ಹೊಳೆ ಮೀನಿಗೆ ಆಸೆಪಟ್ಟ ಕಾಡು ಕಡಿಯುವ ಕಾರ್ಮಿಕ: ಸಾವು!
ಜೊಯಿಡಾದ ಕೃಷ್ಣ ಗಾಂವಕರ ಕಾಳಿ – ಕಾನೇರಿ ನದಿ ಸಂಗಮ ಪ್ರದೇಶದ ನೀರಿನಲ್ಲಿ ಬಿದ್ದು ಬದುಕು ಕಳೆದುಕೊಂಡಿದ್ದಾರೆ. ಗು0ದ ಕೆರೆಗದ್ದೆಯಲ್ಲಿ ಕೃಷ್ಣ ಗಾಂವಕರ (48) ಕುಟುಂಬದವರ ಜೊತೆ ವಾಸವಾಗಿದ್ದರು. ಏಪ್ರಿಲ್ 17ರಂದು ಅವರು ಅರಣ್ಯ ಇಲಾಖೆಯ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಅದೇ ಊರಿನ…
ಮುಂಡಗೋಡ ಬಿಜೆಪಿಗರಿಗೆ ಪ್ರತಿಭಟಿಸುವ ಹಕ್ಕಿಲ್ಲ!
ಮುಂಡಗೋಡಿನ ಬಿಜೆಪಿ ಯುವ ಮೋರ್ಚಾದವರು ರಾಹುಲ್ ಗಾಂಧೀ ಅವರ ಪೃತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ. ಯಲ್ಲಾಪುರ ಯುವ ಕಾಂಗ್ರೆಸ್ ತಾಲೂಕಾ ಅಧ್ಯಕ್ಷ ಗಣೇಶ ಹೆಗಡೆ ಇದನ್ನು ಖಂಡಿಸಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ…
ಮೀನುಗಾರ ಮಹಿಳೆ ಮೈಮೇಲೆ 2ಲಕ್ಷ ರೂ ಬಂಗಾರ: ಬೈಕಿನಲ್ಲಿ ಬಂದ ಕಳ್ಳರಿಗೆ ಪೊಲೀಸರ ಮೂಗುದಾರ!
ಮುರುಡೇಶ್ವರ ಬಳಿ ನಡೆದು ಹೋಗುತ್ತಿದ್ದ ಮೀನುಗಾರ ಮಹಿಳೆಯ ಕತ್ತಿನಲ್ಲಿದ್ದ ಸರ ಎಗರಿಸಿದ ಇಬ್ಬರು ಆಗಂತುಕರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಪತ್ತೆ ಹಚ್ಚಿದೆ. ಕಳ್ಳರಿಬ್ಬರನ್ನು ಬಂಧಿಸಿದ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಭಟ್ಕಳ ತಾಲೂಕಿನ ಬಸ್ತಿಮಕ್ಕಿಯ ಮೀನು ಮಾರಾಟ ಮಾಡುವ ಮಹಿಳೆ…
ಜೋಗದ ಅಡಿ ಸೆಲ್ಪಿ ಹುಚ್ಚು: ಅಪಾಯಕ್ಕೆ ಸಿಲುಕಿದವರಿಗೆ ಅಪರ ಜಿಲ್ಲಾಧಿಕಾರಿಗಳ ಪಾಠ!
ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವ ಜೋಗ ಜಲಪಾತದಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದ್ದವರಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಬಿಸಿ ಮುಟ್ಟಿಸಿದ್ದಾರೆ. ಶುಕ್ರವಾರ ಜಲಪಾತ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅದರಲ್ಲಿ ಕೆಲವರು ಅಲ್ಲಿ ಅಳವಡಿಸಲಾದ ಗೇಟ್ ಹಾರಿ ಮುಂದೆ ಚಲಿಸಿದ್ದರು. ಅಪಾಯಕಾರಿ…
ಜನಿವಾರ ಪ್ರಕರಣ: ಸಂತ್ರಸ್ತ ವಿದ್ಯಾರ್ಥಿಗಳಿಗೆ ಶ್ರೀಮಠದ ಅಭಯ!
`ಬೀದರ್ ಹಾಗೂ ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆಯುವಂತೆ ತಾಕೀತು ಮಾಡಿದ ಪರೀಕ್ಷಾ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು’ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ. `ಜನಿವಾರದ ಕಾರಣಕ್ಕೆ ಪರೀಕ್ಷೆ ಬರೆಯಲು ಸಾಧ್ಯವಾಗದ ಎಲ್ಲರಿಗೂ ಸಹಾಯಹಸ್ತ ಚಾಚಲು…
ಮದುವೆಗೆ ಹೋಗಬೇಕಿದ್ದ ಮಹಿಳೆ ಕಾಣೆ: ಮಕ್ಕಳ ಬಗ್ಗೆಯೂ ಸಿಕ್ಕಿಲ್ಲ ಸುಳಿವು!
