6
ಪ್ರವೇಶವಿಲ್ಲದ ಗರ್ಭಗುಡಿಯೊಳಗೆ ಕಳ್ಳರ ಪ್ರವೇಶ: ಬೀಗದ ಬಂಧನದಲ್ಲಿದ್ದ ಮೂರ್ತಿಗಳು ಕಳ್ಳರ ಪಾಲು!

ಅಂಕೋಲಾ: ಅಪಾರ ದೈವಭಕ್ತರಾಗಿರುವ ಗ್ರಾ ಪಂ ಅಧಿಕಾರಿ ವಿಠ್ಠಲ ಬಾಂದಿ ಅವರ ಮನೆಯಲ್ಲಿನ ದೇವರ ಮೂರ್ತಿಗಳು ಕಳ್ಳತನವಾಗಿದೆ. ಪ್ರವೇಶವಿಲ್ಲದ ಗರ್ಭಗುಡಿಗೆ ಅಳವಡಿಸಿದ ಬೀಗ ಮುರಿದ ಕಳ್ಳರು ಒಳಗೆ ಪ್ರವೇಶಿಸಿ ಅಲ್ಲಿನ ಅಪರೂಪದ ವಿಗ್ರಹಗಳನ್ನು ದೋಚಿದ್ದಾರೆ. ಕಳೆದ ಒಂದು ವರ್ಷದಿಂದ ವಿಠ್ಠಲ ಬಾಂದಿ…

ನಿಷೇಧದ ನಡುವೆಯೂ ಲಾಟರಿ ಮಾರಾಟ: ದೇವರ ಹೆಸರಿನಲ್ಲಿ ಮಹಾ ಮೋಸ!

ಭಟ್ಕಳ: ಮುರುಡೇಶ್ವರ ದೇವಾಲಯದ ಹೆಸರಿನಲ್ಲಿ ವಂಚಕರು ನಿಷೇಧಿತ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ. ದೇವರ ಮೇಲಿನ ಭಕ್ತಿ ಹಾಗೂ ಕಾಸಿನ ಮೇಲಿನ ಮೋಹದಿಂದಾಗಿ ಅನೇಕರು ಆನ್‌ಲೈನ್ ಮೂಲಕ ಈ ಲಾಟರಿ ಟಿಕೆಟ್ ಪಡೆದು ಮೋಸ ಹೋಗಿದ್ದಾರೆ! ಮುರುಡೇಶ್ವರದ ಈಶ್ವರ ಪ್ರತಿಮೆಯ ಚಿತ್ರಣದೊಂದಿಗೆ…

ಜನಸ್ನೇಹಿ ಪೊಲೀಸ್ ಇದೀಗ ಮಕ್ಕಳ ಸ್ನೇಹಿ!

ಯಲ್ಲಾಪುರ: ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡುತ್ತಿರುವ ಪೊಲೀಸರು ಅಲ್ಲಿರುವ ಮಕ್ಕಳ ಮನಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಇದರೊಂದಿಗೆ ಮಕ್ಕಳಲ್ಲಿ ಕಾನೂನು ಅರಿವು ಮೂಡಿಸುವ ಪ್ರಯತ್ನ ಮುಂದುವರೆಸಿದ್ದಾರೆ. ಯಲ್ಲಾಪುರ ತಾಲೂಕಿನ ಕುಂದರಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಪೊಲೀಸರು ಭೇಟಿ ನೀಡಿ…

ಸತ್ಯನಾರಾಯಣ ಕಥೆ | ಪ್ರಸಾದದ ಜೊತೆ ಪಟ್ಟಿ-ಪೆನ್ನು ವಿತರಿಸಿದ ಯುವಕ ಸಂಘ

ಯಲ್ಲಾಪುರ: ಪ್ರತಿ ವರ್ಷವೂ ವಿಭಿನ್ನ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಒಳಿತು ಮಾಡುತ್ತಿರುವ ಗುಳ್ಳಾಪುರದ ಯುವಕ ಸಂಘ ಈ ಬಾರಿ ಶಾಲಾ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗುವಂತೆ ಪಟ್ಟಿ-ಪೆನ್ನು ಹಂಚಿಕೆ ಮಾಡಿದೆ. ಸೋಮವಾರ ಸಂಘದ ಕಟ್ಟಡದಲ್ಲಿ ಸತ್ಯನಾರಾಯಣ ಕಥೆ ನಡೆಸಿ ಅದರ ಪ್ರಸಾದದ ಜೊತೆ…

ವಾಂತಿಗೆ ಬೆದರಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ಯಲ್ಲಾಪುರ: ಸಹಸ್ರಳ್ಳಿಯ ವಿದ್ಯಾರ್ಥಿ ಅಭಿಷೇಕ ಮರಾಠಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಹಸ್ರಳ್ಳಿ ಗ್ರಾಮದ ರಾಮನಕೊಪ್ಪದಲ್ಲಿ ವಾಸವಾಗಿದ್ದ ಶ್ರೀಕಾಂತ ಮರಾಠಿ ಅವರ ಪುತ್ರ ಅಭಿಷೇಕ ಮರಾಠಿ (11 ವರ್ಷ) ಅವರಿಗೆ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಸೋಮವಾರ ಅಭಿಷೇಕ ಮರಾಠಿ ಮನೆಯಲ್ಲಿಯೇ ಇದ್ದರು. ದಿನವಿಡೀ ವಾಂತಿ…

ಬಾವಿಕೊಡ್ಲದ ಬಾವಿಯಲ್ಲಿ ರೇಣುಕಾಳ ಶವ!

