6
ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಬಿಜೆಪಿಗರ ವಿರುದ್ಧ ಕಠಿಣ ಕ್ರಮ!

ಭಟ್ಕಳ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವುದರ ಜೊತೆ ಬೆದರಿಕೆ ಒಡ್ಡಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೇರಿ 7 ಜನರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಜಿಲ್ಲಾ ಕಾರ್ಯದರ್ಶಿ…

ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ: ಮೂವರಿಗೆ ಗಾಯ

ಅಂಕೋಲಾ: ಅಂಕೋಲಾ-ಯಲ್ಲಾಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಲಾರಿ ಸುಂಕಸಾಳದಲ್ಲಿ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಲಾರಿಯಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ನ 25ರಂದು ಗುಜರಾತಿನ ದಯಾಬೈ ರಾಥೋಡ್ ವೇಗವಾಗಿ ಲಾರಿ ಓಡಿಸಿಕೊಂಡು ಬಂದಿದ್ದು ಸುಂಕಸಾಳದಲ್ಲಿನ ವಿದ್ಯುತ್ ಕಂಬಗಳಿಗೆ ಲಾರಿ ಗುದ್ದಿದ್ದಾನೆ. ನಂತರ…

ಮೂರು ಕಾರುಗಳ ನಡುವೆ ಅಪಘಾತ: ನಾಲ್ವರಿಗೆ ಗಾಯ

ಭಟ್ಕಳ: ಮೂರು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಕೇರಳದ ನಿವೃತ್ತ ನೌಕರ ರಾಮಚಂದ್ರ ಕೇಣಿ ಅವರು ನ 25ರಂದು ಮಂಗಳೂರಿನಿoದ ಹೊನ್ನಾವರದ ಕಡೆ ಕಾರಿನಲ್ಲಿ ಸಂಚರಿಸುತ್ತಿದ್ದರು. ಅವರ ಕಾರಿನಲ್ಲಿ ಒಂದೇ ಕುಟುಂಬದ ನರಸಿಂಹ ಭಟ್ಟ, ನಿವೇದಿತಾ ಭಟ್ಟ ಹಾಗೂ…

ಕೇರಳಿಗನ ಜಮೀನಿನ ಮೇಲೆ ಕಿಡಿಗೇಡಿಗಳ ಆಕ್ರಮಣ!

ಮುಂಡಗೋಡ: ಕೇರಳದ ವಿ ಎಂ ವರ್ಗೀಸ್ ಮುಲ್ಲಾ ಅವರು ಮೈನಳ್ಳಿಯಲ್ಲಿ ಭೂಮಿ ಹೊಂದಿದ್ದು, ಕೆಲವರು ಅವರಿಗೆ ಜಮೀನಿಗೆ ಹೋಗಲು ಬಿಡುತ್ತಿಲ್ಲ! ವರ್ಗೀಸ್ ಮುಲ್ಲಾ ಅವರು ಮೈನಳ್ಳಿ ಗ್ರಾಮದ ಸರ್ವೆ ನಂ 22ರ ಪ್ಲಾಟ್ ನಂ 115ರಲ್ಲಿ 4.33 ಎಕರೆ ಭೂಮಿ ಹೊಂದಿದ್ದಾರೆ.…

ಅರಣ್ಯಾಧಿಕಾರಿಗೆ ಗುದ್ದಿದ ಕಾರು: ಮುರಿದ ಕಾಲು!

ಅಂಕೋಲಾ: ಬೈಕಿಗೆ ಪೆಟ್ರೋಲ್ ಹಾಕಿಸಲು ತೆರಳುತ್ತಿದ್ದ ಅರಣ್ಯ ಅಧಿಕಾರಿ ಮಹೇಶ ಮುಂಡಗೇರಿ ಅವರಿಗೆ ಕಾರು ಗುದ್ದಿದೆ. ಪರಿಣಾಮ ಅವರ ಕಾಲಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಅಂಕೋಲಾದ ಮರಾಠಾಕೇರಿಯಲ್ಲಿ ವಲಯ ಅರಣ್ಯಾಧಿಕಾರಿ ಗ್ರೀಷ್ಮಾ ಪಟಗಾರ ಹಾಗೂ ಅರಣ್ಯ ಅಧಿಕಾರಿ ಮಹೇಶ ಮುಂಡಗೇರಿ ವಾಸವಾಗಿದ್ದರು.…