ಮದುವೆಗೆ ಹೋಗಬೇಕಿದ್ದ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ. ಆ ಮಹಿಳೆ ಜೊತೆ ಇಬ್ಬರು ಮಕ್ಕಳು ಕಾಣಿಸುತ್ತಿಲ್ಲ. ಶಿರಸಿ ಪೊಲೀಸರು ಮಹಿಳೆ ಹಾಗೂ ಮಕ್ಕಳ ಹುಡುಕಾಟ ನಡೆಸಿದ್ದಾರೆ. ಶಿರಸಿ ಗಣೇಶನಗರದ ಮಾರುತಿಗಲ್ಲಿಯಲ್ಲಿ ಜ್ಯೋತಿ ಭೋವಿವಡ್ಡರ್ (32) ಅವರು ತಮ್ಮ ಕುಟುಂಬದ ಜೊತೆ ವಾಸವಾಗಿದ್ದರು. ಸಂಬAಧಿಕರ ಮದುವೆಗಾಗಿ…
ವಾಣಿಜ್ಯ ಬಂದರುವಿಗೆ ವಿರೋಧ: ಮೀನುಗಾರರ ಬೆಂಬಲಕ್ಕೆ ನಿಂತ ಶೃಂಗೇರಿ ಶ್ರೀ!
ಹೊನ್ನಾವರದ ಕಾಸರಕೋಡಿನಲ್ಲಿ ವಾಣಿಜ್ಯ ಬಂದರು ವಿರೋಧಿ ಹೋರಾಟಕ್ಕೆ ಶೃಂಗೇರಿ ಪೀಠದ ವಿಧುಶೇಖರ ಭಾರತಿ ಸ್ವಾಮೀಜಿ ಬೆಂಬಲ ನೀಡಿದ್ದಾರೆ. ಮೀನುಗಾರರ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅವರು `ಹೋರಾಟಗಾರರ ಜೊತೆ ತಾನಿದ್ದೇನೆ’ ಎಂಬ ಸಂದೇಶ ರವಾನಿಸಿದರು. ಹೊನ್ನಾವರ ಪಟ್ಟಣದ ಬಜಾರ್ ರಸ್ತೆಯಲ್ಲಿ…
ಚಹಾ ಅಂಗಡಿಯಲ್ಲಿ ಸರಾಯಿ ಮಾರಾಟ!
ಯಲ್ಲಾಪುರದ ಕುಬೇರ್ ಹೊಟೇಲ್ ಅಂಚಿನಲ್ಲಿ ಚಹಾ ಅಂಗಡಿಯಲ್ಲಿ ಸರಾಯಿ ಮಾರಾಟ ನಡೆಯುತ್ತಿರುವುದನ್ನು ಪಿಎಸ್‌ಐ ಯಲ್ಲಾಲಿಂಗ ಕನ್ನೂರು ಪತ್ತೆ ಮಾಡಿದ್ದಾರೆ. ತಾತ್ಕಾಲಿಕ ಶೆಡ್ ನಿರ್ಮಿಸಿ ಸರಾಯಿ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಹುಲಿಮನೆಯ ಮಧುಕರ ನಾಯ್ಕ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಏಪ್ರಿಲ್ 17ರಂದು…
ವಿಷ ಸೇವಿಸಿದ ಗುತ್ತಿಗೆದಾರ: ಆತ ಇನ್ನಿಲ್ಲ!
ಜೀವನದಲ್ಲಿ ಜಿಗುಪ್ಸೆ ಹೊಂದಿದ ಶಿರಸಿಯ ಗುತ್ತಿಗೆದಾರ ಅಬ್ದುಲ್ ಬಶೀರ ಶೇಖ್ (57) ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿರಸಿ ಇಂದಿರಾನಗರದಲ್ಲಿ ಅವರು ವಾಸವಾಗಿದ್ದರು. ಈಚೆಗೆ ಬೇಸರದಲ್ಲಿರುತ್ತಿದ್ದ ಅವರು `ನನಗೆ ಈ ಜೀವನ ಬೇಡ’ ಎಂದು ಹೇಳಿಕೊಳ್ಳುತ್ತಿದ್ದರು. ಇದನ್ನು ಅರಿತ ಅವರ ಮಗ ರಶೀದ ಶೇಖ್…
ವಿದ್ಯುತ್ ಸ್ಪರ್ಶಕ್ಕೆ ಚಿರತೆ ಬಲಿ
ಶಿರಸಿಯ ಕಾಗೇರಿ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಸಾವನಪ್ಪಿದೆ. ವಿದ್ಯುತ್ ಅವಘಡದಿಂದ ಚಿರತೆ ಸಾವನಪ್ಪಿರುವುದು ಖಚಿತವಾಗಿದೆ. ಕಾಗೇರಿ ಗ್ರಾಮ ಹಲಸಿನಕೈ ಬೆಟ್ಟದಲ್ಲಿ ಶುಕ್ರವಾರ ಚಿರತೆಯ ಶವ ಸಿಕ್ಕಿದೆ. ನಾಲ್ಕು ವರ್ಷದ ಗಂಡು ಚಿರತೆ ಇದಾಗಿದೆ. ಅರಣ್ಯ ಸರ್ವೇ ನಂಬರ್ 160ರಲ್ಲಿ ಚಿರತೆ ಸಾವನಪ್ಪಿದ…

ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ
ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ
ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ








































