿ ಭಸ್ಮ!

ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಶಾಸಕರ ಬೆಂಬಲಿಗರು ಅನಂತಮೂರ್ತಿ ಹೆಗಡೆ ಅವರ ಪ್ರತಿಕೃತಿ ಹಾಗೂ ಫೋಟೋಗಳಿಗೆ ಬೆಂಕಿ ಹಚ್ಚಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಪ್ರತಿಭಟನೆಯಲ್ಲಿ…

You cannot copy content of this page