ಮೂರೇ ತಿಂಗಳಿನಲ್ಲಿ ಕೋಟ್ಯಧಿಪತಿ: ನಂಬಿದವರಿಗೆ ಮಕ್ಮಲ್ ಟೋಪಿ!
ಹೊನ್ನಾವರ: ಆನ್‌ಲೈನ್ ಟ್ರೆಂಡಿoಗ್ ಮೂಲಕ 41 ಲಕ್ಷ ರೂ ಹೂಡಿಕೆ ಮಾಡಿದ ಕೆ ಕೃಷ್ಣಕಾಂತ ಅವರಿಗೆ 1.60 ಕೋಟಿ ರೂ ಲಾಭ ಕಾಣಿಸಿದ್ದು, ಆ ಹಣ ಪಡೆಯಲು ಮಾತ್ರ ಸಾಧ್ಯವಾಗಿಲ್ಲ! ಚಿಕ್ಕಮಗಳೂರಿನ ಕೃಷ್ಣಕಾಂತ ಅವರು ಕರ್ಕಿ ಹೈಚರ್ಚ ಬಳಿ ವಾಸವಾಗಿದ್ದಾರೆ. ಸಾಮಾಜಿಕ…
ಕಸ್ತೂರಿ ಗುಮ್ಮನ ಓಡಿಸಲು ಮತ್ತೊಂದು ಸಭೆ!
ಯಲ್ಲಾಪುರ: `ಅವೈಜ್ಞಾನಿಕ ಕಸ್ತೂರಿ ರಂಗನ ವರದಿ ಬಗ್ಗೆ ರಾಜ್ಯದ ಎಲ್ಲಡೆ ವಿರೋಧವಿದ್ದು, ಕೇಂದ್ರ ಸರ್ಕಾರದ ಮೇಲೆಯೂ ರಾಜ್ಯ ಸರ್ಕಾರಗಳ ಒತ್ತಡವಿದೆ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು. ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ…
ಟೆಕ್ಕಿಯ ಬೈಕಿಗೆ ಟ್ಯಾಂಕರ್ ಡಿಕ್ಕಿ
ಭಟ್ಕಳ: ಶಿರಸಿ ಯಡಳ್ಳಿ ಅಬ್ರಿಮನೆಯ ಸಾಯಿಪ್ರಸಾದ ಹೆಗಡೆ ಅವರಿಗೆ ಗ್ಯಾಸ್ ಟ್ಯಾಂಕರ್ ಗುದ್ದಿದೆ. ಎರಡು ಕಾಲು ಹಾಗೂ ಕೈ’ಗೆ ಗಂಭೀರ ಗಾಯವಾದ ಕಾರಣ ಅವರು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಪ್ಟವೇರ್ ಇಂಜಿನಿಯರ್ ಆಗಿರುವ ಸಾಯಿಪ್ರಸಾದ ಭಾಸ್ಕರ ಹೆಗಡೆ (22) ಅಕ್ಟೊಬರ್ 24ರಂದು…
ಪೊಲೀಸ್ ದೂರಿನ ನಂತರ ಮನೆಗೆ ಮರಳಿದ ಮಗ!
ಅಂಕೋಲಾ: ಮಾದನಗೇರಿಯ ಮನೋಜ ಶಿರಾಳಕೊಪ್ಪ (19) ಎಂಬಾತ ಏಕಾಏಕಿ ಮನೆಯಿಂದ ಕಾಣೆಯಾಗಿದ್ದು, ಪಾಲಕರು ಪೊಲೀಸ್ ದೂರು ನೀಡಿದ ನಂತರ ಆತ ಮನೆಗೆ ಮರಳಿದ್ದಾನೆ. ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಮನೋಜ್ ಕೆಲಸ ಬಿಟ್ಟು ಸ್ನೇಹಿತರ ಜೊತೆ ಎಲ್ಲೆಂದರಲ್ಲಿ ತಿರುಗಾಟ ನಡೆಸಿದ್ದ. `ಈ ರೀತಿ…
ಸಂಚಾರಿ ನಿಯಮ ಉಲ್ಲಂಘಿಸಿದ ಸಮಾಜ ಸೇವಕ!
