6
ಸಂತ್ರಸ್ತ ಬಾಲಕಿಗೆ ನ್ಯಾಯ ಕೊಡಿಸಿದ ಸರ್ಕಾರಿ ವಕೀಲೆ: ಅತ್ಯಾಚಾರಿಗೆ 20 ವರ್ಷ ಜೈಲು!

ಶಿರಸಿ: ಮದುವೆ ಆಗುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದಲ್ಲದೇ, ಆಕೆಯನ್ನು ಪರರಾಜ್ಯಕ್ಕೆ ಕಳುಹಿಸಲು ಪ್ರಯತ್ನಿಸಿದ್ದ ಸುನೀಲ ಬೋವಿವಡ್ಡರ್’ಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸಂತ್ರಸ್ತೆಗೆ ನ್ಯಾಯ ಕೊಡಿಸುವುದಕ್ಕಾಗಿ ಸರ್ಕಾರಿ ವಕೀಲೆ ತನಿಜಾ ಬಿ ಹೊಸಪಟ್ಟಣ ಅವರು 27…

ಖರೀದಿ ಆಸ್ತಿ | ಅಭಿವೃದ್ಧಿಗೆ ಹೋದವರಿಗೆ ಪೆಟ್ರೋಲ್ ಪ್ರೋಕ್ಷಣೆ!

ದಾಂಡೇಲಿ: ದಾಂಡೇಲಿ ಅಲೈಡ್ ಏರಿಯಾದಲ್ಲಿ ಭೂಮಿ ಖರೀದಿಸಿದ ಮೂವರಿಗೆ ಆತಂಕ ಎದುರಾಗಿದೆ. ತಾವು ಖರೀದಿಸಿದ ಜಾಗದಲ್ಲಿನ ಗಿಡ-ಗಂಟಿ ಸ್ವಚ್ಛ ಮಾಡಲು ತೆರಳಿದವರಿಗೆ ಅಕ್ಕಪಕ್ಕದ ಜನ ಆಗಮಿಸಿ ಪೆಟ್ರೋಲ್ ಸುರಿದಿದ್ದಾರೆ. `ಈ ಭೂಮಿ ಮೇಲೆ ಕಾಲಿಟ್ಟರೆ ಬೆಂಕಿ ಹಚ್ಚಿ ಕೊಲ್ಲುವೆ’ ಎಂದು ಬೆದರಿಕೆ…

ಈ ರಸ್ತೆ ತುಂಬಾ ಕಿಡಿಗೇಡಿಗಳ ಕಾಟ: ರಿಪೇರಿಗೆ ಬಂದ ಬೈಕ್ ಮೇಲೆ ಕಲ್ಲು!

ಕುಮಟಾ: ತದಡಿ-ಗಂಗಾವಳಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಲ್ಲಿನ ರಾಶಿ ಕಾಣುತ್ತಿದೆ. ಚೌಡಗೇರಿ ಬಳಿಯ ಗ್ಯಾರೇಜಿನಲ್ಲಿದ್ದ ಬೈಕನ್ನು ಕಿಡಿಗೇಡಿಗಳು ಕಲ್ಲಿನಿಂದ ಕುಟ್ಟಿದ್ದಾರೆ. ಮಂಗಳವಾರ ರಾತ್ರಿ ಕಿಡಿಗೇಡಿಗಳು ಈ ಮಾರ್ಗದಲ್ಲಿ ಸಂಚಾರ ನಡೆಸಿದ್ದು, ತಮ್ಮ ವಿದ್ವಂಸಕ ಕೃತ್ಯಗಳನ್ನು ಪ್ರದರ್ಶಿಸಿದ್ದಾರೆ. ಬುಧವಾರ ಬೆಳಗ್ಗೆ ರಸ್ತೆ ಮೇಲೆ ಚೀರೆಕಲ್ಲುಗಳು…

ಕಾಸು ಕದ್ದ ಕಳ್ಳಿಗೂ ಕನಿಕರ ತೋರಿದ ಶಾಸಕ ದಿನಕರ!

ಕುಮಟಾ: ಶಾಸಕ ದಿನಕರ ಶೆಟ್ಟಿ ಅವರ ಮನೆಯಲ್ಲಿ 80 ಸಾವಿರ ರೂ ಹಣ ಕಳ್ಳತನವಾಗಿರುವುದು ಸತ್ಯ. ಆದರೆ, ಕಾಸು ಕದ್ದ ಕಳ್ಳಿಯನ್ನು ಕ್ಷಮಿಸುವ ಮೂಲಕ ಅವರು ಉದಾರತನ ತೋರಿದ್ದಾರೆ. ಮಹಿಳೆಯೊಬ್ಬರು ಶಾಸಕ ದಿನಕರ ಶೆಟ್ಟಿ ಅವರ ಮನೆಗೆ ಆಗಮಿಸಿದ್ದರು. ಆರ್ಥಿಕ ಸಂಕಷ್ಟವಿರುವ…

ಕಾಸು ಕೊಟ್ಟರೂ ಮುಂದೆ ಚಲಿಸದ ಬೆಂಗಳೂರು ಬಸ್ಸು!

ಶಿರಸಿ: ಶಿರಸಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಟಯರ್ ಸ್ಪೋಟವಾಗಿದೆ. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಬುಧವಾರ ಬೆಳಗ್ಗೆ 8.30ಕ್ಕೆ ಶಿರಸಿಯಿಂದ ಬೆಂಗಳೂರಿಗೆ ಬಸ್ಸು ಹೊರಟಿತು. ಸಿದ್ದಾಪುರ, ಸಾಗರ, ಕಡೂರು, ಶಿವಮೊಗ್ಗ ಸೇರಿ ನಾನಾ ಭಾಗಗಳಿಗೆ ತೆರಳುವ ಪ್ರಯಾಣಿಕರು ಈ…

ಸಹೋದರರ ಕಾಳಗ | ತಮ್ಮ ಕಾಲು ಕಡಿದ.. ಅಣ್ಣ ತಲೆ ಉರುಳಿಸಿದ: ಶವದ ಮುಂದೆ ಬೀಡಿ ಸೇದುತ್ತಿದ್ದ ಕೊಲೆಗಾರ!

