6
ಸಾಗವಾನಿ ಕಡಿದು ಜೈಲು ಸೇರಿದ!

ಶಿರಸಿ: ಮರಗುಂಡಿ ಗ್ರಾಮದಲ್ಲಿ ಸಾಗವಾನಿ ಮರ ಕಡಿದ ಅನಿಲ್ ಗೌಡರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಆತನಿಂದ 13 ಮರದ ತುಂಡು ಹಾಗೂ ಇನ್ನಿತರ ಜಲಾವುಗಳನ್ನು ವಶಕ್ಕೆ ಪಡೆದಿದ್ದಾರೆ. ಅನಿಲ ಗೌಡ ಮರ ಕಡಿತ ನಡೆಸಿರುವ ಬಗ್ಗೆ ಬನವಾಸಿ ವಲಯ ಅರಣ್ಯಾಧಿಕಾರಿ ಭವ್ಯ…

ಲಯನ್ಸ ಸೇವೆ ಸ್ಮರಣೀಯ: ವಿದ್ಯಾರ್ಥಿಗಳ ಪಾದಕ್ಕೆ ಶೂ ಭಾಗ್ಯ!

ಕಾರವಾರ: ಅಸ್ನೋಟಿ ವಿದ್ಯಾ ಮಂದಿರದಲ್ಲಿರುವ ಮಕ್ಕಳು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಅವರು ಬರಿಗಾಲಿನಲ್ಲಿ ಓಡಾಡುವುದನ್ನು ನೋಡಿದ ಲಯನ್ಸ್ ಕ್ಲಬ್ ಮಕ್ಕಳ ಪಾದಕ್ಕೆ ಹೊಂದುವ ಪಾದರಕ್ಷೆ ಕೊಡಿಸಿದೆ. ಲಯನ್ಸ ಕ್ಲಬ್ಬಿನ ಅಧ್ಯಕ್ಷ ವಿನಯಾ ನಾಯ್ಕ ಅವರು ವಿದ್ಯಾರ್ಥಿಗಳ ಬಳಕೆಗೆ ಬೂಟುಗಳನ್ನು ವಿತರಿಸಿದರು. ನಂತರ ಮಾತನಾಡಿದ…

ಒಂದು ಗಿಡಕ್ಕೆ 1197ರೂ ಖರ್ಚು.. ಅದಾಗಿಯೂ ಗಿಡವೂ ಇಲ್ಲ.. ಗುಂಡಿಯೂ ಇಲ್ಲ!

ಯಲ್ಲಾಪುರ: ತೊಟ್ಟಿಲಗುಂಡಿಯಿoದ ಹೊಳೆನಂದಿಕಟ್ಟಾವರೆಗಿನ ಮೂರು ಕಿಮೀ ರಸ್ತೆ ಅಂಚಿನ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆದ ಗಿಡಗಳಿಗೂ ಅರಣ್ಯ ಇಲಾಖೆ ಖರ್ಚು ಹಾಕಿದೆ. ಪ್ರತಿ ಗಿಡ ನಾಟಿಗೆ 1197 ರೂ ವೆಚ್ಚ ಮಾಡಿರುವುದಾಗಿ ದಾಖಲೆ ಸೃಷ್ಠಿಸಿ ಸರ್ಕಾರಿ ಬೊಕ್ಕಸಕ್ಕೆ 10.78 ಲಕ್ಷ ರೂಪಾಯಿ ವಂಚಿಸಲಾಗಿದೆ.…

ಮರಳಿ ಮನೆ ಸೇರಿದ ಚಿನ್ನದ ಪರ್ಸು!

