ತವರಿಗೆ ಮರಳಿದ ಚೆಸ್ ಆಟಗಾರ: ಜನಶಕ್ತಿ ವೇದಿಕೆಯಿಂದ ಗೌರವ
ಕಾರವಾರ: ಉತ್ತರ ಕನ್ನಡ ಮೂಲದ ಅಂತರರಾಷ್ಟ್ರೀಯ ಚೆಸ್ ಆಟಗಾರ ನಿತೀಶ್ ಬೇಳೂರಕರ್ ಊರಿಗೆ ಬಂದಿದ್ದು, ಜನಶಕ್ತಿ ವೇದಿಕೆಯವರು ಅವರನ್ನು ಬರಮಾಡಿಕೊಂಡು ಸನ್ಮಾನಿಸಿದರು. ಕಾರವಾರದ ಕೋಡಿಭಾಗ ಮೂಲದವರಾದ ನಿತೀಶ್ ಬೇಳೂರಕರ್ ಟರ್ಕಿಯಲ್ಲಿ ನಡೆದ `ವರ್ಲ್ಡ್ ಸ್ಕೂಲ್ ಚೆಸ್’ನಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.…
ಚಿನ್ನದ ಆಸೆಗೆ ಮನೆ ಮುರಿದ ಕಳ್ಳ!
ಶಿರಸಿ: ಕಸ್ತೂರಬಾ ನಗರದ ವಿಶ್ವೇಶ್ವರ ಬಡಾವಣೆಗೆ ಬಂದ ಕಳ್ಳರು ಮನೆಯ ಹಂಚು ತೆಗೆದು ಒಳಗೆ ಪ್ರವೇಶಿಸಿದ್ದಾರೆ. ನಂತರ ಮನೆಯೊಳಗಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ನಾಗರಾಜ ವಾಸುದೇವ ನಿಲೇಕಣಿ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯಲ್ಲಿದ್ದ 1.31 ಲಕ್ಷ ರೂ ಮೌಲ್ಯದ…
ಮೀಸಲಾತಿ | ಅರ್ಜಿ ವಜಾಗೊಳಿಸಿದ ನ್ಯಾಯಾಲಯ
ಕುಮಟಾ: ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಸಂಬoಧಿಸಿದ ದೂರನ್ನು ಧಾರವಾಡದ ಉಚ್ಛ ನ್ಯಾಯಾಲಯದ ಏಕಸದಸ್ಯ ಪೀಠ ವಜಾಗೊಳಿಸಿದೆ. ಎರಡನೇ ಅವಧಿಗೆ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ) ಎಂಬ ಮೀಸಲಾತಿಯನ್ನು ಸರ್ಕಾರ ಘೋಷಿಸಿತ್ತು. ಅಗಸ್ಟ 21ರಂದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ದಿನಾಂಕ…
ವೃದ್ಧನಿಗೆ ಗುದ್ದಿದ ಕಾರು: ನಿವೃತ್ತ ಶಿಕ್ಷಕನ ವಿರುದ್ಧ ದೂರು!
ಶಿರಸಿ: ಶಿರಸಿ-ಕುಮಟಾ ರಸ್ತೆಯ ವಡ್ಡಗೇರಿ ಕ್ರಾಸಿನ ಬಳಿ ನಡೆದ ಅಪಘಾತದಲ್ಲಿ 71 ವರ್ಷದ ವೃದ್ಧರೊಬ್ಬರಿಗೆ ಗಾಯವಾಗಿದೆ. ಈ ಅಪಘಾತಕ್ಕೆ ಕಾರಣರಾದ 75 ವರ್ಷದ ವೃದ್ಧರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಡಿ 20ರಂದು ಸಂಜೆ ಶಿರಸಿಯ ಹಣಗಾರಿನ ನಿವೃತ್ತ ಶಿಕ್ಷಕ ಗಜಾನನ…
ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕ ಔಷಧಿ ಕಳ್ಳ.. ಆತ ಕಳ್ಳ ಅಲ್ಲ ವೈದ್ಯ!
ಕಾರವಾರ: ಸರ್ಕಾರಿ ಆಸ್ಪತ್ರೆಯ ಔಷಧ ವಿತರಣಾ ಕೇಂದ್ರದಲ್ಲಿದ್ದ ಔಷಧಿ ಡಬ್ಬಿಗಳು ಕಣ್ಮರೆಯಾಗಿದ್ದು, ಆಸ್ಪತ್ರೆಯ ವೈದ್ಯರೊಬ್ಬರು ಅದನ್ನು ಅನಧಿಕೃತವಾಗಿ ಕೊಂಡೊಯ್ದಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿನ ಔಷಧ ವಿತರಣಾ ಕೇಂದ್ರದಲ್ಲಿದ್ದ ದಾಸ್ತಾನು ಹಾಗೂ ರಿಜಿಸ್ಟರ್ ಪುಸ್ತಕದಲ್ಲಿದ್ದ ಔಷಧಿ ನಡುವೆ ವ್ಯತ್ಯಾಸ…
ಸಿಬ್ಬಂದಿ ಕೊರತೆ | ಕೆಲಸ ಬಿಟ್ಟು ಕಸ ಗುಡಿಸಿದ ತಹಶೀಲ್ದಾರ್!