ತರಕಾರಿ ಖರೀದಿಗೆ ಬಂದವನಿಗೆ ಗುದ್ದಿದ ಬೈಕು: ಮೂವರಿಗೆ ಗಾಯ

ಹೊನ್ನಾವರ: ತರಕಾರಿ ಖರೀದಿಗೆ ಬಂದಿದ್ದ ಮಂಜುನಾಥ ಗೌಡ ಎಂಬಾತರಿಗೆ ಕಿಶೋರ ದೇವಾಡಿಗ ಎಂಬಾತರು ಬೈಕ್ ಗುದ್ದಿದ್ದು, ಪರಿಣಾಮ ಮಂಜುನಾಥ ಗೌಡ, ಕಿಶೋರ ದೇವಾಡಿಗ ಅವರ ಜೊತೆ ಗುದ್ದಿದ ಬೈಕಿನಲ್ಲಿ ಹಿಂದೆ ಕೂತಿದ್ದ ಸಂಜನಾ ದೇವಾಡಿಗ ಅವರಿಗೂ ಪೆಟ್ಟಾಗಿದೆ. ನ 26ರಂದು ಕುಂದಾಪುರದ…

ಅಶ್ವಥ ಎಲೆಯಲ್ಲಿ ಅರಳಿದ ವೀರೇಂದ್ರ ಹೆಗ್ಗಡೆ!

ಕುಮಟಾ ಬಸ್ತಿಪೇಟೆಯ ಚಿತ್ರಕಲಾವಿದ ಪ್ರಥ್ವಿರಾಜ್ ನಾಯ್ಕ ಅವರು ಲೀಪ್ ಆರ್ಟ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಚಿತ್ರ ಬಿಡಿಸಿದ್ದಾರೆ. ಅಶ್ವಥ ಎಲೆಯಲ್ಲಿ ಅರಳಿದ ಹೆಗ್ಗಡೆ ಅವರ ಫೋಟೋ ಜನರನ್ನು ಆಕರ್ಷಿಸಿದೆ.

ಶಾಲಾ ಮಕ್ಕಳಿಗೆ ಸಂವಿಧಾನ ಅರಿವು

ಕಾರವಾರ: ನಗೆ ಶಾಲಾ ಮಕ್ಕಳಿಗೆ ಭಾರತ ಸಂವಿಧಾನದ ಬಗ್ಗೆ ಶಿಕ್ಷಕರು ಬೋಧಿಸಿ, ಸಂವಿಧಾನ ಪೀಠಿಕೆಯನ್ನು ಪ್ರಮಾಣ ವಚನ ರೂಪದಲ್ಲಿ ಬೋಧಿಸಿದರು. ಮಂಗಳವಾರ ಇಲ್ಲಿನ ಮಕ್ಕಳಿಗೆ ಕಾನೂನು ಅರಿವು ಹಾಗೂ ವಿವಿಧ ಹಕ್ಕು-ಕರ್ತವ್ಯಗಳ ಬಗ್ಗೆ ಶಿಕ್ಷಕರು ಅರಿವು ಮೂಡಿಸಿದರು. ಜೊತೆಗೆ ನ 26ರ…

ಕನ್ನಡ ಶಾಲೆಯಲ್ಲಿ ಸಾಹಿತ್ಯ ಪರಿಮಳ: ಹಲವು ಅಧ್ಯಕ್ಷರ ಸಮಾಗಮ-ಭಾಷಣ!

ಯಲ್ಲಾಪುರ: ಸವಣಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕನ್ನಡದ ಕಹಳೆ ಮೊಳಗಿದ್ದು, ಗೀತ ಗಾಯನ, ಕನ್ನಡ ಕಾರ್ತಿಕ ರಾಜ್ಯೋತ್ಸವದ ಸಡಗರಲ್ಲಿ ಮಕ್ಕಳು ಉತ್ಸಾಹ ತೋರಿದರು. ಸಾಹಿತಿ ಕೆ ವಿ ಕೋಮಾರ್ ಮಕ್ಕಳ ಜೊತೆ ಬೆರೆತು ತಮ್ಮ ಜೀವನ ಅನುಭವಗಳನ್ನು ಹಂಚಿಕೊAಡರು. ಅಲ್ಲಿದ್ದ…

ನೇಣಿಗೆ ಶರಣಾದ ಪೌರ ಕಾರ್ಮಿಕ!

ಮುಂಡಗೋಡು: ಮೂರು ವರ್ಷದಿಂದ ಪಿಡ್ಸ ಹಾಗೂ ಲಿವರ್ ಹಾಗೂ ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಪೌರ ಕಾರ್ಮಿಕ ಗಣೇಶ ಚಲವಾದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 30 ವರ್ಷದ ಗಣೇಶ ಚಲವಾದಿ ಗಾಂಧೀನಗರದಲ್ಲಿ ವಾಸವಾಗಿದ್ದರು. ತಮಗಿದ್ದ ರೋಗಗಳಿಂದ ಅವರು ಬೇಸತ್ತಿದ್ದರು. ಜೀವನದಲ್ಲಿ ಜಿಗುಪ್ಸೆ ಬಂದಿರುವ ಬಗ್ಗೆ…

You cannot copy content of this page