6
ಸಾವಿರಾರು ಜೀವ ಉಳಿಸಿದ ಪುಣ್ಯಾತ್ಮ ಈತ!

ಕೊಂಕಣ ರೈಲ್ವೆ ವಿಭಾಗದಲ್ಲಿ ಹಳಿಗಳ ನಿರ್ವಹಣೆ ನೋಡಿಕೊಳ್ಳುವ ಮಹಾದೇವ ನಾಯ್ಕ ಎಂಬಾತರ ಸಮಯ ಪ್ರಜ್ಞೆಯಿಂದ ಸಾವಿರಾರು ಜನರ ಜೀವ ಉಳಿದಿದೆ. 5 ನಿಮಿಷದಲ್ಲಿ 500ಮೀ ಓಡಿದ ಅವರು ಅಪಾಯದ ಸ್ಥಿತಿ ಎದುರಾಗುವ ಮುನ್ನ ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿದ್ದಾರೆ. ಮೊನ್ನೆ ಕೊಂಕಣ ರೈಲ್ವೆ…

BSNL ಗ್ರಾಹಕರಿಗೆ ಮುಖ್ಯ ಸೂಚನೆ..

BSNL ಕಚೇರಿ ವ್ಯವಸ್ಥೆ ಇದೀಗ ಡಿಜಿಟಲೀಕರಣಗೊಂಡಿದ್ದು, ಕಾಗದದ ಅರ್ಜಿ ಭರ್ತಿ ಮಾಡಿ ಮೊಬೈಲ್ ಸಿಮ್ ಪಡೆದ ಎಲ್ಲರೂ ಡಿಜಿಟಲ್ ಮೋಡ್ ಮೂಲಕ ತಮ್ಮ ಗುರುತು ಪರಿಶೀಲಿಸುವಂತೆ ಸೂಚಿಸಲಾಗಿದೆ. ಈ ಪ್ರಕ್ರಿಯೆಗೆ ಯಾವುದೇ ಶುಲ್ಕವಿಲ್ಲ. ಆದರೆ, ಕಚೇರಿ ಓಡಾಟ ಅನಿವಾರ್ಯ! ಈ ಗುರುತು…

ಅಕ್ರಮ ಖಾತಾ ಬದಲಾವಣೆ ತಡೆಗೆ ಈ ಕೆಲಸ ಕಡ್ಡಾಯ!

`ಉತ್ತರ ಕನ್ನಡ ಜಿಲ್ಲೆಯಲ್ಲಿ ರೈತರ ಜಮೀನು ಅಕ್ರಮವಾಗಿ ಬೇರೆಯವರ ಪಾಲಾಗುವುದನ್ನು ತಡೆಯಲು ಎಲ್ಲರೂ ತಮ್ಮ ಪಹಣಿಗೆ ಆಧಾರ್ ಜೋಡಣೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಹೇಳಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳ ಬಳಿ ಆಧಾರ್ ಹಾಗೂ ಅದಕ್ಕೆ ನೀಡಲಾದ ಮೊಬೈಲ್ ನಂ ತೆಗೆದುಕೊಂಡು…

ಸದ್ಯಕ್ಕೆ ಇಲ್ಲ ಕೊರೊನಾ ಆತಂಕ: ಸರ್ಕಾರದಿಂದಲೇ ಮಾನವ ಸರಪಳಿ ನಿರ್ಮಾಣಕ್ಕೆ ಕರೆ!

ಕಳೆದ ತಿಂಗಳಿನವರೆಗೂ ಸರ್ಕಾರದ ವಿವಿಧ ಪತ್ರ ವ್ಯವಹಾರಗಳಲ್ಲಿ `ಸಾಮಾಜಿಕ ಅಂತರ’ ಕಾಪಾಡುವಂತೆ ಸೂಚಿಸುತ್ತಿದ್ದ ಸರ್ಕಾರ ಇದೀಗ ಮಾನವ ಸರಪಳಿ ನಿರ್ಮಾಣಕ್ಕೆ ಕರೆ ನೀಡಿದ್ದು, ಕೊರೊನಾ ಆತಂಕ ದೂರವಾಗಿದೆ. ಸೆಪ್ಟಂಬರ್ 15ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜಿಲ್ಲೆಯ ಹಳಿಯಾಳ ತಾಲೂಕಿನ ಮಾವಿನಕೊಪ್ಪದಿಂದ…

ವಿದೇಶದಲ್ಲಿ ಶಕ್ತಿ ಪ್ರದರ್ಶನ: ಪುಠಾಣಿಗೆ ಒಲಿದ ಬೆಳ್ಳಿ ಪದಕ!

ಹಂಗೇರಿಯಲ್ಲಿ ನಡೆಯುತ್ತಿರುವ 2024ರ ಅಂತಾರಾಷ್ಟ್ರೀಯ `ವಾಕೋ ಯೂಥ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನಶಿಪ್’ ಸ್ಪರ್ಧೆಯಲ್ಲಿ ಕಾರವಾರದ ಅವನಿ ಬೆಳ್ಳಿ ಪದಕ ಗೆದ್ದಿದ್ದಾರೆ. ಕಿಕ್ ಬಾಕ್ಸಿಂಗ್ ಕೋಚ್ ಸೂರಜ್ ಮೋಹನ್ ಹಾಗೂ ಇಸ್ಮಾಯಿಲ್ ಗರಡಿಯಲ್ಲಿ ಅವನಿ ಪಳಗಿದ್ದು, ಐಗಳ ಮಾರ್ಶಲ್ ಆರ್ಟ್ಸ್’ನ ವಿದ್ಯಾರ್ಥಿನಿ.…