ಕುಮಟಾ: ನೂತನವಾಗಿ ನಿರ್ಮಿಸಿದ ಆಡಳಿತ ಸೌಧದಲ್ಲಿ ಸ್ವಚ್ಛತಾ ಸಿಬ್ಬಂದಿ ಕೊರತೆಯಿಂದ ಕಸ ಗುಡಿಸುವವರು ಇಲ್ಲ. ಹೀಗಾಗಿ ಸಹಾಯಕ ಆಯುಕ್ತರ ಕಚೇರಿಯ ತಹಶೀಲ್ದಾರ್ ಅಶೋಕ ಭಟ್ಟ ಹಾಗೂ ತಾಲೂಕಾ ದಂಡಾಧಿಕಾರಿ ಸತೀಶ್ ಗೌಡ ಸೇರಿ ಸಿಬ್ಬಂದಿ ಜೊತೆ ಕಚೇರಿಯ ಕಸ ಗುಡಿಸಿದರು! ತಾಲೂಕಾ…
ಅಗ್ನಿಸ್ಪರ್ಶವೇ ಅತಿ ದೊಡ್ಡ ಅಪಾಯ: ಗ್ಯಾಸ್ ಟ್ಯಾಂಕರ್ ಕೆಳಗೆ ಬಿಸಿ ಬಿಸಿ ಅಡುಗೆ!
ಕುಮಟಾ: ಕರಾವಳಿ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಮೊದಲಿನಿಂದಲು ಸಾಲು ಸಾಲು ಗ್ಯಾಸ್ ಟ್ಯಾಂಕರ್ ಜೊತೆ ಪೆಟ್ರೋಲ್-ಡಿಸೇಲ್ ಮೊದಲಾದ ಇಂಧನ ತುಂಬಿದ ನಿಲ್ಲುತ್ತಿವೆ. ಈ ವಾಹನಗಳ ಅಂಚಿನಲ್ಲಿ ಗ್ಯಾಸ್ ಸ್ಟೋವ್’ಗೆ ಬೆಂಕಿ ಹಚ್ಚಿ ಕೆಲವರು ಅಡುಗೆ ತಯಾರಿಸುತ್ತಿದ್ದು, ಮೊನ್ನೆ…
ಕೌಶಿಕ್ ಕನ್ನಡ ಮಿಡಿಯಂ | ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ!
ಶಿರಸಿ: ರಾಷ್ಟ್ರೀಯ ಆದ್ಯತಾ ಸಂಸ್ಥೆ ನಡೆಸಿದ ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಡಾ ಕೌಶಿಕ್ ಡಿ ಅವರು ಮೂರು ವರ್ಷ ಪದವಿಯ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ. ಡಾ ಕೌಶಿಕ್ ಅವರು ಈ ಹಿಂದೆ ಶಿರಸಿ…
ಸತೀಶ್ ಸೈಲ್’ಗೆ ಶೆಟ್ಟಿ.. ಶಿವರಾಮ ಹೆಬ್ಬಾರ್’ಗೆ ಮಿರಾಶಿ.. ಭೀಮಣ್ಣ ನಾಯ್ಕ’ಗೆ ಭಾಗ್ವತ.. ಏನೂ ಇಲ್ಲದ ಅವರೆಲ್ಲ ಶಾಸಕರಿಗೆ ಆಪ್ತರಾಗಿದ್ದು ಹೇಗೆ?!!
ಕಾರವಾರದ ಸತೀಶ್ ಸೈಲ್.. ಯಲ್ಲಾಪುರದ ಶಿವರಾಮ ಹೆಬ್ಬಾರ್.. ಶಿರಸಿಯ ಭೀಮಣ್ಣ ನಾಯ್ಕ ಶಾಸಕರಾಗುವ ಮೊದಲಿನಿಂದಲೂ ಅವರ ಜೊತೆ ಗುರುತಿಸಿಕೊಂಡ ಕೆಲವರಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಅವರೆಲ್ಲರೂ ಏನು ಅಲ್ಲ.. ಆದರೆ, ಶಾಸಕರಿಗೆ ಮಾತ್ರ ಎಲ್ಲದಕ್ಕೂ ಅವರೇ ಬೇಕು! ಅವರೆಲ್ಲ ಸಾಮಾನ್ಯ ಕಾರ್ಯಕರ್ತರಲ್ಲ. ಪ್ರಭಾವಿ…
ಅವಿಶ್ವಾಸ ಮಂಡನೆ | ಮದನೂರು ಗ್ರಾ ಪಂ ಅಧ್ಯಕ್ಷ-ಉಪಾಧ್ಯಕ್ಷರ ಹಕ್ಕು ಮೊಟಕು!
ಯಲ್ಲಾಪುರ: ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೇ ಆಡಳಿತ ನಡೆಸಿದ ಕಾರಣ ಮದನೂರು ಗ್ರಾಮ ಪಂಚಾಯತದ 10 ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಮಾಡಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನದಲ್ಲಿದ್ದ ರಾಜೇಶ ತಿನ್ನೇಕರ್ ಹಾಗೂ ಉಪಾಧ್ಯಕ್ಷರಾಗಿದ್ದ ದೀಪಾ ಸಿಂಧೆ ಹುದ್ದೆ ಕಳೆದುಕೊಂಡಿದ್ದಾರೆ. ಯಲ್ಲಾಪುರ ತಾಲೂಕಿನ…







