6
ಕಾರವಾರ: ನಾಳೆಯೂ ಇರಲ್ಲ ಕರೆಂಟ್!

ಕಾರವಾರ: ವಿದ್ಯುತ್ ತಂತಿ ನಿರ್ವಹಣೆ ಹಿನ್ನಲೆ ಜುಲೈ 12ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರವಾರದ ಶಿರವಾಡ ಕೈಗಾರಿಕಾ ವಲಯದಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಉಳಿದ ಕಡೆ ಹೆಚ್ಚಿನ ಸಮಸ್ಯೆ ಇಲ್ಲ.

ಗೌಡರ ಪರಾಕ್ರಮ ವಿವರಿಸಿದ ವೀರಗಲ್ಲು: ಈ ಶಾಸನಕ್ಕೆ ಬರೇ 800 ವರ್ಷ!

ಶಿರಸಿಯ ಸೋಂದಾ ಕಡೆಗುಂಟದಲ್ಲಿ 800 ವರ್ಷದ ಶಾಸನವೊಂದು ಪತ್ತೆಯಾಗಿದೆ. ಇಲ್ಲಿನ ಶಶಾಂಕ ಮರಾಠೆ ಅವರು ನೀಡಿದ ಮಾಹಿತಿ ಮೇರೆಗೆ ಐತಿಹಾಸಿಕ ತಜ್ಞ ಲಕ್ಷ್ಮೀಶ ಹೆಗಡೆ ಸೋಂದಾ ಶಾಸನದ ಅಧ್ಯಯನ ನಡೆಸಿದ್ದಾರೆ. ಮೈಸೂರಿನ ಪ್ರೋ ನಾಗರಾಜ್ ಅವರು ಅವರು ಶಾಸನದ ಕುರಿತು ಚರ್ಚಿಸಿದ್ದಾರೆ.…

ಜ್ವಲಂತ ಸಮಸ್ಯೆಗಳ ಕುರಿತು ಸಂಸದರ ಗಂಭೀರ ಚರ್ಚೆ

ಇದೇ ಮೊದಲ ಬಾರಿ ಸಂಸದರಾದ ಉಮೇದಿಯಲ್ಲಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಲಿಗೆ ಚಕ್ರ ಕಟ್ಟಿಕೊಂಡವರoತೆ ಜಿಲ್ಲೆ ಸುತ್ತಾಡುತ್ತಿದ್ದಾರೆ. ಕಾರ್ಯಕರ್ತರ ಸಮಾವೇಶ, ಅಭಿನಂದನಾ ಸಭೆ ನಡುವೆಯೇ ಅಧಿಕಾರಿಗಳ ಸಭೆಯನ್ನು ನಡೆಸುತ್ತಿದ್ದಾರೆ. ಪ್ರತಿ ದಿನ ಕನಿಷ್ಟ ಎರಡು ಸಭೆಗಳಂತೆ ನಡೆಸುತ್ತಿರುವ ಅವರು ಗುರುವಾರ ಹೆದ್ದಾರಿ…

ಅರಣ್ಯವಾಸಿ ಹೋರಾಟಕ್ಕೆ ಕೈ ಜೋಡಿಸಿದ ವಿಶ್ರಾಂತ ನ್ಯಾಯಮೂರ್ತಿ

ಶಿರಸಿ: ಅರಣ್ಯ ಭೂಮಿ ಹಕ್ಕಿಗೆ ಸಂಬoಧಿಸಿ ಕೆಲ ಸಂಘಟನೆಗಳು ಸುಪ್ರೀಂ ಕೋರ್ಟನಲ್ಲಿ ದಾಖಲಿಸಿದ ಪ್ರಕರಣ ವಿಷಯವಾಗಿ ನ್ಯಾಯವಾದಿ ರವೀಂದ್ರ ನಾಯ್ಕ ಹೋರಾಟ ಮುಂದುವರೆಸಿದ್ದು, ಈ ಬಗ್ಗೆ ವಿಶ್ರಾಂತ ನ್ಯಾಯಮೂರ್ತಿ ನಾಗ್ ಮೋಹನದಾಸ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಮುಂದಿನ ಹೋರಾಟದಲ್ಲಿ ಕೈಗೊಳ್ಳಬಹುದಾದ ಕಾನೂನು…

`ಡೆಂಗ್ಯು ತಡೆಗೆ ಶಾಲಾ ಮಕ್ಕಳ ಬಳಕೆ: ಶಿಕ್ಷಕರಿಗೆ ತರಬೇತಿ’

ಕಾರವಾರ: `ಮಳೆಗಾಲದ ಅವಧಿಯಲ್ಲಿ ಡೆಂಗ್ಯೂ ರೋಗ ಹೆಚ್ಚಾಗದಂತೆ ಮುನ್ನಚ್ಚರಿಕೆವಹಿಸಬೇಕು’ ಎಂದು ಅಧೀನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚಿಸಿದರು. ವಿಡಿಯೋ ಕಾನ್ಪರೆನ್ಸ್ ಮೂಲಕ ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು `ಗ್ರಾಮ ಪಂಚಾಯತ್’ಗಳಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರು…

ಶಾಸಕರ ಅನುದಾನಕ್ಕೂ ಬರಗಾಲ!

