6
ಸಮೃದ್ಧಿ ಸೊಸೈಟಿ: ಅವ್ಯವಹಾರ ಎಂದು ಬೆದರಿಸಿದವ 76 ಲಕ್ಷ ರೂ ಕೇಳಿದ!

ಶಿರಸಿ: ಆರು ವರ್ಷಗಳ ಕಾಲ ಸಮೃದ್ಧಿ ಕೋ ಆಪರೇಟಿವ್ ಸೊಸೈಟಿಯಲ್ಲಿ ದುಡಿದು ಅಲ್ಲಿನ ಎಲ್ಲಾ ಆಗು-ಹೋಗುಗಳನ್ನು ತಿಳಿದುಕೊಂಡ ಮಲ್ಲಿಖಾರ್ಜುನ ಗಜನಕಟ್ಟಿ ಇದೀಗ ಸೊಸೈಟಿ ವಿರುದ್ಧ ತಿರುಗಿ ಬಿದ್ದಿದ್ದಾರೆ. `ಸೊಸೈಟಿಯಲ್ಲಿ ಅವ್ಯವಹಾರ ನಡೆದಿದೆ’ ಎಂದು ಅಪಪ್ರಚಾರ ಮಾಡದೇ ಇರುವುದಕ್ಕಾಗಿ ಅವರು ಸೊಸೈಟಿ ಉಪಾಧ್ಯಕ್ಷರಿಗೆ…

ಕೇಂದ್ರ ಸಚಿವರಿಗೆ ಚಪ್ಪಲಿ ಏಟು!

ಶಿರಸಿ: ಕೇಂದ್ರ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಬಗ್ಗೆ ಅವಮಾನವಾಗುವ ರೀತಿ ಮಾತನಾಡಿರುವುದನ್ನು ಖಂಡಿಸಿ `ಭೀಮ ಘರ್ಜನೆ’ ಸಂಘಟನೆಯವರು ಅಮಿತ್ ಶಾ ಅವರ ಪೃತಿಕೃತಿಗೆ ಚಪ್ಪಲಿ ಏಟು ನೀಡಿ ಪ್ರತಿಭಟಿಸಿದರು. ಅದಾದ ನಂತರ ಚಪ್ಪಲಿಯ ಹಾರ ಹಾಕಿ ಅವರ…

ಕಡಲ ಆಮೆಗೆ ಬಿಗಿ ಭದ್ರತೆ: ಮೊಟ್ಟೆ ಕಾಣಿಸಿದವರಿಗೆ ಸಾವಿರ ರೂ!

ಕಡಲ ಆಮೆಗಳ ಸಂತಾನೋತ್ಪತ್ತಿಗೆ ಇದೀಗ ಸಕಾಲ. ಕಡಲತೀರದ ದಿಬ್ಬಕ್ಕೆ ಬರುವ ಆಮೆಗಳು ಅಲ್ಲಿ ಮೊಟ್ಟೆಯಿಟ್ಟು ತೆರಳುತ್ತಿದ್ದು, ಆ ಮೊಟ್ಟೆಗಳನ್ನು ಕಾಣಿಸಿಕೊಟ್ಟವರಿಗೆ ಅರಣ್ಯ ಇಲಾಖೆ ಸಾವಿರ ರೂ ಸಿಗುತ್ತದೆ! ಪರಿಸರ ಸಂರಕ್ಷಣೆಯಲ್ಲಿ ಆಮೆಗಳ ಪಾತ್ರ ಬಹುದೊಡ್ಡದು. ಅದರಲ್ಲಿಯೂ ಕಡಲ ಆಮೆಗಳ ಜೀವನಶೈಲಿ ವಿಭಿನ್ನ.…

ಪೊಲೀಸ್ ಅಧೀಕ್ಷಕರಿಗೆ ಹುಟ್ಟುಹಬ್ಬದ ಸಡಗರ: ಎಂ ನಾರಾಯಣ ಅವರಿಗೆ ಇದೀಗ 48ರ ಪ್ರಾಯ!

ಕಾರವಾರ: ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು 47 ವರ್ಷ ಪೂರೈಸಿ 48ನೇ ವರ್ಷಕ್ಕೆ ಪ್ರವೇಶಿಸಿದ್ದಾರೆ. ಡಿ 20ರ ಶುಕ್ರವಾರ ಹುಟ್ಟುಹಬ್ಬದ ಹಿನ್ನಲೆ ನೂರಾರು ಸಂಖ್ಯೆಯ ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಯವರು ಎಂ ನಾರಾಯಣ ಅವರನ್ನು ಭೇಟಿ…

ಸರ್ಕಾರದ ವಿರುದ್ಧ ಕಿಡಿ: ಸಿ ಟಿ ರವಿ ಬೆಂಬಲಕ್ಕೆ ನಿಂತ ಗಣಪತಿ ಉಳ್ವೇಕರ್

ಕಾರವಾರ: `ರಾಜಕೀಯ ದುರುದ್ದೇಶದಿಂದ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಅವರನ್ನು ಬಂಧಿಸಲಾಗಿದ್ದು, ಸಿ ಟಿ ರವಿ ಅವರ ಮೇಲೆ ಹಲ್ಲೆ ಪ್ರಯತ್ನ ನಡೆದಿದೆ. ರಾಜ್ಯ ಸರ್ಕಾರದ ಗುಂಡಾ ವರ್ತನೆಗೆ ಇದೊಂದು ಉದಾಹರಣೆ’ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ…

