ಯಾವ ಹೋಂ ಸ್ಟೇ ಅಕ್ರಮ.. ಯಾವ ರೆಸಾರ್ಟ ಸಕ್ರಮ? ಜಿಲ್ಲಾಡಳಿತಕ್ಕೆ ಸಲ್ಲಿಕೆ ಆಗಲಿದೆ ಈ ವರದಿ!
ಕಾರವಾರ: `ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅನಧಿಕೃತ ಹೋಂ ಸ್ಟೇ ಕುರಿತು ವಾರದ ಒಳಗೆ ಸಮಗ್ರ ವರದಿ ಸಲ್ಲಿಸಿ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷಿö್ಮÃಪ್ರಿಯಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಚಟುವಟಿಕೆಗಳ ಕುರಿತ ಸಭೆಯಲ್ಲಿ…
ಹೊಡೆದಾಟದ ವೇದಿಕೆಯಾದ ಜಾತಿ ಮೀಟಿಂಗು!
ಕಾರವಾರ: ಕೋಡಿಬೀರ ದೇವಾಲಯದಲ್ಲಿ ಜಾತಿ ಸಭೆಗೆ ಹಾಜರಾಗಿದ್ದ ದಿಗಂಬರ ಹರಿಕಂತ್ರ ಅವರ ಮೇಲೆ ನಾಲ್ವರು ದಬ್ಬಾಳಿಕೆ ನಡೆಸಿದ್ದಾರೆ. ದೌರ್ಜನ್ಯಕ್ಕೆ ನಲುಗಿದ ದಿಗಂಬರ ಹರಿಕಂತ್ರ ಆಸ್ಪತ್ರೆ ಸೇರಿದ್ದಾರೆ. ಗುನಗಿವಾಡದ ಗಿಂಡಿ ದೇವಸ್ಥಾನದ ಬಳಿ ವಾಸವಾಗಿರುವ ದಿಗಂಬರ ಹರಿಕಂತ್ರ ಅವರಿಗೆ ಮೀನುಗಾರಿಕೆ ಮುಖ್ಯ ಕಸುಬು.…
ಮಾತ್ರೆ ತಿನ್ನದ ರೋಗಿ ಎದೆನೋವಿನಿಂದ ಸಾವು!
ಸಿದ್ದಾಪುರ: ಎರಡು ತಿಂಗಳಿನಿ0ದ ಎದೆನೋವಿನ ಮಾತ್ರೆ ಸೇವಿಸುತ್ತಿದ್ದ ಈಶ್ವರ ಹಸ್ಲರ್ ಐದು ದಿನ ಮಾತ್ರೆ ತಿನ್ನಲು ಮರೆತಿದ್ದು, ಗುರುವಾರ ಆರೋಗ್ಯದಲ್ಲಿನ ಏರುಪೇರಿನಿಂದ ಅವರು ಸಾವನಪ್ಪಿದರು. ಸಿದ್ದಾಪುರ ಕ್ಯಾದಗಿ ಹೂವಿನಮನೆಯ ಈಶ್ವರ ಹಸ್ಲರ್ (35) ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಎರಡು…
ಹೋರಾಟಗಾರನ ಬದುಕಿಗೆ ಇಲ್ಲ ನಿವೃತ್ತಿ!
ಕುಮಟಾ: ಜನಪರ ಕಾಳಜಿ, ಸೌಮ್ಯ ಸ್ವಭಾವದ ಉಮಾಕಾಂತ ಹೊಸ್ಕಟ್ಟ ಅವರು ಮೀನುಗಾರ ಮುಖಂಡರಾಗಿದ್ದರೂ ಕಾರ್ಮಿಕರಂತೆ ದುಡಿಯುತ್ತಾರೆ. ಸದಾ ಮೀನುಗಾರರ ಪರವಾಗಿ ಚಿಂತಿಸುವ ಅವರಿಗೆ ಮೀನುಗಾರ ಸಮುದಾಯದವರೆಲ್ಲ ಸೇರಿ ತದಡಿ ಮೀನುಗಾರರ ಸಹಕಾರಿ ಸಂಘದ ಚುನಾವಣೆಯಲ್ಲಿ ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಪ್ರಸ್ತುತ ಸಂಘದ…
ಭ್ರಷ್ಟರ ಬಗ್ಗೆ ಇಲ್ಲಿ ದೂರು ಕೊಡಿ!