ಯಲ್ಲಾಪುರ: ಸವಿತಾ ಭಟ್ಟ ಅವರು ಕಳೆದುಕೊಂಡಿದ್ದ ಚಿನ್ನ ಹಾಗೂ ಹಣವನ್ನು ಪೊಲೀಸರು ಹುಡುಕಿ ಅವರಿಗೆ ಮರಳಿಸಿದ್ದಾರೆ. ಯಲ್ಲಾಪುರ ಇಡಗುಂದಿಯ ಸವಿತಾ ಭಟ್ಟ ಅವರು ಡಿ 24ರಂದು ಯಲ್ಲಾಪುರ ಪಟ್ಟಣಕ್ಕೆ ಬಂದಿದ್ದರು. ಸಂಜೆ ಬಸ್ಸಿಗೆ ಮರಳುವ ಗಡಿಬಿಡಿಯಲ್ಲಿ ಅವರು ತಮ್ಮ ಪರ್ಸನ್ನು ಕಳೆದುಕೊಂಡಿದ್ದರು.…

ಕಂದಕಕ್ಕೆ ಬಿದ್ದ ಸರ್ಕಾರಿ ಬಸ್ಸು!

ಸಿದ್ದಾಪುರ: ಸಾಗರದಿಂದ ಸಿದ್ದಾಪುರಕ್ಕೆ ಬರುತ್ತಿದ್ದ ಸರ್ಕಾರಿ ಬಸ್ಸು ಗೋಳಗೊಡ ಬಳಿ ಕಂದಕಕ್ಕೆ ಬಿದ್ದಿದೆ. 20 ಅಡಿ ಆಳಕ್ಕೆ ಬಸ್ಸು ಬಿದ್ದಿದ್ದು, ಮೂವರು ಗಾಯಗೊಂಡಿದ್ದಾರೆ. ಗುರುವಾರ ಈ ಬಸ್ಸು ಸಾಗರದಿಂದ ಆಡುಕಟ್ಟ ಹಲಗೇರಿ ಮಾರ್ಗವಾಗಿ ಗೋಳಗೋಡ ತಲುಪಿತ್ತು. ಎಲ್ಲವೂ ಸರಿಯಾಗಿದ್ದರೆ ಈ ಬಸ್ಸು…

ಅಂದರ್-ಬಾಹರ್ | ಸರ್ಕಾರಿ ಕಚೇರಿ ಎದುರೇ ನಡೆಯುತ್ತಿದೆ ಜೂಜಾಟ!

ಕುಮಟಾ: ಕಂದಾಯ ಇಲಾಖೆ ಎದುರು ಜೂಜಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗೋಕರ್ಣ ಮೇಲಿನಕೇರಿಯ ರಸ್ತೆ ಬದಿ ಅಂದರ್ ಬಾಹರ್ ಆಡುತ್ತಿದ್ದ ನಾಲ್ವರನ್ನು ಪೊಲೀಸ್ ನಿರೀಕ್ಷಕ ಶಶಿಧರ್ ಕೆ ಎಚ್ ವಶಕ್ಕೆ ಪಡೆದಿದ್ದಾರೆ. ಡಿ 25ರ ರಾತ್ರಿ ಕುಮಟಾ ಕಡಿಮೆ ಬಳಿಯ…

ಪುಠಾಣಿ ಯಕ್ಷಗಾನ | ರುಕ್ಮಿಣಿ ಸ್ವಯಂವರಕ್ಕೆ ನೀವು ಸಾಕ್ಷಿಯಾಗಿ!

ಅಂಕೋಲಾ: ವಂದಿಗೆಯ ಅಯ್ಯಪ್ಪ ಸ್ವಾಮಿ ಪೂಜೆ ಅಂಗವಾಗಿ ಡಿ 27ರ ಶುಕ್ರವಾರ ರಾತ್ರಿ 9.30ಕ್ಕೆ `ಗಣೇಶ ಯಕ್ಷಗಾನ ಮಂಡಳಿ’ಯ ಬಾಲ ಕಲಾವಿದರಿಂದ ‘ರುಕ್ಮಿಣಿ ಸ್ವಯಂವರ’ ಮತ್ತು ‘ಧರ್ಮಾಂಗದ ದಿಗ್ವಿಜಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಉಳವರೆಯ ಇಂದ್ರ ಗೌಡ ಅವರ ರಂಗಸಜ್ಜಿಕೆಯಲ್ಲಿ…

ನೋಟಿಸಿಗೆ ಬೆದರಿತು ಬಡ ಜೀವ!

