6
ಉತ್ತರ ಕನ್ನಡ: ಪ್ರತ್ಯೇಕ ಜಿಲ್ಲೆ ಕೂಗಿಗೆ ತಲೆಯಾಡಿಸಿದ ಶಾಸಕರು!

ಪ್ರತ್ಯೇಕ ಜಿಲ್ಲೆ ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಬೆಳಗಾವಿಯ ಅಧೀವೇಶನದ ಬಳಿ ತಲುಪಿದ್ದು, ಸೋಮವಾರ ವಿವಿಧ ಶಾಸಕ-ಸಚಿವರು ಪ್ರತಿಭಟನಾಕಾರರ ಅಳಲು ಆಲಿಸಿದ್ದಾರೆ. ಸಚಿವ ಶಿವರಾಜ ತಂಗಡಗಿ, ವಿವಿಧ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ ಹಾಗೂ ಎನ್ ಎಚ್ ಕೋನರೆಡ್ಡಿ…

ಬೈಕು-ಸ್ಕೂಟಿ ನಡುವೆ ಅಪಘಾತ: ಕಾರಿನ ಮೇಲೆ ಹಾರಿ ಬಿದ್ದ ಸ್ಕೂಟಿ ಸವಾರ!

ಶಿರಸಿ: ಸ್ಕೂಟಿ ಹಾಗೂ ಬೈಕಿನ ನಡುವೆ ನಿರ್ಮಲಾ ನಗರದಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಸ್ಕೂಟಿ ಸವಾರ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಮೇಲೆ ಹಾರಿ ಬಿದ್ದಿದ್ದರಿಂದ ಕಾರಿನ ಗಾಜುಗಳು ಒಡೆದಿವೆ. ಈ ಅಪಘಾತದಲ್ಲಿ ಇಬ್ಬರಿಗೆ ಪೆಟ್ಟಾಗಿದೆ. ಶಿರಸಿ ಶಿವಳ್ಳಿಯ ಪವನ್ ಹಸ್ಲರ್…

ಬೈಕುಗಳ ನಡುವೆ ಮುಖಾಮುಖಿ: ಶಿಕ್ಷಕನ ಜೊತೆ ಗೌಡರಿಗೂ ಗಾಯ!

ಕುಮಟಾ: ಕಡಿಮೆ ಗ್ರಾಮದ ಪಿ ಎಂ ಮಾಸ್ತರರ ಮನೆ ಬಳಿ ಎರಡು ಬೈಕುಗಳ ನಡುವೆ ಅಪಘಾತವಾಗಿದೆ. ಈ ಅಪಘಾತದಲ್ಲಿ ಒಂದು ಬೈಕ್ ಓಡಿಸುತ್ತಿದ್ದ ಬಂಕಿಕೊಡ್ಲದ ಶಿಕ್ಷಕ ಕಡುಬು ಗೌಡ ಹಾಗೂ ಇನ್ನೊಂದು ಬೈಕ್ ಸವಾರ ಪ್ರೇಮಾನಂದ ಗೌಡ ಗಾಯಗೊಂಡಿದ್ದಾರೆ. ಶಿಕ್ಷಕ ಕಡುಬು…

ಹೊತ್ತಿ ಉರಿದ ಶಾಲಾ ಬಸ್ಸು: ಮಕ್ಕಳ ಜೀವ ಕಾಪಾಡಿದ ಚಾಲಕ!

ಭಟ್ಕಳ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ಸು ಬೆಂಕಿಯಿoದ ಹೊತ್ತಿ ಉರಿದಿದ್ದು, ಚಾಲಕನ ಸಮಯಪ್ರಜ್ಞೆಯಿಂದಾಗಿ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ. ಬಸ್ಸು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸೋಮವಾರ ಭಟ್ಕಳದ ಹೆಬಳೆಯಲ್ಲಿರುವ ನ್ಯೂ ಶಮ್ಸ್ ಶಾಲೆಯ ಬಸ್ಸು ಭಟ್ಕಳದಿಂದ ಶಿರಾಲಿ ಮಾರ್ಗವಾಗಿ ಸಂಚರಿಸುತ್ತಿತ್ತು. ವೆಂಕಟಾಪುರದ ಬಳಿ…

ದನಕ್ಕೆ ಗುದ್ದಿದ ಬೈಕಿಗೆ ಅಗ್ನಿಸ್ಪರ್ಶ!

ಕಾರವಾರ: ಜೋರಾಗಿ ಸಂಚರಿಸುತ್ತಿದ್ದ ಬೈಕಿಗೆ ಜಾನುವಾರು ಅಡ್ಡ ಸಿಕ್ಕಿದ್ದು, ಅಪಘಾತಕ್ಕೆ ಒಳಗಾದ ಬೈಕು ಬೆಂಕಿಗೆ ಆಹುತಿಯಾಗಿದೆ. ಬೈಕು ಹೊತ್ತಿ ಉರಿಯುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೋವಾದ ವಾಸ್ಕೋ ಆಯೀಶ್ ಗಡೇಕರ್ ಭಾನುವಾರ ಅಂಕೋಲಾದಿAದ ಕಾರವಾರ ಕಡೆ ತಮ್ಮ ರಾಯಲ್…

ಅವರಿಗೂ ಇಲ್ಲ.. ಇವರಿಗೂ ಇಲ್ಲ.. ಪೊಲೀಸ್ ಠಾಣೆಯಲ್ಲಿ ಕೊಳೆಯುತ್ತಿರುವ 60 ಕ್ವಿಂಟಲ್ ಹಸಿ ಅಡಿಕೆ!

