6
ಚಿನ್ನದ ಆಸೆಗೆ ಮನೆ ಮುರಿದ ಕಳ್ಳ!

ಶಿರಸಿ: ಕಸ್ತೂರಬಾ ನಗರದ ವಿಶ್ವೇಶ್ವರ ಬಡಾವಣೆಗೆ ಬಂದ ಕಳ್ಳರು ಮನೆಯ ಹಂಚು ತೆಗೆದು ಒಳಗೆ ಪ್ರವೇಶಿಸಿದ್ದಾರೆ. ನಂತರ ಮನೆಯೊಳಗಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ನಾಗರಾಜ ವಾಸುದೇವ ನಿಲೇಕಣಿ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯಲ್ಲಿದ್ದ 1.31 ಲಕ್ಷ ರೂ ಮೌಲ್ಯದ…

ವೃದ್ಧನಿಗೆ ಗುದ್ದಿದ ಕಾರು: ನಿವೃತ್ತ ಶಿಕ್ಷಕನ ವಿರುದ್ಧ ದೂರು!

ಶಿರಸಿ: ಶಿರಸಿ-ಕುಮಟಾ ರಸ್ತೆಯ ವಡ್ಡಗೇರಿ ಕ್ರಾಸಿನ ಬಳಿ ನಡೆದ ಅಪಘಾತದಲ್ಲಿ 71 ವರ್ಷದ ವೃದ್ಧರೊಬ್ಬರಿಗೆ ಗಾಯವಾಗಿದೆ. ಈ ಅಪಘಾತಕ್ಕೆ ಕಾರಣರಾದ 75 ವರ್ಷದ ವೃದ್ಧರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಡಿ 20ರಂದು ಸಂಜೆ ಶಿರಸಿಯ ಹಣಗಾರಿನ ನಿವೃತ್ತ ಶಿಕ್ಷಕ ಗಜಾನನ…

ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕ ಔಷಧಿ ಕಳ್ಳ.. ಆತ ಕಳ್ಳ ಅಲ್ಲ ವೈದ್ಯ!

ಕಾರವಾರ: ಸರ್ಕಾರಿ ಆಸ್ಪತ್ರೆಯ ಔಷಧ ವಿತರಣಾ ಕೇಂದ್ರದಲ್ಲಿದ್ದ ಔಷಧಿ ಡಬ್ಬಿಗಳು ಕಣ್ಮರೆಯಾಗಿದ್ದು, ಆಸ್ಪತ್ರೆಯ ವೈದ್ಯರೊಬ್ಬರು ಅದನ್ನು ಅನಧಿಕೃತವಾಗಿ ಕೊಂಡೊಯ್ದಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿನ ಔಷಧ ವಿತರಣಾ ಕೇಂದ್ರದಲ್ಲಿದ್ದ ದಾಸ್ತಾನು ಹಾಗೂ ರಿಜಿಸ್ಟರ್ ಪುಸ್ತಕದಲ್ಲಿದ್ದ ಔಷಧಿ ನಡುವೆ ವ್ಯತ್ಯಾಸ…

ಸಿಬ್ಬಂದಿ ಕೊರತೆ | ಕೆಲಸ ಬಿಟ್ಟು ಕಸ ಗುಡಿಸಿದ ತಹಶೀಲ್ದಾರ್!

ಕುಮಟಾ: ನೂತನವಾಗಿ ನಿರ್ಮಿಸಿದ ಆಡಳಿತ ಸೌಧದಲ್ಲಿ ಸ್ವಚ್ಛತಾ ಸಿಬ್ಬಂದಿ ಕೊರತೆಯಿಂದ ಕಸ ಗುಡಿಸುವವರು ಇಲ್ಲ. ಹೀಗಾಗಿ ಸಹಾಯಕ ಆಯುಕ್ತರ ಕಚೇರಿಯ ತಹಶೀಲ್ದಾರ್ ಅಶೋಕ ಭಟ್ಟ ಹಾಗೂ ತಾಲೂಕಾ ದಂಡಾಧಿಕಾರಿ ಸತೀಶ್ ಗೌಡ ಸೇರಿ ಸಿಬ್ಬಂದಿ ಜೊತೆ ಕಚೇರಿಯ ಕಸ ಗುಡಿಸಿದರು! ತಾಲೂಕಾ…

ಸರ್ಕಾರಿ ಸರಾಯಿ ಅಂಗಡಿಯಲ್ಲಿನ ಕಾಸು ಕಾಣೆ!

ಕಾರವಾರ: ಹಬ್ಬುವಾಡದಲ್ಲಿರುವ MSIL ಮದ್ಯದ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಶುಕ್ರವಾರ ರಾತ್ರಿ ಈ ಕಳ್ಳತನ ನಡೆದಿದ್ದು, ಶನಿವಾರ ಬೆಳಗ್ಗೆ ಅಂಗಡಿ ಬಾಗಿಲು ತೆರೆದಾಗ ಅಲ್ಲಿದ್ದ ಹಣ ನಾಪತ್ತೆಯಾಗಿರುವುದು ಗೊತ್ತಾಗಿದೆ. ಶುಕ್ರವಾರ ರಾತ್ರಿ 10 ಗಂಟೆಗೆ ಅಲ್ಲಿನ ಸಿಬ್ಬಂದಿ ಮದ್ಯದ ಮಳಿಗೆಯ ಬಾಗಿಲು…

ರೋಗಕ್ಕೆ ಬೆದರಿ ಜೀವ ಬಿಟ್ಟ!

