6
ಅಕ್ಕಸಾಲಿಗನಿಗೆ ಮೋಸ ಮಾಡಿದ ಬಂಗಾರದ ಮನುಷ್ಯ!

ಬಂಗಾರದ ಆಭರಣಗಳನ್ನು ತಯಾರಿಸುವ ರೋಹಿತ ಕೋಲ್ವೆಕರ್ ಅವರಿಗೆ ಅವರ ಬಳಿ ಕೆಲಸಕ್ಕಿದ್ದ ರಂಜನ್ ಮೈತಿ ಮೋಸ ಮಾಡಿದ್ದಾರೆ. ಕಾರವಾರದ ಸುಂಕೇರಿ ಕಠಿಣಕೋಣ ಮೂರು ದೇವಸ್ಥಾನದ ಹತ್ತಿರ ರೋಹಿತ ಕೋಲ್ವೆಕರ್ ಅವರು ವಾಸಿಸುತ್ತಾರೆ. ಅವರು ತಮ್ಮ ಮನೆಯಲ್ಲಿಯೇ `ಸಶ್ಮಿ ಜ್ಯುವೆಲರಿ’ ಎಂಬ ಉದ್ದಿಮೆ…

ಫ್ಲೈ ಓವರ್’ಗೆ ಗುದ್ದಿದ ಕಾರು: ಗುತ್ತಿಗೆದಾರನಿಂದ ದೂರು!

ಜಿಲ್ಲಾಧಿಕಾರಿ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತವಾಗಿದೆ.  ಫ್ಲೈ ಓವರ್ ಕಂಬಕ್ಕೆ ಕಾರು ಗುದ್ದಿದ ಪರಿಣಾಮ ಕಾರಿನ ಚಾಲಕ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಕಾರವಾರ ಕಾಜುಭಾಗ ಬಳಿಯ ಕೆಂಚಾ ರಸ್ತೆಯ ಲಕ್ಷ್ಮೀಶ ಕಳಸ (27) ಜನವರಿ 30ರ ರಾತ್ರಿ ಕಾರು ಓಡಿಸುತ್ತಿದ್ದರು.…

ಹಿಟಾಚಿ ಕೆಲಸ: ಕಾಮಗಾರಿ ವೀಕ್ಷಣೆಗೆ ಜನವೋ ಜನ!

ಹಲವು ಊರಿನ ಸಂಪರ್ಕ ಬೆಸೆಯುವ ಬಾಂದಾರು ಹಾಗೂ ಸೇತುವೆ ಕೆಲಸಕ್ಕೆ ಶಿರಸಿಯಲ್ಲಿ ವಿರೋಧ ವ್ಯಕ್ತವಾಗಿದೆ. ಆ ವಿರೋಧಕ್ಕೆ ವಿರೋಧ ವ್ಯಕ್ತಪಡಿಸಿದ ಹಲವು ಗ್ರಾಮೀಣ ಭಾಗದ ಜನ ಶುಕ್ರವಾರ ಕಾಮಗಾರಿ ನಡೆಯುವ ಸ್ಥಳಕ್ಕೆ ಆಗಮಿಸಿ ಕೆಲಸ ನಿಲ್ಲಿಸದಂತೆ ಹಕ್ಕೊತ್ತಾಯ ಮಾಡಿದರು. ಶಿರಸಿ ತಾಲೂಕಿನ…

ಮಹಿಳೆ ನೋವಿಗೆ ಮಿಡಿದ ಮಾಜಿ ಶಾಸಕಿಯ ಮನ!

ಕಾನ್ಸರ್ ರೋಗದಿಂದ ಬಳಲಿ ಚಿಕಿತ್ಸೆ ಪಡೆದಿರುವ ಕಮಲಾ ಹೊಕಳೆ ಅವರಿಗೆ ಮುಖ್ಯಮಂತ್ರಿ ವೈದ್ಯಕೀಯ ನಿಧಿಯಿಂದ ನೆರವು ನೀಡುವಂತೆ ಕುಮಟಾ ಮಾಜಿ ಶಾಸಕಿ ಶಾರದಾ ಶೆಟ್ಟಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಕುಮಟಾ ಹೊಲನಗದ್ದೆ ಗ್ರಾಮದ ಕಮಲಾ ಹೋಕಳೆ ಅವರು ಸ್ಥನ ಕಾನ್ಸರಿನಿಂದ…

ಮಾಗೋಡು ಆಲೆಮನೆ: ಪ್ರವೇಶ ಉಚಿತ.. ನೊರೆ ಬೆಲ್ಲದ ಸವಿ ಖಚಿತ!