IAS ಓದಲು ಅಲ್ಪ ಸಂಖ್ಯಾತರಿಗೆ ತರಬೇತಿ

IAS ಹಾಗೂ KAS ಅಧಿಕಾರಿಯಗಲು ಬಯಸುವ ಅಲ್ಪ ಸಂಖ್ಯಾತ ಸಮುದಾಯದವರಿಗೆ ಸರ್ಕಾರದಿಂದ ತರಬೇತಿ ನೀಡಲಾಗುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಅಭ್ಯರ್ಥಿಗಳಿಗೆ ವಸತಿಸಹಿತ ಪರೀಕ್ಷಾ ಪೂರ್ವಭಾವಿ ತರಬೇತಿ…

ಚಲಿಸುವ ರೈಲಿನಲ್ಲಿ ಕಿರುಕುಳ: ಸಂತ್ರಸ್ತೆ ನೀಡಿದ ಫೋಟೋ ನೋಡಿ ವಿದ್ಯಾರ್ಥಿ ಸೆರೆ!

ಬೆಂಗಳೂರು-ಮುರುಡೇಶ್ವರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಜೊತೆ ಅನುಚಿತವಾಗಿ ವರ್ತಿಸಿದ ಭಟ್ಕಳದ ಶುರೈಮ್ (22) ಎಂಬಾತನನ್ನು ಮಣಿಪಾಲಿನ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ನೀಡಿದ ಫೋಟೋ ಆಧರಿಸಿ ಅಪರಾಧ ನಡೆದ 20 ಗಂಟೆಯೊಳಗೆ ಬಂಧಿಸಿದ್ದಾರೆ. ಸoತ್ರಸ್ತೆ ಉಡುಪಿಯ ಗುಡ್ಡೆಯಂಗಡಿ ನಿವಾಸಿ. ಬೆಂಗಳೂರಿನ ಐಟಿ ಸಂಸ್ಥೆಯಲ್ಲಿ…

ಯುದ್ಧನೌಕೆ ರಹಸ್ಯ ಹೇಳಿದವರಿಗೆ ವಿದೇಶಿ ಹಣ: ಅವರಿಗೆ ಸಂಬಳಕ್ಕಿoತಲೂ ಲಂಚವೇ ಶ್ರೇಷ್ಠ!

ಆ ಮೂವರಿಗೂ ನೌಕಾನೆಲೆಯಲ್ಲಿ ಉತ್ತಮ ವೇತನ ಸಿಗುತ್ತಿತ್ತು. ಆದರೂ, ಮೂರು ಕಾಸಿನ ಲಂಚದ ಆಸೆಗೆ ಅವರು ಭಾರತೀಯ ನೌಕಾಸೇನೆಯ ಮಾಹಿತಿಗಳನ್ನು ಶತ್ರು ದೇಶಗಳಿಗೆ ರವಾನಿಸುತ್ತಿದ್ದರು. ಈ ಹಿನ್ನಲೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿ ಮೂವರನ್ನು ವಶಕ್ಕೆ…

ಹಳವಳ್ಳಿ ಬದಲು ಹನೆಹಳ್ಳಿಯಲ್ಲಿ ಹುಡುಕಾಟ: ದಾರಿ ತಪ್ಪಿದ ತನಿಖಾ ದಳ!

ಕುಮಟಾ: ದೇಶ ವಿರೋಧಿ ಚಟುವಟಿಕೆ ನಡೆಸಿದವರನ್ನು ವಶಕ್ಕೆ ಪಡೆಯಲು ಜಿಲ್ಲೆಗೆ ಆಗಮಿಸಿದ ರಾಷ್ಟ್ರೀಯ ತನಿಖಾ ದಳದವರು ವ್ಯಕ್ತಿಯೊಬ್ಬರನ್ನು ಹುಡುಕಿ ಕುಮಟಾದ ಹನೆಹಳ್ಳಿಗೆ ಬಂದಿದ್ದರು. ಹಳವಳ್ಳಿಗೆ ತೆರಳುವ ಬದಲು ಹನೆಹಳ್ಳಿಗೆ ಬಂದಿದ್ದೇ ಎಲ್ಲಾ ಪ್ರಮಾದಗಳಿಗೆ ಮೂಲ ಕಾರಣ! ಹನೇಹಳ್ಳಿಗೆ NIA ಅಧಿಕಾರಿಗಳು ಭೇಟಿ…

ರಕ್ಷಣಾ ಇಲಾಖೆಗೆ ಇಲ್ಲ ರಕ್ಷಣೆ: ನೌಕಾನೆಲೆಯೊಳಗಿದ್ದ ಆಗಂತುಕರ ಸೆರೆ!

ಕಾರವಾರ: ಭಾರತೀಯ ನೌಕಾನೆಲೆಯೊಳಗೆ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಇಲ್ಲಿನ ರಹಸ್ಯಗಳನ್ನು ವಿದೇಶಿ ಅಧಿಕಾರಿಗಳಿಗೆ ತಿಳಿಸುತ್ತಿದ್ದರು. ನೌಕಾನೆಲೆಯ ಫೋಟೋ-ಮಾಹಿತಿಯನ್ನು ಅವರು ಹರಿಬಿಟ್ಟು ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿದ್ದರು. ಈ ಹಿನ್ನಲೆ ಅಂಥ ಮೂವರು ದೇಶದ್ರೋಹಿಗಳನ್ನು ರಾಷ್ಟ್ರೀಯ ತನಿಖಾ ದಳದ…

You cannot copy content of this page