ಶಿರಸಿ: ಭ್ರಷ್ಟಾಚಾರ, ಕಳಪೆ ಕಾಮಗಾರಿ, ಸರ್ಕಾರಿ ಅಧಿಕಾರಿ-ಸಿಬ್ಬಂದಿ ಕರ್ತವ್ಯ ಲೋಪದ ದೂರು ಆಲಿಸಲು ಜನವರಿ 16ರಂದು ಶಿರಸಿಗೆ ಲೋಕಾಯುಕ್ತ ಅಧಿಕಾರಿಗಳು ಆಗಮಿಸುತ್ತಿದ್ದಾರೆ. ಅಂದು ಬೆಳಗ್ಗೆ 11 ಗಂಟೆಯಿoದ ಮಧ್ಯಾಹ್ನ 1 ಗಂಟೆಯವರೆಗೆ ಲೋಕಾಯುಕ್ತ ಅಧಿಕಾರಿಗಳು ತಹಶೀಲ್ದಾರ್ ಕಚೇರಿಯಲ್ಲಿರಲಿದ್ದಾರೆ. ಸಾರ್ವಜನಿಕ ಕೆಲಸ ಮಾಡಿಕೊಡಲು…
ಅರಣ್ಯ ಹಕ್ಕು | ಜ 13ಕ್ಕೆ ಕುಮಟಾದಲ್ಲಿ ಸಭೆ
ಕುಮಟಾ: ಅಸ್ತಿತ್ವದಲ್ಲಿರದ ಸಮಿತಿಯಿಂದ ಅರಣ್ಯ ಅತಿಕ್ರಮಣದಾರರಿಗೆ ದಾಖಲೆ ಒದಗಿಸುವಂತೆ ಸೂಚನಾ ಪತ್ರ ನೀಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಜ 13ರಂದು ಕುಮಟಾದಲ್ಲಿ ಸಭೆ ನಡೆಯಲಿದೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಮಂಜುನಾಥ ಮರಾಠಿ ಅಧ್ಯಕ್ಷತೆಯಲ್ಲಿ ಮಾಸ್ತಿಕಟ್ಟಾ ಸಂಭಾಗಣದಲ್ಲಿ ಜರುಗಿದ…
ಪರಿಸರ ಪಾಠ | ಶಾಲಾ ಮಕ್ಕಳಿಗೆ ಖುಷಿ ನೀಡಿದ ಗುಡ್ಡದ ಪ್ರವಾಸ!
ಕಾರವಾರ: ಸಹ್ಯಾದ್ರಿ ಇಕೋ ಕ್ಲಬ್ ಚಟುವಟಿಕೆಯ ಭಾಗವಾಗಿ ನಗೆ ಶಾಲೆಯ ಮಕ್ಕಳು ಸಿದ್ಧರಾಮೇಶ್ವರ ದೇವಸ್ಥಾನದ ತಪ್ಪಲಿನಲ್ಲಿರುವ ನದಿದಡದಲ್ಲಿ ಕುಳಿತು ವಿಹರಿಸಿದರು. ಅಲ್ಲಿನ ಅರಣ್ಯ, ಪಕ್ಷಿ ಸಂಕುಲ, ಜಲಚರಗಳ ಬಗ್ಗೆ ಅಧ್ಯಯನ ನಡೆಸಿದರು. ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವುದಕ್ಕಾಗಿ ಶಾಲೆಯ ಶಿಕ್ಷಕರು ಹೊರ…
ಗಂಟೆ ಗಣಪತಿ | ದೇಗುಲ ಸನ್ನಿಧಿಯಲ್ಲಿ ಬಗೆ ಬಗೆಯ ಕಾರ್ಯಕ್ರಮ!
ಯಲ್ಲಾಪುರ: ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ಫೆ 28ರಿಂದ ಮಾರ್ಚ್ 3ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದೇವಾಲಯದ ಅಷ್ಠಬಂಧ, ಶಿಖರ ಪ್ರತಿಷ್ಠೆ, ಧ್ವಜ ಪ್ರತಿಷ್ಠೆ, ನೂತನ ದೇವಾಲಯ, ಯಾಗಶಾಲೆ ಮತ್ತು ಗುರುಭವನಗಳ ಲೋಕಾರ್ಪಣೆ ಈ ಅವಧಿಯಲ್ಲಿ ನಡೆಯಲಿದೆ. ಹಲವು ಧಾರ್ಮಿಕ ಹಾಗೂ…
ವಿಪತ್ತು ನಿರ್ವಹಣಾ ಸಭೆ | ಮುಂಜಾಗೃತಾ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
ಕಾರವಾರ: `ಮಳೆಗಾಲದ ವೇಳೆ ನೌಕಾನೆಲೆ ಪ್ರದೇಶದಿಂದ ಕಾರವಾರದ ಚಂಡಿಯಾ, ಅರ್ಗಾ, ಸೇರಿದಂತೆ ಹಲವು ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗದAತೆ ಈಗಿನಿಂದಲೇ ಅಗತ್ಯ ಕ್ರಮ ಜರುಗಿಸಿ’ ಎಂದು ನೌಕಾನೆಲೆ ಹಾಗೂ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದವರಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು. ಗುರುವಾರ…
ಅರಣ್ಯ ಅತಿಕ್ರಮಣ | ಸಿಬ್ಬಂದಿ ದೌರ್ಜನ್ಯದ ವಿರುದ್ಧ ದೂರು ಬಂದರೆ ಕ್ರಮ
ಶಿರಸಿ: `ಅರಣ್ಯಾಧಿಕಾರಿಗಳ ದೌರ್ಜನ್ಯದ ಕುರಿತಾದ ದೂರುಗಳ ಸಮಗ್ರ ವಿಚಾರಣೆ ನಡೆಸುವುದರ ಜೊತೆ ಹೊಸ ಅತಿಕ್ರಮಣವನ್ನು ನಿಯಂತ್ರಿಸಲಾಗುತ್ತದೆ’ ಎಂದು ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಹೇಳಿದ್ದಾರೆ. ಗುರುವಾರ ಶಿರಸಿಯ ಗಾನಿಗ ಕಲ್ಯಾಣ ಮಂಟಪದಲ್ಲಿ `ಅರಣ್ಯ ಅಧಿಕಾರಿಗಳೊಂದಿಗೆ ಅರಣ್ಯವಾಸಿಗಳ ಸಭೆ’ಯಲ್ಲಿ ಮಾತನಾಡಿದ ಅವರು `ಅರಣ್ಯ…