ಹೊನ್ನಾವರ: ಸಹೋದರರ ನಡುವೆ ಆಗಾಗ ನಡೆಯುತ್ತಿದ್ದ ಜಗಳ-ಹೊಡೆದಾಟ ಕೊಲೆಯಲ್ಲಿ ಅಂತ್ಯವಾಗಿದೆ. ಹೈಬೈಲ್ ಹನುಮಂತ ನಾಯ್ಕರ ಮಕ್ಕಳಾದ ನಾಗೇಶ ನಾಯ್ಕ ಕೊಲೆಯಾಗಿದ್ದು, ಇನ್ನೊಬ್ಬ ಮಗ ಸುಬ್ರಾಯ ನಾಯ್ಕ ಜೈಲು ಸೇರಿದ್ದಾನೆ. ಗುಂಡಿಬೈಲ್ ಬಳಿಯ ಹೈಬೈಲ್’ ಸುಬ್ರಾಯ ನಾಯ್ಕ ಹಾಗೂ ನಾಗೇಶ ನಾಯ್ಕ ನಡುವೆ…

ಶಿಖಾರಿಗೆ ಹೋದವರಿಗೆ ಸೆರೆಮನೆ ವಾಸ!

ಕುಮಟಾ: ನಾಡಬಾಂಬು ಹಾಗೂ ಇತರೆ ಆಯುಧಗಳನ್ನು ಬಳಸಿ ವನ್ಯಜೀವಿ ಕೊಂದು ಪಾರ್ಟಿ ಮಾಡುತ್ತಿದ್ದ ಮೂವರನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ. ಕುಮಟಾದ ಕತಗಾಲ ಬಳಿಯ ಆಳಕೋಡ ಅರಣ್ಯ ಪ್ರದೇಶಕ್ಕೆ ಅಳಕೋಡ ಗ್ರಾಮದ ಸುಬ್ಬಾ ಗೋವಿಂದ ನಾಯ್ಕ (70) ಶಿಖಾರಿಗೆ ಹೋಗಿದ್ದರು. ಎಡತಾರೆ ಗ್ರಾಮದ…

ಮೊದಲು ತಲೆನೋವು.. ನಂತರ ಅಸ್ವಸ್ಥ.. ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮಹಿಳೆ ಸಾವು!

ಅಂಕೋಲಾ: ತಲೆನೋವಿನಿಂದ ಬಳಲುತ್ತಿದ್ದ ಸುಧಾ ನಾಯ್ಕ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವಾಗ ಸಾವನಪ್ಪಿದ್ದಾರೆ. ಅಗಸೂರು ನವೆಗದ್ದೆಯ ಸುಧಾ ಮೋಹನ ನಾಯ್ಕ (51) ಅಂಕೋಲಾದ ಕುಂಬಾರಕೇರಿಯಲ್ಲಿ ವಾಸವಾಗಿದ್ದರು. ಸೋಮವಾರ ಸಂಬoಧಿ ಲತಾ ಹೊನ್ನೇಕೇರಿ ಅವರ ಮನೆಗೆ ತೆರಳಿದ್ದರು. ಅಲ್ಲಿ ತಲೆ ನೋವು ಎಂದು…

ಉಮೇಶನಿಗೆ ದಕ್ಕದ ಅನ್ಯಾಯದ ಹಣ!

ಹೊನ್ನಾವರ: ಅಂಗಡಿಯಲ್ಲಿ ಕೆಲಸ ಮಾಡುವ ಉಮೇಶ ನಾಯ್ಕ ಮಟ್ಕಾ ಆಡಿಸುವ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಉಮೇಶ ನಾಯ್ಕ ಬಳಿಯಿದ್ದ 565ರೂ ಅನ್ಯಾಯದ ಹಣವನ್ನು ಅವರು ವಶಕ್ಕೆ ಪಡೆದಿದ್ದಾರೆ. ಆಡುಕಳ ನಾಗನಕಲ್ಲುವಿನ ಉಮೇಶ ಗಜಾನನ ನಾಯ್ಕ ಅಲ್ಲಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು…

ಅಂಕೋಲೆಗೆ ಬಂದಿದ್ದ ಅಲೆಮಾರಿಯ ಬದುಕು ಅಂತ್ಯ

ಅಂಕೋಲಾ: ಕಳೆದು ಐದು ವರ್ಷದಿಂದ ಗುಜುರಿ ಆರಿಸಿ ಬದುಕುತ್ತಿದ್ದ ರವಿ ಗೌಡ ಸಾವನಪ್ಪಿದ್ದಾರೆ. ಐದು ವರ್ಷದ ಹಿಂದೆ ಬಾಗಲಕೋಟೆಯಿಂದ ಅಂಕೋಲಾಗೆ ಬಂದ ರವಿ ಗೌಡ ಗುಜುರಿ ಅಂಗಡಿ ನಡೆಸುವ ಅಣ್ಣಪ್ಪ ವಾಸ್ಟರ್ ಬಳಿ ಆಶ್ರಯ ಕೇಳಿದ್ದರು. ಅಲ್ಲಿಂದ ಮುಂದೆ ಪ್ಲಾಸ್ಟಿಕ್, ಕಬ್ಬಿಣ…

You cannot copy content of this page