ಬಸ್ಸಿನಿಂದ ಬಿದ್ದ ಮಹಿಳೆ ಸಾವು

ಮುಂಡಗೋಡ: ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ್ದಾರೆ. ಬಸ್ಸು ಚಲಾಯಿಸುತ್ತಿದ್ದ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಡಿ 19ರಂದು ಉಗ್ಗಿನಕೇರಿ ಕ್ರಾಸಿನ ಬಳಿ ಗುಂಜಾವತಿಯ ಮಾಬುಬಿ ಶೇಖ್ ಎಂಬಾತರು ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ಬಿದ್ದಿದ್ದರು. ಪರಿಣಾಮ…

ಬಸ್ ಪಲ್ಟಿ: ಪ್ರವಾಸಕ್ಕೆ ಬಂದ ಮಕ್ಕಳಿಗೆ ಪ್ರಯಾಸ!

ಹೊನ್ನಾವರ: ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆತಂದಿದ್ದ ಬಸ್ಸು ಆರೋಳ್ಳಿ ತಿರುವಿನ ಬಳಿ ಪಲ್ಟಿಯಾಗಿದೆ. ಪರಿಣಾಮ ಬಸ್ಸಿನಲ್ಲಿದ್ದ ಮಕ್ಕಳು ಗಾಯಗೊಂಡಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರಿನ ಮಾಸ್ತಿಹಳ್ಳಿಯ ಕರ್ನಾಟಕ ಪ್ರೌಢ ಶಾಲೆಯ ವಿಧ್ಯಾರ್ಥಿಗಳು ಉತ್ತರ ಕನ್ನಡ ಜಿಲ್ಲೆಯ ಪ್ರವಾಸಕ್ಕೆ ಬಂದಿದ್ದರು. ಬಸ್ಸಿನಲ್ಲಿ ಒಟ್ಟು 40…

ರೈತನಿಗೆ ಮುಕ್ತಿ ನೀಡಿದ ಗೇರು ಮರ!

ಹೊನ್ನಾವರ: ಕಡ್ನೀರ್ ಬಳಿಯ ದೋಸೆಕಟ್ಟುವಿನ ಯಶವಂತ ನಾಯ್ಕ (54) ಮನೆ ಮುಂದಿನ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರಾಗಿ ದುಡಿಮೆ ಮಾಡಿಕೊಂಡಿದ್ದ ಯಶವಂತ ನಾಯ್ಕ ಕೆಲ ದಿನಗಳಿಂದ ಬೇಸರದಲ್ಲಿದ್ದರು. ಯಾವುದೋ ಒಂದು ವಿಷಯವನ್ನು ಅವರು ಮನಸ್ಸಿಗೆ ಹಚ್ಚಿಗೊಂಡು ಚಿಂತಿಸುತ್ತಿದ್ದರು.…

ಉರುಸ್ | ಉತ್ತರ ಕನ್ನಡಕ್ಕೆ ಬರಲಿರುವ ಉತ್ತರ ಪ್ರದೇಶದ ಇಸ್ಲಾಂ ಗುರು!

ಯಲ್ಲಾಪುರ: ನೂತನ ದರ್ಗಾ ಉದ್ಘಾಟನೆ, ಧಾರ್ಮಿಕ ಚಿಂತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡ ಉರುಸ್ ಆಚರಣೆ ಡಿಸೆಂಬರ್ 21ರಿಂದ 24ರವರೆಗೆ ನಡೆಯಲಿದೆ. ವಿಶೇಷ ಉಪನ್ಯಾಸ, ಅನ್ನ ಸಂತರ್ಪಣೆ ಸೇರಿ ವಿವಿಧ ಬಗೆಯ ಚಟುವಟಿಕೆಗಳಿಗೆ ಮುಸ್ಲೀಂ ಸಮುದಾಯದವರಲ್ಲಿ ತಯಾರಿ ಜೋರಾಗಿದೆ. ಶುಕ್ರವಾರ ಈ…

ದೀಪಾವಳಿ ಹಬ್ಬ | ಅಜ್ಜನ ಕಾರಿನ ಮೇಲೆ ಪಟಾಕಿ ಹೊಡೆದವರ ವಿರುದ್ಧ ಪೊಲೀಸ್ ಪ್ರಕರಣ!

ಸಿದ್ದಾಪುರ: ಕಳೆದ ದೀಪಾವಳಿ ವೇಳೆ ಬೇರೆಯವರ ಕಾರಿನ ಮೇಲೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿದೆ. ಈ ಹಿನ್ನಲೆ ರಾಜೇಶ ನಾಯ್ಕ ಹಾಗೂ ಅಶೋಕ ನಾಯ್ಕ ಎಂಬಾತರ ವಿರುದ್ಧ ಪೊಲೀಸರು ಪ್ರಕರಣ…

You cannot copy content of this page