ಮುಂಡಗೋಡ: ನ್ಯಾಯಾಲಯದ ಆದೇಶ ಮೀರಿ ಅಡಿಕೆ ಬೆಳೆ ಕೊಯ್ಲು ಮಾಡಿದವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ನ್ಯಾಯಾಲಯವೂ ಕೃಷಿ ಇಲಾಖೆ ಉಸ್ತುವಾರಿಗೆವಹಿಸಿದ್ದ ಅಡಿಕೆ ತೋಟಕ್ಕೆ ನುಗ್ಗಿದ ಇಬ್ಬರು ಅಲ್ಲಿನ ಫಸಲುಗಳನ್ನು ಸಾಗಿಸುತ್ತಿರುವಾಗ ಕೃಷಿ ಅಧಿಕಾರಿ ತಡೆದಿದ್ದಾರೆ. ಮುಂಡಗೋಡು ತಾಲೂಕಿನ ಕೊಪ್ಪ ಗ್ರಾಮದ…

ವಿದ್ಯಾರ್ಥಿಗೆ ಗುದ್ದಿದ ಕೆಂಪು ಪಲ್ಸರ್ ಬೈಕು!

ಹೊನ್ನಾವರ: ಚಂದಾವರ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದ ಹರ್ಷ ಗೌಡ ಅವರಿಗೆ ಅಪರಿಚಿತ ಪಲ್ಸರ್ ಬೈಕು ಗುದ್ದಿದೆ. ಪರಿಣಾಮ ಹರ್ಷ ಗೌಡ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಚಂದಾವರದ ವಡಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಹರ್ಷ ಗೌಡ ಡಿ…

ದೇವರು ಮರಳಿಸಿದ ಬಂಗಾರದ ಚೈನು!

ಉತ್ತರ ಕನ್ನಡ ಜಿಲ್ಲೆಯ ಮಣ್ಣಿನ ಪರಂಪರೆಯಲ್ಲಿ ದೈವ ಆರಾಧನೆಗೆ ತನ್ನದೇ ಆದ ಮಹತ್ವವಿದೆ. ಶತಮಾನಗಳ ಹಿಂದಿನಿoದಲೂ ಈ ಭಾಗದಲ್ಲಿ ಹರಕೆ ಹೊತ್ತು ಒಳಿತು ಕಂಡವರಿದ್ದಾರೆ. ಮೊನ್ನೆ ಚಿನ್ನ ಕಳೆದುಕೊಂಡಿದ್ದ ವಿದ್ಯಾರ್ಥಿನಿಗೆ ಬೊಮ್ಮಯ್ಯ ದೇವರು ಚಿನ್ನ ಮರಳಿಸಿದ ಸುದ್ದಿ ಕೇಳಿ ನಾಸ್ತಿಕರು ಸಹ…

ಸಾವಿರ ಹಾಡುಗಳ ಸರದಾರ್ತಿ ಈ ಅಜ್ಜಿ!

ಕಮಲಾ ಹೆಗಡೆ ಮಾತನಾಡುವುದಕ್ಕಿಂತಲೂ ಹಾಡುವುದೇ ಹೆಚ್ಚು. ಕಮಲಾ ಹೆಗಡೆ ಅವರು ಭಾಗವಹಿಸಿದ ಮದುವೆ-ಮುಂಜಿಗಳಲ್ಲಿ ಅವರ ಹಾಡಿಲ್ಲದೇ ಶಾಸ್ತ್ರಗಳು ಮುಂದೆ ಸಾಗುವುದೇ ಇಲ್ಲ! ಕಮಲಾ ಹೆಗಡೆ ಅವರ ವಯಸ್ಸು 80ರ ಆಸುಪಾಸು. ಅದಾಗಿಯೂ ಅವರ ಕಂಚಿನ ಕಂಠಕ್ಕೆ ಇನ್ನೂ ವಯಸ್ಸಾಗಿಲ್ಲ. ಕಾಡಿನ ಕಾಳು…

ಶಿಸ್ತಿನ ಸಿಫಾಯಿಗಳಿಗೆ ಸಿಕ್ಕಿದ ಅಧ್ಯಕ್ಷ-ಕಾರ್ಯದರ್ಶಿ ಅಧಿಕಾರ!

ಯಲ್ಲಾಪುರ: ಗಸ್ತು ಅರಣ್ಯ ಪಾಲಕ ಹಾಗೂ ವೀಕ್ಷಕರ ಸಂಘದ ವಿಭಾಗೀಯ ಅಧ್ಯಕ್ಷರಾಗಿ ಶಾನವಾಜ ಮುಲ್ತಾನಿ ಹಾಗೂ ಕಾರ್ಯದರ್ಶಿಯಾಗಿ ಕೆಂಚಪ್ಪ ಹಂಚಿನಾಳ ಆಯ್ಕೆಯಾಗಿದ್ದಾರೆ. ಶಾನವಾಜ ಮುಲ್ತಾನಿ ಅವರು ಪ್ರಸ್ತುತ ಯಲ್ಲಾಪುರ ವಲಯದಲ್ಲಿ ಕರ್ತವ್ಯದಲ್ಲಿದ್ದಾರೆ. ಕೆಂಚಪ್ಪ ಹಂಚಿನಾಳ ಅವರು ಇಡಗುಂದಿ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.…

You cannot copy content of this page