ಶಿರಸಿ: ಅರಣ್ಯ ಅಧಿಕಾರಿಗಳ ಕಚೇರಿಯಿಂದ ಬಡ ಅತಿಕ್ರಮಣದಾರರಿಗೆ ಒಂದಿಲ್ಲೊ0ದು ನೋಟಿಸ್ ಬರುತ್ತಿದೆ. `ಮೂರು ತಲೆಮಾರಿನ ದಾಖಲೆ ಒದಗಿಸಿ’ `ದಂಡದ ಪ್ರತಿ ಹಾಜರುಪಡಿಸಿ’ ಎಂಬುದನ್ನು ಸೇರಿ ಹಲವು ಬಗೆಯ ನೋಟಿಸ್’ಗಳು ಜನರ ನಿದ್ದೆಕೆಡಿಸಿವೆ. ಕೆಲ ನೋಟಿಸುಗಳು ಸ್ಥಳೀಯ ಗ್ರಾಮ ಪಂಚಾಯತದ ಮೂಲಕ ಅರಣ್ಯ…

ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಇನ್ನಷ್ಟು ದಿನ ಗ್ರಹಣ?!

ಶಿರಸಿ: ಹಸಿದ ಹೊಟ್ಟೆಗೆ ಊಟ ನೀಡುವ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಯಾಗಿ ಏಳು ವರ್ಷದ ನಂತರ ಶಿರಸಿಯಲ್ಲಿ ಕಟ್ಟಡ ನಿರ್ಮಾಣವಾಗಿದೆ. ಊಟ ವಿತರಣೆಗೆ ತರಲಾಗಿದ್ದ ಬಟ್ಟಲು-ತಟ್ಟೆಗೆ ತುಕ್ಕು ಹಿಡಿಯುವ ದಿನ ಸಮೀಪಿಸಿದರೂ ಕ್ಯಾಂಟೀನ್ ಉದ್ಘಾಟನೆಗೆ ಮುಹೂರ್ತ ಕೂಡಿಬಂದಿಲ್ಲ! ಉತ್ತರ ಕನ್ನಡ ಜಿಲ್ಲೆಯ…

ಹೊಟ್ಟೆಯೊಳಗಿನ ದ್ವೇಷಕ್ಕೆ ಹಣ್ಣಿನ ಅಂಗಡಿ ಹೊಗೆ!

ಭಟ್ಕಳ: ತಾಲೂಕು ಪಂಚಾಯತ ಕಚೇರಿ ಎದುರಿನ ಹಣ್ಣಿನ ಅಂಗಡಿ ಬೆಂಕಿಗೆ ಆಹುತಿಯಾಗಿದೆ. ಗುರುವಾರ ನಸುಕಿನಲ್ಲಿ ತಗುಲಿದ ಬೆಂಕಿಗೆ ಇಡೀ ಅಂಗಡಿ ಭಸ್ಮವಾಗಿದೆ. ಮಾವಿನಕುರ್ವೆ ಪಂಚಾಯತ ವ್ಯಾಪ್ತಿಯ ತಲಗೋಡು ಗ್ರಾಮದ ಕೋಟೆಮನೆಯ ರಾಮಚಂದ್ರ ನಾಯ್ಕ ಅವರು ಇಲ್ಲಿ ತಾತ್ಕಾಲಿಕ ಮಳಿಗೆ ನಿರ್ಮಿಸಿಕೊಂಡಿದ್ದರು. ಅಲ್ಲಿ…

You cannot copy content of this page