6
ದಂಡಾಧಿಕಾರಿಯೇ ಇಲ್ಲದ ತಹಶೀಲ್ದಾರ್ ಕಚೇರಿ!

ಶಿರಸಿಯಲ್ಲಿ ಕಳೆದ ಒಂದುವರೆ ತಿಂಗಳಿನಿoದ ಖಾಯಂ ತಹಶೀಲ್ದಾರ್ ಇಲ್ಲ. ಹೀಗಾಗಿ ತಾಲೂಕಾ ದಂಡಾಧಿಕಾರಿಯಾಗಿ ತಹಶೀಲ್ದಾರ್ ಮಾಡಬೇಕಾದ ಕೆಲಸಗಳೆಲ್ಲವೂ ಬಾಕಿ ಉಳಿದಿದೆ. ಈ ಹಿಂದೆ ಶ್ರೀಧರ ಮುಂದಲಮನಿ ಅವರು ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ವರ್ಗಾವಣೆ ನಂತರ ದಾಂಡೇಲಿ ತಹಶೀಲ್ದಾರ್ ಅವರಿಗೆ…

ಕೀಟನಾಶಕ ಸೇವಿಸಿದ ಕೂಲಿ ಕಾರ್ಮಿಕ: ಆತ ಇನ್ನಿಲ್ಲ!

ನಿತ್ಯವೂ ಸರಾಯಿ ಕುಡಿಯುತ್ತಿದ್ದ ಬನವಾಸಿಯ ದಾಮೋದರ ಮೊಗೇರ್ ಮೊನ್ನೆ ಕೀಟನಾಶಕ ಕುಡಿದಿದ್ದಾರೆ. ಪರಿಣಾಮ ಅವರು ಸಾವನಪ್ಪಿದ್ದಾರೆ! ಶಿರಸಿ ತಾಲೂಕಿನ ಬನವಾಸಿಯ ಕಲಸಳ್ಳಿ ಬಳಿಯ ಮರಗುಂಡಿಯಲ್ಲಿ ದಾಮೋದರ ಮೊಗೇರ್ ವಾಸವಾಗಿದ್ದರು. 66 ವರ್ಷದ ಅವರು ಕೂಲಿ ಕೆಲಸ ಮಾಡಿ ಕುಟುಂಬ ಸಾಕುತ್ತಿದ್ದರು. ದುಡಿದ…

ಗ್ರಾ ಪಂ ಆಡಳಿತ: ಕಾಗದ ಅರ್ಜಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ!

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಡಿಜಿಟಲ್ ವ್ಯವಸ್ಥೆ ಜಾರಿಗೆ ತರಲು ಜಿಲ್ಲಾ ಪಂಚಾಯತ ಆಸಕ್ತಿವಹಿಸಿದೆ. ಡಿಜಿಟಲ್ ವ್ಯವಸ್ಥೆ ಜಾರಿಯಾದ ನಂತರ ಗ್ರಾಮ ಪಂಚಾಯತದಲ್ಲಿನ ಕಾಗದ ಪತ್ರಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇರುವುದಿಲ್ಲ! ಗ್ರಾಮ ಪಂಚಾಯತಗೆ ಸಲ್ಲಿಕೆಯಾಗುವ ಎಲ್ಲಾ…

ಬೇಡರ ವೇಷ ನೋಡಲು ಬಂದವರ ಮೇಲೆ ದಾಳಿ: ಹೋಳಿ ಹೊಡೆದಾಟದ ಆರೋಪಿಗೆ ಶಿಕ್ಷೆ!

ಹೋಳಿ ಹಬ್ಬದ ವೇಳೆ ನಡೆಯುವ ಬೇಡರ ವೇಷ ನೋಡಲು ಶಿರಸಿಗೆ ಬಂದಿದ್ದ ವಿವೇಕ ಹೆಗಡೆ ಹಾಗೂ ವಾಸುದೇವ ಹುಲೆಕಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರೀತಂ ಡಿಸೋಜಾ ಹಾಗೂ ಲಾರೇಲ್ ನೋರೋನಾ ಎಂಬಾತರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 2015ರ ಮಾರ್ಚ 5ರಂದು…

ಜಾತ್ರೆ ಅವ್ಯವಹಾರ: 11 ಲಕ್ಷ ರೂ ಅವ್ಯವಹಾರದ ಪೆನ್ ಡ್ರೈವ್ ಕಣ್ಮರೆ!

ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಾತ್ರೆ ಅವಧಿಯಲ್ಲಿ 11 ಲಕ್ಷ ರೂ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಭೀತಾಗಿದ್ದು, ಇದಕ್ಕಿಂತ ಹೆಚ್ಚಿನ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಸದಸ್ಯರು ದೂರಿದ್ದಾರೆ. ಪ್ರಕರಣದ ಪತ್ತೆಗೆ ಮುಖ್ಯ ಸಾಕ್ಷಿಯಾಗಿದ್ದ ಮೂರು ಪೆನ್ ಡ್ರೈವ್…

ಕೃತಕ ಪ್ರವಾಹದಿಂದ ಕೆಂಗಟ್ಟ ಕಾರವಾರಿಗರು: ಈ ಬಾರಿಯ ಸಿದ್ಧತೆ ಏನು?