ಅಂಕೋಲಾ: ಶಿರೂರಿನ ರೇಣುಕಾ ಗೌಡ ಎಂಬಾತರು ಸೋಮವಾರ ಬಾವಿಗೆ ಹಾರಿ ಜೀವ ಬಿಟ್ಟಿದ್ದಾರೆ. ಮಾನಸಿಕ ಅಸ್ವಸ್ಥರಾಗಿದ್ದ ರೇಣುಕಾ ನಾರಾಯಣ ಗೌಡ (27) ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಬಾವಿಕೊಡ್ಲದ ದೊಡ್ಡಮ್ಮನ ಮನೆಯಲ್ಲಿ ಅವರಿಗೆ ಆರೈಕೆ ನಡೆದಿತ್ತು. ಸೋಮವಾರ ಅವರು ಬಾವಿಗೆ ಹಾರಿ ಸಾವನಪ್ಪಿದ್ದಾರೆ.…

ಭೂ ವಿವಾದ | ಅಕ್ಕಪಕ್ಕದ ಮನೆಯವರ ನಡುವೆ ಮಾರಾಮಾರಿ: ಕಲ್ಲು ತೂರಾಟ!

ಹೊನ್ನಾವರ: ಭೂಮಿ ಹಾಗೂ ಓಡಾಡುವ ರಸ್ತೆ ವಿಷಯವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಅಕ್ಕಪಕ್ಕ ಮನೆಯ ಎರಡು ಕುಟುಂಬದವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಎರಡೂ ಕಡೆಯವರು `ತಮಗೆ ನ್ಯಾಯ ಕೊಡಿಸಿ’ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಹೊನ್ನಾವರದ ಮಂಕಿ…

ಮೀನುಗಾರಿಕೆಗೆ ಹೋದ ದೋಣಿ ಹಿಡಿದು ತಂದಿದ್ದು ಕಾರ್ಮಿಕನ ಶವ!

ಭಟ್ಕಳ: ಮೀನುಗಾರಿಕೆ ನಡೆಸಲು ಆಳ ಸಮುದ್ರಕ್ಕೆ ಹೋಗಿದ್ದ ಮಾಸ್ತಿ ಗೊಂಡ ಶವವಾಗಿದ್ದಾರೆ. ಹೆಬಳೆ ಬಳಿಯ ಸಂಪನಕೇರಿಯ ಒಬ್ಬನಕಲ್’ನ ಮಾಸ್ತಿ ಗೊಂಡ (31) ಡಿ 7ರ ನಸುಕಿನಲ್ಲಿ ಮೀನುಗಾರಿಕೆಗೆ ಹೋಗಿದ್ದರು. `ಸುಶೀಲಾ’ ಎಂಬ ಬೋಟಿನಲ್ಲಿ ಆಳ ಸಮುದ್ರ ತಲುಪಿದ ಅವರು ಕಾಲು ಜಾರಿ…

ಕಾರಿಗೆ ಗುದ್ದಿದ ಬೈಕು: ಇಬ್ಬರಿಗೆ ಗಾಯ

ಶಿರಸಿ: ಶಿರಸಿಯಿಂದ ಯಾಣ ಕಡೆ ಹೊರಟಿದ್ದ ಕಾರಿಗೆ ಎದುರಗಡೆಯಿಂದ ಬಂದ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಹಾವೇರಿಯ ವಿದ್ಯಾರ್ಥಿ ಹಜರೇಸಾಬ ಎಂಬಾತರು ಮಜ್ಮಿಲ್ ಮತ್ತಿಹಳ್ಳಿ ಎಂಬಾತರನ್ನು ಬೈಕಿನಲ್ಲಿ ಕೂರಿಸಿಕೊಂಡು ಹೊರಟಿದ್ದರು. ಯಾಣದಿಂದ ಶಿರಸಿ ಕಡೆ ಬೈಕ್ ಓಡಿಸುತ್ತಿದ್ದ ಹಜರಸಾಬ್…

ದೇವಾಲಯ ಭಕ್ತರಿಗೆ ಶೌಚಾಲಯ ಸೌಕರ್ಯ: ಆನಗೋಡು ಗ್ರಾ ಪಂ ಕಾರ್ಯಕ್ಕೆ ಮೆಚ್ಚುಗೆ!

ಯಲ್ಲಾಪುರ: ಸರ್ಕಾರಿ ಹಣದಲ್ಲಿ ನಿರ್ಮಿಸಲಾದ ಶೌಚಾಲಯಗಳು ನಿರ್ವಹಣೆ ಕೊರತೆ, ಅಶುಚಿತ್ವ ಕಾರಣದಿಂದ ಕಟ್ಟಡಗಳು ಪಾಳು ಬೀಳುವುದೇ ಜಾಸ್ತಿ. ಹೀಗಿರುವಾಗ ಆನಗೋಡಿನ ಗೋಪಾಲಕೃಷ್ಣ ದೇವಾಲಯದ ಉತ್ತಮ ನಿರ್ವಹಣೆ ನೋಡಿ ಸರ್ಕಾರ ಗ್ರಾಮ ಪಂಚಾಯತಗೆ ಪ್ರಶಸ್ತಿ ನೀಡಿದೆ. 2022ರಲ್ಲಿ 3 ಲಕ್ಷ ರೂ ಹಣ…

You cannot copy content of this page