ಬೈಕಿನಿಂದ ಬಿದ್ದ ಅಪ್ಪ-ಮಗನಿಗೆ ಗಾಯ: ದಾರಿಹೋಕನಿಂದ ದೂರು!
ಶಿರಸಿ: ರಸ್ತೆ ಮೇಲಿನ ಕಾಲುವೆ ದಾಟಿಸುವ ವೇಳೆ ಬೈಕ್ ಬಿದ್ದ ಪರಿಣಾಮ ಬೈಕಿನ ಹಿಂಬದಿ ಸವಾರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಂಗಾಪುದರಿoದ ದಾಸನಕೊಪ್ಪ ಕಡೆ ಬೈಕ್ ಓಡಿಸಿಕೊಂಡು ಬಂದ ಕೃಷ್ಣ ಪುಟ್ಟ ವಾಲ್ಮಿಕಿ (48) ಬೈಕಿನಿಂದ ಬಿದ್ದಿದ್ದಾರೆ. ಆ ಬೈಕಿನಲ್ಲಿ…
ಆನೆ ಬಂತು ಆನೆ: ಅಡಿಕೆ ತೋಟಕ್ಕೆ ಬಂತು!
ಮುoಡಗೋಡ: ಬ್ಯಾನಳ್ಳಿಯ ತೋಟಗಳಿಗೆ ಲಗ್ಗೆಯಿಟ್ಟಿರುವ ಕಾಡಾನೆಗಳ ಗುಂಪು ಅಲ್ಲಿನ ಅಡಿಕೆ ಗಿಡಗಳನ್ನು ಮುರಿದು ನಾಶ ಮಾಡಿವೆ. 35ಕ್ಕೂ ಅಧಿಕ ಗಿಡಗಳು ಆನೆ ದಾಳಿಗೆ ತತ್ತರಿಸಿವೆ. ಶನಿವಾರ ರಾತ್ರಿ ಬ್ಯಾನಳ್ಳಿ ಕಾಡಿನ ಮೂಲಕ ಈ ಆನೆಗಳು ಊರು ಪ್ರವೇಶಿಸಿದವು. ಭಾನುವಾರ ಬೆಳಗ್ಗೆ ಅವಧಿಯಲ್ಲಿ…
ಐದು ರಸ್ತೆ | ಯಾವ ಹಾದಿ ಹಿಡಿದ ಈ ಎಲೆಕ್ಟ್ರಿಷಿಯನ್?
ಶಿರಸಿ: ಐದು ರಸ್ತೆಯ ಬಳಿ ವಾಸವಾಗಿದ್ದ ಥಾಮಸ್ ಡಿಸೋಜಾ ಕಾಣೆಯಾಗಿದ್ದಾರೆ. ಕುಮಟಾ ರಸ್ತೆಯ ಐದು ರಸ್ತೆ ಬಳಿ ಥಾಮಸ್ ಸಾಲ್ವಾದೋರ್ ಡಿಸೋಜಾ (51) ತಮ್ಮ ಕುಟುಂಬದವರ ಜೊತೆ ವಾಸವಾಗಿದ್ದರು. ಅವರು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ನ 15ರ…
ಸೌತಿ ಮಗ ಮಾಡಿದ ಕಿತಾಪತಿ: ಪೊಲೀಸರ ಮುಂದೆ ಲಕ್ಷ್ಮೀ ಭಡ್ತಿ ಅಳಲು!
ಯಲ್ಲಾಪುರ: ವಜ್ರಳ್ಳಿಯ ತಾರಗಾರ ಬಳಿ ಲಕ್ಷ್ಮೀ ಭಟ್ಟ ಅವರ ತೋಟಕ್ಕೆ ನುಗ್ಗಿದ್ದ 4-5 ಜನ ಅಲ್ಲಿ ಬೆಳೆದಿದ್ದ ಅಡಿಕೆ ಫಸಲು ದೋಚಿ ಪರಾರಿಯಾಗಿದ್ದಾರೆ. ಬೆಣ್ಣೆಜಡ್ಡಿಯ ಲಕ್ಷ್ಮೀ ತಿಮ್ಮಣ್ಣ ಭಟ್ಟ (71 ವರ್ಷ) ಅರಣ್ಯ ಅತಿಕ್ರಮಣದಲ್ಲಿ ತೋಟ ಮಾಡಿಕೊಂಡಿದ್ದರು. ಆ ತೋಟದಲ್ಲಿ ಬೆಳೆದ…
ಬೈಕಿಗೆ ಗುದ್ದಿದ ಟಾಟಾಎಸ್: ಇಬ್ಬರಿಗೆ ಗಾಯ
ಶಿರಸಿ: ಮಂಜಗುಣಿ ಬಳಿ ನಡೆದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಶಿರಸಿ-ಕುಮಟಾ ರಸ್ತೆಯ ಮಂಜಗುಣಿ ಬಳಿ ಟಾಟಾಎಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದೆ. ಬೈಕಿನಲ್ಲಿ ಚಲಿಸುತ್ತಿದ್ದ ದಾಸನಕೊಪ್ಪದ ಸೋಯೆಲ್ ಜಾಬೀರ ಮಠಗಾರೆ ಹಾಗೂ ಶಿರಸಿ ರಾಜೀವನಗರದ ಆನಂದ ಭೋವಿವಡ್ಡರ್ ಈ…
ಸರ್ಕಾರಿ ನೌಕರರ ಸಂಘಕ್ಕೆ ಶಿಕ್ಷಕ ಸಂಜೀವ ಅಧ್ಯಕ್ಷ!