ಕಳೆದ ಮಳೆಗಾಲದ ಅವಧಿಯಲ್ಲಿ ಕಾರವಾರದ ಅರಗಾ, ಚೆಂಡಿಯಾ, ತೋಡೂರು, ಮುದಗಾ, ಬಿಣಗಾ ಪ್ರದೇಶದ ಜನ ಅನುಭವಿಸಿದ ಹಿಂಸೆ ಯಾರಿಗೂ ಬೇಡ. ನೌಕಾನೆಲೆಯವರ ಅತಿರೇಕದ ವರ್ತನೆಯಿಂದ ಆ ಭಾಗದಲ್ಲಿ ಕೃತಕ ಪ್ರವಾಹ ಎದುರಾಗಿದ್ದು, ಜನರ ಜೊತೆ ಜಿಲ್ಲಾಡಳಿತವೂ ಹೈರಣಾಗಿತ್ತು. ಹೀಗಾಗಿ ಈ ಬಾರಿ…

ಮೋದಿ ಮೊದಲಿಸಿದ ಪಾಕಿಸ್ತಾನದ ಭಕ್ತ!

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊದಲಿಸಿದ ದಾಂಡೇಲಿಯ ದುಲೆಸಾಹೇಬ ಮುನಿರಸಾಬ ಸವಣೂರ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ಸಂಜೆ ದುಲೆಸಾಹೇಬ `ಹಮ್ ಸಾಥ್ ಸಾಥ್ ಹೈ’ ಎಂಬ ವಾಟ್ಸಪ್ ಗುಂಪಿನಲ್ಲಿ ನಿಂದನಾರ್ಹ ಸಂಗತಿ ಪೊಸ್ಟ್ ಮಾಡಿದ ಕಾರಣ ಕಾನೂನು ಕ್ರಮವಾಗಿದೆ. ಭಾರತದ…

ಬೈಕಿನ ಜೊತೆ ಕಳ್ಳನೂ ಸಿಕ್ಕಿಬಿದ್ದ: ಆತ ಚಾಲಕ ಅಲ್ಲ.. ಬಾಲಕ!

ಬೇರೆಯವರ ಬೈಕ್ ಕದ್ದು ಪರಾರಿಯಾಗಿದ್ದ ಬಾಲಕನನ್ನು ಮುಂಡಗೋಡಿನ ಪೊಲೀಸರು ಹಿಡಿದಿದ್ದಾರೆ. ಬೈಕ್ ಓಡಿಸಲು ಲೈಸನ್ಸ್ ಸಹ ಇಲ್ಲದ ಹುಡುಗ ಇದೀಗ ಪೊಲೀಸರ ಆತಿಥ್ಯದಲ್ಲಿದ್ದು, ಪೊಲೀಸರು ಆತನ ಬಾಯಿಂದ ಸತ್ಯ ಹೊರಡಿಸಿದ್ದಾರೆ. ಮೇ 15ರಂದು ಮುಂಡಗೋಡಿನ ಅಂಬೇಡ್ಕರ್ ಓಣಿಯಲ್ಲಿದ್ದ ಬೈಕ್ ಕಳ್ಳತನವಾಗಿತ್ತು. ತುಕಾರಾಮ…

ಕಾಡಿನ ಮಕ್ಕಳಿಗೆ ಭೂಮಿ ಸಮಸ್ಯೆ: ಮುಖ್ಯಮಂತ್ರಿ ಮೊರೆಹೋದ ಮಾಜಿ ಸಚಿವ!

ಅನಾಧಿಕಾಲದಿಂದಲೂ ಅರಣ್ಯ ಅತಿಕ್ರಮಿಸಿಕೊಂಡಿರುವ ಬಡ ಜನರ ಬಗ್ಗೆ ಹೋರಾಟ ನಡೆಸುತ್ತಿರುವ ಹಿರಿಯ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಅವರು ಹೋರಾಟದ ಮುಂದಿನ ಹಾದಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. `ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳ ಸಾಗುವಳಿ…

ಶಿರಸಿ | ನಗರಸಭೆ ಅಧ್ಯಕ್ಷರಿಗೆ ಅವಮಾನ: ಎಸಿ ವಿರುದ್ಧ ಬೆಂಕಿ ಬಿರುಗಾಳಿ!

ಉಪರಾಷ್ಟ್ರಪತಿ ಜಗದೀಪ ಧನಕರ್ ಅವರು ಶಿರಸಿಗೆ ಬಂದಾಗ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅವರು ಉಪರಾಷ್ಟ್ರಪತಿಗಳನ್ನು ಸ್ವಾಗತಿಸಬೇಕಿತ್ತು. ಆದರೆ, ಜಿಲ್ಲಾಡಳಿತ ಇದಕ್ಕೆ ಅವಕಾಶವನ್ನೇ ಕೊಡಲಿಲ್ಲ! ಉಪರಾಷ್ಟ್ರಪತಿ  ಜಗದೀಪ ಧನಕರ್ ಅವರು ಶಿರಸಿಗೆ ಬಂದಾಗ ಉತ್ತರ ಕನ್ನಡ ಜಿಲ್ಲಾಡಳಿತ ಮೊದಲು ನಗರಸಭೆ ಅಧ್ಯಕ್ಷೆ…

You cannot copy content of this page