ಏಳು ವರ್ಷಗಳ ಹಿಂದೆ ಯಲ್ಲಾಪುರ ತಾಲೂಕಿನಲ್ಲಿ `ಆಲೆಮನೆ ಹಬ್ಬ’ ಪರಿಚಯಿಸಿದ ಮಾಗೋಡಿನವರು ಇದೀಗ 8ನೇ ವರ್ಷದ ಆಲೆಮನೆ ಹಬ್ಬದ ತಯಾರಿ ನಡೆಸಿದ್ದಾರೆ. ಫೆಬ್ರವರಿ 1ರ ಸಂಜೆ 5 ಗಂಟೆಗೆ ಮಾಗೋಡು ಕಾಲೋನಿಯಲ್ಲಿ ತಾಜಾ ಕಬ್ಬಿನ ಹಾಲು ವಿತರಣೆ ನಡೆಯಲಿದೆ. ಕಬ್ಬಿನ ಹಾಲು…

ಸರ್ಕಾರಿ ಬಸ್ಸಿಗೆ ಗುದ್ದಿದ ಟಿಪ್ಪರ್: 15ಕ್ಕೂ ಅಧಿಕ ಜನರಿಗೆ ಗಾಯ

ಪ್ರಯಾಣಿಕರನ್ನು ಹೊತ್ತು ಸಾಗಿಸುತ್ತಿದ್ದ ಸರ್ಕಾರಿ ಬಸ್ಸಿಗೆ ಟಿಪ್ಪರ್ ಗುದ್ದಿದೆ. ಪರಿಣಾಮ 15ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಸಿದ್ದಾಪುರ ತಾಲೂಕಿನ ಮಾವಿನಗುಂಡಿ ಸರ್ಕಲ್ ಬಳಿ ಗುರುವಾರ ಈ ಅವಘಡ ನಡೆದಿದೆ. ಬಸ್ಸಿನಲ್ಲಿ 55 ಪ್ರಯಾಣಿಕರು ಸಂಚರಿಸುತ್ತಿದ್ದರು. ವೇಗವಾಗಿ ಬಂದ ಟಿಪ್ಪರ್ ಚಾಲಕ ತನ್ನ…

ಪೊಲೀಸರ ಬಲೆಗೆ ಬಿದ್ದ ಮತ್ತೊಬ್ಬ ಹಸು ಕಳ್ಳ!

ಗೋ ಕಳ್ಳತನವೂ ಸೇರಿ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಭಟ್ಕಳದ ಫಾರುಕ್ ಭೋಗಿಬಾಷಾ ಎಂಬಾತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಿರಾಳಕೊಪ್ಪದ ಹಳ್ಳೂರುಕೇರಿಯ ಪಾರುಕ್ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿ ಕಳ್ಳತನ…

ದೇವಾಲಯದ ಮುಂದೆ ಮದ್ಯ ಮಾರಾಟ: ಪೊಲೀಸರಿಂದ ತಡೆ

ದೇವಾಲಯ ಹಾಗೂ ಬಸ್ ನಿಲ್ದಾಣದ ಮುಂದೆ ಶೆಡ್ ನಿರ್ಮಿಸಿ ಸರಾಯಿ ಮಾರಾಟ ಮಾಡುತ್ತಿದ್ದವರ ವಿರುದ್ಧ ಬನವಾಸಿ ಪೊಲೀಸ್ ಠಾಣೆಯ ಪಿಎಸ್‌ಐ ಚಂದ್ರಕಲಾ ಪತ್ತಾರ್ ಕಾನೂನು ಕ್ರಮ ಜರುಗಿಸಿದ್ದಾರೆ. ಸಿದ್ದಾಪುರ ಅರೆಹಳ್ಳಿಯ ವ್ಯಾಪಾರಿ ನಾಗರಾಜ ನಾಯ್ಕ ಅವರು ಬನವಾಸಿ ಕೊಪ್ಪ ಬಳಿಯ ಗಣಪತಿ…

ಗರ್ಭಿಣಿ ಗೋ ಹತ್ಯೆ ಪ್ರಕರಣ: ಕದ್ದ ಮಾಂಸ ತಿನ್ನಲ್ಲ ಎಂದ ತಜೀಂ ಅಧ್ಯಕ್ಷ!

`ಮುಸ್ಲಿಂ ಸಮುದಾಯದವರು ಗೋಮಾಂಸ ಸೇವಿಸುವುದು ಸತ್ಯ. ಆದರೆ, ಎಂದಿಗೂ ಕದ್ದ ಮಾಂಸವನ್ನು ತಿನ್ನುವುದಿಲ್ಲ’ ಎಂದು ಭಟ್ಕಳದ ತಜೀಂ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ಹೇಳಿದ್ದಾರೆ. `ಹೊನ್ನಾವರದಲ್ಲಿ ಗರ್ಭ ಧರಿಸಿದ ಗೋವನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಭಟ್ಕಳದ ಹೆಸರು ಕೇಳಿ ಬಂದಿದೆ. ಆದರೆ, ಕಳ್ಳತನದಿಂದ…

ಅಕ್ರಮ ರೆಸಾರ್ಟ ವಿರುದ್ಧ ಅಧಿಕಾರಿಗಳ ಮೌನ!

`ಅಕ್ರಮ ರೆಸಾರ್ಟ ನಿರ್ಮಾಣದ ವಿರುದ್ಧ ಸಾಕಷ್ಟು ದೂರು ಸಲ್ಲಿಸಿದರೂ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ’ ಎಂದು ಕುಮಟಾದ ಈಶ್ವರ ಗೌಡ ದೂರಿದ್ದಾರೆ. `ಕುಮಟಾ ತಾಲೂಕಿನ ನಾಡಮಾಸ್ಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನಧಿಕೃತ ರೆಸಾರ್ಟ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ.…

You cannot copy content of this page