ಯಲ್ಲಾಪುರ: ಸರ್ಕಾರಿ ನೌಕರರ ಸಂಘಕ್ಕೆ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶನಿವಾರ ಸರ್ಕಾರಿ ನೌಕರರ ಭವನದಲ್ಲಿ ಸಂಘದ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕಾಗಿ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಜೊತೆ ಶಿಕ್ಷಕ ಸಂತೋಷ ನಾಯ್ಕ ಹಾಗೂ ಫಾರೇಸ್ಟರ್ ಜಿ ಸಂತೋಷ್ ಪ್ರತಿಸ್ಪರ್ಧಿಯಾಗಿದ್ದರು.…
ಪೊಲೀಸರ ಮುಂದೆ ಮೆಕಾನಿಕ್’ನ ಅಳಲು: ಕಳ್ಳನನ್ನು ಹುಡುಕಿ.. ಬೈಕ್ ಮರಳಿಸಿ!
ಅಂಕೋಲಾ: ಬೈಕ್ ಮ್ಯೆಕಾನಿಕ್ ಮಂಜು ಹುಲಸ್ವಾರ್ ಅವರ ಬೈಕನ್ನು ಕಳ್ಳರು ಅಪಹರಿಸಿದ್ದಾರೆ. ಅಂಬಾರಕೊಡ್ಲುವಿನ ಮಂಜು ಗುರು ಹುಲಸ್ವಾರ್ (33) ಬಾಳೆಗುಳಿ ಕ್ರಾಸಿನ ಕೃಷ್ಣಾಪುರ ಬಳಿ ವಾಸವಾಗಿದ್ದಾರೆ. ಅವರು ಹೊಂಡಾ ಕಂಪನಿಯ ಯುನಿಕೊರ್ನ ಬೈಕ್ ಹೊಂದಿದ್ದರು. ನ 15ರ ರಾತ್ರಿ 10 ಗಂಟೆಗೆ…
ನಿಯಮ ಉಲ್ಲಂಘಿಸಿದವರಿಗೆ ಗುಲಾಬಿ ಹೂ!
ಅಂಕೋಲಾ: ಪಟ್ಟಣದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿದ್ದ ಪೊಲೀಸರು ಇದೀಗ ಗುಲಾಬಿ ಹೂ ನೀಡಿ ಗೌರವಿಸುತ್ತಿದ್ದಾರೆ! ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದು ಪೊಲೀಸರು ಸಾಕಷ್ಟು ಅರಿವು ಮೂಡಿಸಿದರೂ ಹೆಲ್ಮೆಟ್ ಧರಿಸದ ವಾಹನ ಸವಾರರ ಮನವೊಲೈಕೆಗಾಗಿ ಪೊಲೀಸರು ಈ ಕೆಲಸ…
ಹೊರಗಡೆಯಿಂದ ಹೊಟೇಲ್: ಒಳ ಹೊಕ್ಕರೆ ಸರಾಯಿ ಅಂಗಡಿ!
ಶಿರಸಿ: ಬಂಡಲದಲ್ಲಿ ಹೊಟೇಲ್ ನಡೆಸುತ್ತಿದ್ದ ರವಿ ನಾಯ್ಕ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸ್ ಉಪನಿರೀಕ್ಷಕ ಪ್ರಕಾಶ ಪಚ್ಚಗೋಳ್ ಅವರು ಹೊಟೇಲಿನ ಪಕ್ಕ ಪರಿಶೀಲಿಸಿದಾಗ ರಾಶಿ ರಾಶಿ ಖಾಲಿ ಸರಾಯಿ ಪ್ಯಾಕೇಟ್ ಕಾಣಿಸಿದೆ. ಅಲ್ಲಿದ್ದ ಎರಡು ಬಗೆಯ 10 ಪ್ಯಾಕೇಟ್ ಮದ್ಯವನ್ನು…
ಬಾವನ ಕೈ ಹಿಡಿದು ಕೊನೆ ಉಸಿರೆಳದ ಶಂಕರ: ಸಿದ್ದಿ ಸಾವಿನಲ್ಲಿ ಹಲವು ಸಂಶಯ!
ಯಲ್ಲಾಪುರ: ಅರಬೈಲ್’ನ ಶಂಕರ್ ಸಿದ್ದಿ ಸಾವನಪ್ಪಿದ್ದಾರೆ. ಅವರ ಸಾವಿನಲ್ಲಿ ಸಂಶಯವಿರುವುದಾಗಿ ಶಂಕರ್ ಸಿದ್ದಿ ಅವರ ಪತ್ನಿ ಸರೀತಾ ಸಿದ್ದಿ ದೂರಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಶಂಕರ ಸುಬ್ಬಾ ಸಿದ್ದಿ (40) ನ 16ರ ಸಂಜೆ 5.45ರ ಆಸುಪಾಸಿಗೆ ಮನೆಯಿಂದ ಹೊರ ಹೋಗಿದ್ದ.…







