6
ದಾರಿಗಾಗಿ ದಾಯಾದಿ ಕಲಹ: ನ್ಯಾಯಕ್ಕಾಗಿ ಅಂಗಲಾಚಿದ ವೃದ್ಧ ದಂಪತಿ!

ಅoಕೋಲಾದ ಕೊಡ್ಲಗದ್ದೆಯಲ್ಲಿ ಅನಾಧಿಕಾಲದಿಂದಲೂ ಸಂಚರಿಸುತ್ತಿದ್ದ ಕಾಲುದಾರಿಯ ಓಡಾಟದ ವಿಷಯವಾಗಿ ಅಕ್ಕ-ಪಕ್ಕದಮನೆಯವರ ನಡುವೆ ಗಲಾಟೆ ನಡೆದಿದ್ದು, ಈ ಗಲಾಟೆಯಲ್ಲಿ ಸುಬ್ರಾಯ ಗಾಂವ್ಕರ್ ಗಾಯಗೊಂಡಿದ್ದಾರೆ. ಕೊಡ್ಲಗದ್ದೆಯ ಸುಬ್ರಾಯ ಗಾಂವ್ಕರ್ ಅವರು ಅನಾರೋಗ್ಯಕ್ಕೀಡಾಗಿದ್ದಾರೆ. ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಗ್ಗೆ ಅರಿವಿದ್ದರೂ ಪಕ್ಕದಮನೆಯ ರಾಜೇಶ ಗಾಂವ್ಕರ್…

ಹದಗೆಟ್ಟ ರಸ್ತೆಗೆ ದುರಸ್ತಿ ಭಾಗ್ಯ: ಅನಂತಮೂರ್ತಿ ಹೋರಾಟಕ್ಕೆ ಮೊದಲ ಯಶಸ್ಸು!

ಶಿರಸಿ ಮತ್ತಿಘಟ್ಟ ಕೆಳಗಿನಕೇರಿ ಜನರ ಸಮಸ್ಯೆಗಳ ಬಗೆಹರಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಜಿಲ್ಲಾಕೇಂದ್ರ ಕಾರವಾರದಲ್ಲಿ ಪ್ರತಿಭಟನೆ ಶುರು ಮಾಡಿದ್ದು, ಪ್ರತಿಭಟನೆಗೂ ಮುನ್ನವೇ ಜಿಲ್ಲಾಡಳಿತ ಸಂದಾನ ಸಭೆ ನಡೆಸಿದೆ. ಸದ್ಯ 5 ಲಕ್ಷ ರೂ ವೆಚ್ಚದಲ್ಲಿ ತುರ್ತಾಗಿ ರಸ್ತೆ ಕಾಮಗಾರಿ…

ಆಗಿನ ಚಾಕಲೇಟು ವ್ಯಾಪಾರಿ ಇದೀಗ ಭಯ-ಉತ್ಪಾದಕ: ಮಕ್ಕಳ ಹುಟ್ಟಿಸುವುದೇ ಈತನ ಉಪಕಸುಬು!

ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಉಗ್ರನನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮೋಸಿನ್ ಯಾನೆ ಇಮ್ತಿಯಾಜ್ ತಂದೆ ಅಬ್ದುಲ್ ಶಕೂರ್ ಹೊನ್ನಾವರ ಬಂಧಿತ ವ್ಯಕ್ತಿ. 2019ರಲ್ಲಿ ಶಿರಸಿಯಲ್ಲಿ ಅಸ್ಲಾಂ ಎಂಬಾತರ ಕೊಲೆ ನಡೆದಿತ್ತು. ಈ ಕೊಲೆಯ ಆರೋಪಿಗಳ ಪೈಕಿ…

ಹೊಟ್ಟೆನೋವು: ಆಸ್ಪತ್ರೆಗೆ ದಾಖಲಿಸಿದ್ದ ರೋಗಿ ಪರಾರಿ!

ಹೊಟ್ಟೆನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಂಕೋಲಾದ ನಾಗಪ್ಪ ಗೌಡ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಗೆ ಯಾಮಾರಿಸಿ ಪರಾರಿಯಾಗಿದ್ದಾರೆ. ಗೌಡರ ಕುಟುಂಬದವರು ಇದೀಗ ಅವರ ಹುಡುಕಾಟ ನಡೆಸಿದ್ದಾರೆ. ಅಂಕೋಲಾದ ಅಲಗೇರಿ ಬಳಿಯ ಬಡಗೇರಿಯಲ್ಲಿ ನಾಗಪ್ಪ ಗೌಡ (41) ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು…

ನೀರಿಗೆ ಹೋದ ನಾರಿ.. ಕೆರೆಗೆ ಬಿದ್ದು ಜಲಸಮಾಧಿ!

ಶಿರಸಿಯ ಬನವಾಸಿ ಬಳಿಯ ಬೆಂಗಳೆ ಬಳಿಯ ಮಂಟಗಾಲ ಕೆರೆಯಲ್ಲಿ ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಮಗಳ ಸಾವು ಕಂಡ 70 ವರ್ಷದ ವೃದ್ಧರು ಕಣ್ಣೀರಾಗಿದ್ದಾರೆ. ಬನವಾಸಿಯ ಬೆಂಗಳೆ ಬಳಿ ವಾಸವಾಗಿದ್ದ ರೇಖಾ ಗಂಗಾಮತ (39) ಅವರು ಭಾನುವಾರ ಅಲ್ಲಿನ ಮಂಟಗಾಲ ಕೆರೆಗೆ ಹೋಗಿದ್ದರು. ಅವರಿವರ…

ಕಸ ತೆಗೆಸಿ.. ಕೆರೆ ರಕ್ಷಿಸಿ!