ಮುಂಡಗೋಡ: ನಾಲ್ಕು ತಿಂಗಳಿನಿoದ ಅನಾರೋಗ್ಯಕ್ಕೆ ಒಳಗಾಗಿದ್ದ ಸಯ್ಯದ ಮಕ್ಬುಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಡಗೋಡು ಸುಭಾಶನಗರದ ಸಯ್ಯದ್ ಮಕ್ಬುಲ್ ಕೂಲಿ ಕೆಲಸ ಮಾಡಿಕೊಂಡಿದ್ದರು. ನಾಲ್ಕು ತಿಂಗಳಿನಿoದ ಮಾನಸಿಕವಾಗಿ ಕುಗ್ಗಿದ್ದರು. ಯಾವ ಆಸ್ಪತ್ರೆಗೆ ತೋರಿಸಿದರೂ ಪ್ರಯೋಜನವಾಗಿರಲಿಲ್ಲ. ಅನಾರೋಗ್ಯದ ಕಾರಣ ಸದಾ ಬೇಸರದಲ್ಲಿರುತ್ತಿದ್ದರು. ಡಿ 20ರಂದು…

ಕೆಎಸ್‌ಆರ್‌ಟಿಸಿ | ಬಸ್ಸಿಗೆ ಗುದ್ದಿ ಸ್ಕೂಟಿ: ಸಾವು

ಹಳಿಯಾಳ: ಸುಚಿತ್ರಾ ವೈನ್‌ಶಾಫಿನಲ್ಲಿ ಕೆಲಸ ಮಾಡುವ ಸುನೀಲ ಶೆಟ್ಟಿ ಕೆಎಸ್‌ಆರ್‌ಟಿಸಿ ಬಸ್ಸಿಗೆ ತಮ್ಮ ಸ್ಕೂಟಿ ಗುದ್ದಿ ಸಾವನಪ್ಪಿದ್ದಾರೆ. ಡಿ 20ರಂದು ಸಂಜೆ ಅವರು ತೆರಗಾವ್ ತರ್ಪಿನಿಂದ ಹಳಿಯಾಳ ಕಡೆ ಸ್ಕೂಟಿ ಓಡಿಸಿಕೊಂಡು ಹೋಗುತ್ತಿದ್ದರು. ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಅವರು ಸ್ಕೂಟಿ ಗುದ್ದಿದರು.…

ಮನೆ ಬಿಟ್ಟು ಹೋದ ಬುದ್ದಿಮಾಂದ್ಯ: ಎಲ್ಲಡೆ ಹುಡುಕಾಟ

ಮುಂಡಗೋಡ: ನೆಹರುನಗರದ ಪ್ರಕಾಶ ಭಸ್ಮೆ (36) ಕಾಣೆಯಾಗಿದ್ದಾರೆ. ಬುದ್ದಿಮಾಂದ್ಯರಾಗಿರುವ ಅವರು ಆಗಾಗ ಎಲ್ಲಾದರೂ ಹೋಗುತ್ತಿದ್ದರು. ಅದಾದ ಕೆಲ ಹೊತ್ತಿನ ಬಳಿಕ ಮನೆಗೆ ಮರಳುತ್ತದ್ದರು. ಆದರೆ, ಡಿ 12ರಂದು ಮನೆ ಬಿಟ್ಟು ಹೋದ ಅವರು ಈವರೆಗೂ ಮರಳಿ ಬಂದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ…

ಲಾರಿ-ಟ್ಯಾಂಕರ್ ನಡುವೆ ಮುಖಾಮುಖಿ

ಅಂಕೋಲಾ: ಮಾಸ್ತಿಕಟ್ಟಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಟ್ಯಾಂಕರ್ ನಡುವೆ ಅಪಘಾತವಾಗಿದೆ. ಈ ಅಪಘಾತದಲ್ಲಿ ಲಾರಿ ಚಾಲಕನ ಕಾಲಿಗೆ ಪೆಟ್ಟಾಗಿದೆ. ಡಿ 19ರ ರಾತ್ರಿ 10.45ಕ್ಕೆ ಹಾಸನದ ಇಸ್ಮಾಯಲ್ ಎಂಬ ಚಾಲಕ ಲಾರಿ ಓಡಿಸುತ್ತಿದ್ದ. ಆತ ಕುಮಟಾದಿಂದ ಅಂಕೋಲಾ ಕಡೆ ಚಲಿಸುತ್ತಿದ್ದು,…

ಅರಣ್ಯಾಧಿಕಾರಿ-ಅರಣ್ಯವಾಸಿ ನಡುವಿನ ಸೌಹಾರ್ದ ಸಭೆ ವಿಫಲ!

ಹೊನ್ನಾವರ: ಅತಿಕ್ರಮಣದಾರರು ಹಾಗೂ ಅಧಿಕಾರಿಗಳ ನಡುವೆ ಸಾಮರಸ್ಯ ಕಾಪಾಡುವುದದಕ್ಕಾಗಿ ಹೊನ್ನಾವರದಲ್ಲಿ ಕರೆದಿದ್ದ ಸಭೆ ವಿಫಲವಾಗಿದೆ. ಉತ್ತರ ಕನ್ನಡ ಜಿಲ್ಲೆಯ ನಾಲ್ಕು ದಿಕ್ಕಿನಿಂದ ಅತಿಕ್ರಮಣದಾರರು ಸಭೆಗೆ ಹಾಜರಾಗಿದ್ದರೂ ಅರಣ್ಯ ಅಧಿಕಾರಿಗಳು ಅಲ್ಲಿ ಬರಲಿಲ್ಲ. ಹೀಗಾಗಿ ಅತಿಕ್ರಮಣದಾರರು ಹೋರಾಟ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದು ಸಭೆಯನ್ನು…

You cannot copy content of this page