ಕುಮಟಾ: `ಅಡಿಯಿಂದ ಮುಡಿಯವರೆಗೆ ಭ್ರಷ್ಟರಿಂದ ತುಂಬಿದ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದ್ದು, ಶಾಸಕರ ಅನುದಾನ ಹಂಚಿಕೆಗೂ ಅಲ್ಲಿ ಹಣವಿಲ್ಲ’ ಎಂದು ಕುಮಟಾ – ಹೊನ್ನಾವರ ಶಾಸಕ ದಿನಕರ ಶೆಟ್ಟಿ ವಾಗ್ದಾಳಿ ನಡೆಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಮೂರು ತಿಂಗಳಿನಿoದ ಗೃಹಲಕ್ಷೀ ಹಣ…

ಕಾಗದದ ಪ್ಲೇಟಿನಲ್ಲಿ ಅರೆಬಿಕ್ ಬರಹ: ಮುಸ್ಲಿಂ ವಿರೋಧ

ಕಾರವಾರ: ಕೋರ್ಟ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ನೀಡಿದ ಕಾಗದ ಪಾತ್ರೆಯಲ್ಲಿ ಅರೆಬಿಕ್ ಭಾಷೆಯಲ್ಲಿ ಬರಹಗಳಿದ್ದು, ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮುಸ್ಲಿಂ ಸಮುದಾಯದವರು ಅರೆಬಿಕ್ ಭಾಷೆಯನ್ನು ಈ ರೀತಿ ಬಳಸಿರುವ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವಿಷಯವಾಗಿ ಬುಧವಾರ ಸಂಜೆ…

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ನಾಪತ್ತೆ: ಬಡವನ ದೂರು ಕೇಳಿ ಪರಿಶೀಲನೆಗೆ ತೆರಳಿದ ಶಾಸಕ

ಮುಂಡಗೋಡದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಶಿವರಾಮ ಹೆಬ್ಬಾರ್ ಅಲ್ಲಿನ ವೈದ್ಯಾಧಿಕಾರಿಗಳನ್ನು ತರಾಠೆಗೆ ತೆಗೆದುಕೊಂಡರು. ಸoಜೆ 4 ಗಂಟೆ ನಂತರ ವೈದ್ಯರು ಸೇವೆಯಲ್ಲಿ ಇರದ ಬಗ್ಗೆ ಜನ ಶಾಸಕರ ಬಳಿ ದೂರಿದ್ದರು. ಇದರ ಪರಿಶೀಲನೆಗಾಗಿ ಭೇಟಿ ನೀಡಿದ ಶಿವರಾಮ…

ಡೀಸಿ ಜೊತೆ ಜನಪ್ರತಿನಿಧಿಗಳ ಚರ್ಚೆ: ಅಭಿವೃದ್ಧಿಗೆ ಚುರುಕು ಮೂಡಿಸಲು ಆಗ್ರಹ

ಕಾರವಾರ: ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹಾಗೂ ಕಾರವಾರ ನಗರಸಭೆ ಅಧ್ಯಕ್ಷ ಡಾ ನಿತಿನ್ ಪಿಕಳೆ ಜೊತೆಯಾಗಿ ಗುರುವಾರ ಜಿಲ್ಲಾಧಿಕಾರಿ ಲಕ್ಷ್ಮಿಪ್ರೀಯಾ ಅವರನ್ನು ಭೇಟಿ ಮಾಡಿದ್ದು, ವಿವಿಧ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿದರು. `ಜಿಲ್ಲೆಯ ಕಡಲತೀರದಲ್ಲಿ ಆಗುತ್ತಿರುವ ಕಡಲ ಕೊರೆತದಿಂದ…

ಶಿವ ಸನ್ನಿಧಿಯಲ್ಲಿ ರಾಮನ ಅವತಾರ

ಭಟ್ಕಳ: ಕವಲಕ್ಕಿಯ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಟಾನದ ಬೆಳ್ಳಿ ಹಬ್ಬದ ಪ್ರಯುಕ್ತ ಮುರುಡೇಶ್ವರದ ಬಸ್ತಿಮಕ್ಕಿಯಲ್ಲಿ ಕಿಷ್ಕಿಂಧಾ ಆಖ್ಯಾನ ನಡೆದಿದ್ದು, ನೆರೆದಿದ್ದವರನ್ನು ರಂಜಿಸಿತು. `ಕಿಷ್ಕಿoದಾ’ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಪರಮೇಶ್ವರ ಭಂಡಾರಿ ಕರ್ಕಿ, ಅರ್ಥದಾರಿಗಳಾಗಿ ವಾಸುದೇವ ರಂಗಾ ಭಟ್ಟ, ರಾಮಚಂದ್ರ ಹೆಗಡೆ…

You cannot copy content of this page