ಅಂಕೋಲಾ: ಬಾಳೆಗುಳಿ ಕ್ರಾಸಿನಿಂದ ವೇಗವಾಗಿ ಕಾರು ಓಡಿಸಿಕೊಂಡು ಬಂದ ಕೇರಳದ ವ್ಯಕ್ತಿಯೊಬ್ಬ ತಮಿಳುನಾಡಿನ ಲಾರಿಗೆ ಗುದ್ದಿದ್ದು, ಎರಡು ವಾಹನ ಜಖಂ ಆಗಿದೆ. ಜೊತೆಗೆ ಕಾರಿನಲ್ಲಿದ್ದ ದಂಪತಿಗೆ ಗಾಯವಾಗಿದೆ. ಅಕ್ಟೊಬರ್ 26ರ ಬೆಳಗ್ಗೆ 4.30ರ ವೇಳೆಗೆ ಕೇರಳದ ಸಮಾಜ ಸೇವಕ ಡಿಕೇನ್ಸ ಎಂ…
ಗಟಾರಕ್ಕೆ ಬಿದ್ದ ಲಾರಿ: ಉದ್ಯಮಿಗೆ ಅಪಾರ ನಷ್ಟ
ಯಲ್ಲಾಪುರ: ಮುಂಬೈಯಿoದ ಕೇರಳಕ್ಕೆ ಹೋಗುತ್ತಿದ್ದ ಲಾರಿ ಡೊಮಗೇರಿ ಕ್ರಾಸಿನ ಬಳಿ ರಸ್ತೆ ಬದಿ ಪಲ್ಟಿಯಾಗಿದೆ. ಧಾರವಾಡದ ಮಹಾದೇವಪ್ಪ ಅಂಗಡಿ ಎಂಬಾತ ಸ್ಟೀಲ್ ರೋಲ್ ಹೊತ್ತ ಲಾರಿಯನ್ನು ಓಡಿಸುತ್ತಿದ್ದ. ಅಕ್ಟೊಬರ್ 24ರಂದು ಮುಂಬೈಯಿAದ ಹೊರಟ ಆತ ಅಕ್ಟೊಬರ್ 26ರ ಅವಧಿಗೆ ಕಿರವತ್ತಿ ಬಳಿ…
ಬೋರ್‌ವೆಲ್ ಫಿಲ್ಟರ್ ಸ್ಪೋಟ: ದುಡಿಯುವ ರೈತನ ದುರ್ಮರಣ
ಹಳಿಯಾಳ: ಹೊಲಕ್ಕೆ ನೀರುಣಿಸುತ್ತಿದ್ದ ಬೋರ್‌ವೆಲ್ ಫಿಲ್ಟರ್ ಸ್ಪೋಟದಿಂದ ಖರಪ್ಪ ಹಟ್ಟಿಹೊಳಿ (64) ಎಂಬಾತರು ಸಾವನಪ್ಪಿದ್ದಾರೆ. ಅರ್ಲವಾಡ ಖರಪ್ಪ ರುದ್ರಪ್ಪ ಹಟ್ಟಿಹೊಳಿ (64) ಅಕ್ಟೊಬರ್ 18ರಂದು ಹೊಲಕ್ಕೆ ಹೋಗಿದ್ದರು. ಫಸಲಿಗೆ ನೀರುಣಿಸುವುದಕ್ಕಾಗಿ ಅವರು ಬೋರ್‌ವೆಲ್ ಚಾಲು ಮಾಡಿದ್ದರು. ಫಿಲ್ಟರ್ ವಾಲ್ ತಿರುಗಿಸುವಾಗ ಫಿಲ್ಟರ್…
ಪೊಲೀಸರನ್ನು ಕಂಡು ಪರಾರಿಯಾದ ಕಳ್ಳಬಟ್ಟಿ ನಾಗರಾಜ: ಈತ ಬೆಳಗ್ಗೆ ಕೂಲಿಯಾಳು-ರಾತ್ರಿ ಕಾಳಸಂತೆ ವ್ಯಾಪಾರಿ!
ಶಿರಸಿ: ರಾತ್ರಿ ವೇಳೆ ಕಳ್ಳಬಟ್ಟಿ ವ್ಯಾಪಾರ ನಡೆಸುತ್ತಿದ್ದ ನಾಗರಾಜ ನಾಯ್ಕ (45) ಮೊನ್ನೆ ಪೊಲೀಸರನ್ನು ಕಂಡು ಓಡಿ ಪರಾರಿಯಾಗಿದ್ದು, ಆತನ ಹುಡುಕಾಟ ನಡೆದಿದೆ. ಆತ ಇನ್ನೂ ಸಿಕ್ಕಿಲ್ಲ! ಬನವಾಸಿ ಬಳಿಯ ಗೊಣ್ಣಗಟ್ಟದಲ್ಲಿ ವಾಸವಾಗಿರುವ ನಾಗರಾಜ ನಾರಾಯಣ ನಾಯ್ಕ ಬೆಳಗ್ಗಿನ ಅವಧಿಯಲ್ಲಿ ಕೂಲಿ…
ಯಲ್ಲಾಪುರ ನ್ಯೂಸ್: ಪತ್ರಕರ್ತ ಜಗದೀಶ ನಾಯ್ಕ ಇನ್ನಿಲ್ಲ
ಯಲ್ಲಾಪುರ: ಕಳೆದ ಐದಾರು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ಪತ್ರಕರ್ತ ಜಗದೀಶ ನಾಯ್ಕ ಶನಿವಾರ ರಾತ್ರಿ ಸಾವನಪ್ಪಿದ್ದಾರೆ. ಬಹು ಅಂಗಾ0ಗ ವೈಕಲ್ಯದಿಂದ ಅವರು ಬಳಲುತ್ತಿದ್ದರು. ಶನಿವಾರ ಬೆಳಗ್ಗೆ ಅವರ ಆರೋಗ್ಯ ಹದಗೆಟ್ಟಿತ್ತು. ಕೊನೆ ಕ್ಷಣದವರೆಗೂ ಬದುಕಿಸಿಕೊಳ್ಳುವ ಪ್ರಯತ್ನ ನಡೆಯಿತು. ಶನಿವಾರ…
ಬಡ್ಡಿ ಮಕ್ಕಳ ಮನೆ ಮೇಲೆ ಪೊಲೀಸ್ ದಾಳಿ!
ಮುಂಡಗೋಡು: ಕಾನೂನುಬಾಹಿರವಾಗಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಇಬ್ಬರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆನಂದನಗರದಲ್ಲಿ ವಾಸವಾಗಿದ್ದ 27 ವರ್ಷದ ಕಿರಣ ಪ್ರಕಾಶ ಸೋಳಂಕಿ ಕೂಲಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದ. ಇಂದಿರಾನಗರದಲ್ಲಿ ವಾಸವಾಗಿದ್ದ 28 ವರ್ಷದ ಮಂಜು ಅರ್ಜುನ ನೆವಲೆ ಸಹ…