ಕಾರವಾರದ ಕಾಕರತಳೆ ಕೆರೆ ಅಂಚಿನಲ್ಲಿ ತ್ಯಾಜ್ಯ ವಿಲೆವಾರಿ ನಡೆದಿದ್ದು, ಇದರಿಂದ ಕೆರೆ ಅಪಾಯಕ್ಕೆ ಸಿಲುಕಿದೆ. `ಕಸ ತೆಗೆಸಿ.. ಕೆರೆ ರಕ್ಷಿಸಿ’ ಎಂಬ ಬೇಡಿಕೆ ಮುಂದಿಟ್ಟು ಆ ಭಾಗದ ಜನ ಪ್ರತಿಭಟನೆ ನಡೆಸಿದ್ದಾರೆ. ಚಿತ್ತಾಕುಲ ಗ್ರಾಮ ಪಂಚಾಯಿತಿಯ ಘನ ತ್ಯಾಜ್ಯ ವಿಲೇವಾರಿ ಘಟಕದ…

ಅಪಾಯಕಾರಿ ಚಾರಣಕ್ಕೆ ಅರಣ್ಯ ಇಲಾಖೆ ನಿರ್ಬಂಧ

ಚಾರಣಕ್ಕೆ ತೆರಳಿದ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು ಗೋಕರ್ಣದಲ್ಲಿ ಸಾವನಪ್ಪಿರುವ ಕಾರಣ ಅರಣ್ಯ ಇಲಾಖೆ ಆ ಭಾಗದಲ್ಲಿನ ಚಾರಣಕ್ಕೆ ತಡೆ ಒಡ್ಡಿದೆ. ಜಟಾಯು ತೀರ್ಥಕ್ಕೆ ತೆರಳುವ ಮಾರ್ಗಕ್ಕೆ ಅಡ್ಡಲಾಗಿ ಸದ್ಯ ಬೇಲಿ ನಿರ್ಮಿಸಲಾಗಿದೆ. ಈಚೆಗೆ ಗೋಕರ್ಣಕ್ಕೆ ಬರುವ ಪ್ರವಾಸಿಗರನ್ನು ಕೆಲವರು ಈ ಮಾರ್ಗದಲ್ಲಿ…

ಮಾನವನನ್ನು ಕೊಂದ ಮಂಗನ ಕಾಯಿಲೆ

ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ಹೊನ್ನಾವರದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಅವರನ್ನು ಬದುಕಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. 63 ವರ್ಷದ ತಿಮ್ಮಣ್ಣ ಹೆಗಡೆ ಅವರು ವಿವಿಧ ರೋಗಗಳಿಂದ ಬಳಲುತ್ತಿದ್ದರು. ಮಂಗನ ಕಾಯಿಲೆಯ ಲಕ್ಷಣಗಳಿದ್ದರೂ ಮೊದಲು ಅದು ಖಚಿತವಾಗಿರಲಿಲ್ಲ. ವಿವಿಧ ತಪಾಸಣೆಗಳ ನಂತರ ಏಪ್ರಿಲ್…

ಸಿದ್ದಿ ಹುಡುಗರ ಶೌರ್ಯ: ಸರಗಳ್ಳರನ್ನು ಸೆದೆಬಡಿದ ಪೊಲೀಸರು!

ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ಚಿನ್ನ ಕದ್ದು ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶಿಸಿದ್ದ ಮೂವರು ಕಳ್ಳರನ್ನು ಯಲ್ಲಾಪುರದ ಸಿದ್ದಿ ಹುಡುಗರು ಸೆದೆ ಬಡಿದಿದ್ದಾರೆ. ಪೊಲೀಸರು ನೀಡಿದ ಮಾಹಿತಿಯಂತೆ ಕಾರ್ಯಾಚರಣೆಗಿಳಿದ ಜನ ಕಳ್ಳರನ್ನು ಹುಟಕಮನೆ ಬಳಿ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಭಾನುವಾರ ಬೆಳಗ್ಗೆ ಉಡುಪಿಯ…

ಫೇಸ್ಬುಕ್: ಫೇಕ್ ಖಾತೆ ಪತ್ತೆ ಹಚ್ಚಿದ ಪೊಲೀಸರು!

ನಕಲಿ ಫೇಸ್ಬುಕ್ ಖಾತೆ ರಚಿಸಿ ಅಲ್ಲಿ ಅಸಂಬದ್ಧ ಫೋಟೋ-ಮಾಹಿತಿ ಹಂಚಿಕೊಳ್ಳುತ್ತಿದ್ದ ದಾಂಡೇಲಿಯ ದಾಂಡಿಗನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಪೊಲೀಸರು ಅಲ್ಲಿಯೂ ಕಾನೂನು ಪಾಠ ಮಾಡಿದ್ದಾರೆ. ದಾಂಡೇಲಿಯ ಆಜಾದ್ ನಗರದಮಹಮ್ಮದ ಅನೀಸ್ ಅಬ್ದುಲ್ ಕರೀಂ ಹುಲುಗೂರು(46) ಹಣ್ಣಿನ…

You cannot copy content of this page