6
ಮಂಗೋಡ್ಲ ರಸ್ತೆಗೆ ಮೂಗು ಮುಚ್ಚಿಕೊಂಡು ಬನ್ನಿ!

ಕುಮಟಾ: ಹೊಲನಗದ್ದೆಯ ಮಂಗೋಡ್ಲ ರಸ್ತೆಯ ಪಕ್ಕದಲ್ಲಿ ತ್ಯಾಜ್ಯಗಳ ರಾಶಿ ಬಿದ್ದಿದ್ದು, ಸುತ್ತಲಿನ ವಾತಾವರಣ ಗಬ್ಬೆದ್ದಿದೆ. ಈ ಭಾಗದಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ಓಡಾಡುವುದು ಅನಿವಾರ್ಯವಾಗಿದೆ. ರಸ್ತೆ ಅಂಚಿನಲ್ಲಿ ಬಿದ್ದ ತ್ಯಾಜ್ಯ ಸಾಂಕ್ರಾಮಿಕ ರೋಗ ಹರಡುವ ಕೇಂದ್ರವಾಗಿದೆ. ಈ ಬಗ್ಗೆ ದೂರು ಬಂದರೂ…

ಶಿರೂರು: ಕಣ್ಮರೆಯಾದವನ ಕುಟುಂಬಕ್ಕೆ ಲಾರಿ ಚಾಲಕರ ನೆರವು

ಅಂಕೋಲಾ: ಶಿರೂರು ಗುಡ್ಡ ಕುಸಿತದ ಅವಧಿಯಲ್ಲಿ ಕಣ್ಮರೆಯಾದ ಜಗನ್ನಾಥ ನಾಯ್ಕ ಕುಟುಂಬಕ್ಕೆ ಲಾರಿ ಚಾಲಕರು ನೆರವು ನೀಡಿದ್ದಾರೆ. ಜಗನ್ನಾಥ ಅವರ ಮೂವರು ಮಕ್ಕಳು ತೊಂದರೆಯಲ್ಲಿರುವುದನ್ನು ಅರಿತ ಲಾರಿ ಚಾಲಕರು 1 ಲಕ್ಷ ರೂ ಆಥಿಕ ನೆರವು ನೀಡಿದರು. ಜನಶಕ್ತಿ ವೇದಿಕೆ ಅಧ್ಯಕ್ಷ…

ವಿದ್ಯಾರ್ಹತೆ ಇಲ್ಲದವರೇ ಇಲ್ಲಿ ದೊಡ್ಡ ವೈದ್ಯರು: SSLC ಫೇಲ್ ಆದವರೇ ನುರಿತ ತಜ್ಞರು!

ಯಲ್ಲಾಪುರ: ಯಾವುದೇ ವಿದ್ಯಾರ್ಹತೆ, ವೈದ್ಯಕೀಯ ಪರಿಣತಿ ಇಲ್ಲದಿದ್ದರೂ ಕಿರವತ್ತಿಯ ಮನೆಯೊಂದರಲ್ಲಿ ಆಸ್ಪತ್ರೆ ನಡೆಸುತ್ತಿದ್ದವರಿಗೆ ಸೋಮವಾರ ಆರೋಗ್ಯಾಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ನಕಲಿ ವೈದ್ಯನ ವಿರುದ್ಧ ಕ್ರಮ ಜರುಗಿಸಿದ್ದಾರೆ. ನೇಮಿಣಿಗಲ್ಲಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಬಗ್ಗೆ ದೂರು ಕೇಳಿ ಬಂದಿದ್ದು, ಈ ಹಿನ್ನಲೆ ಅಧಿಕಾರಿಗಳು ತಪಾಸಣೆ…

ಮಲೆನಾಡಿನಲ್ಲಿ ಮುಂದುವರೆದ ಮಳೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಸೋಮವಾರ ಯಲ್ಲಾಪುರದಲ್ಲಿ 84.2 ಮಿಲಿ ಮೀಟರ್ ಮಳೆಯಾಗಿದೆ. ಸಿದ್ದಾಪುರ 28.4 ಮಿಲಿ ಮೀಟರ್, ಶಿರಸಿ 21.5 ಮಿಲಿ ಮೀಟರ್ ಮಳೆಯಾಗಿದೆ. ಜೊಯಿಡಾ 21.4,…

ನೆರೆ ಸಂತ್ರಸ್ತರಿಗೆ ನೋಟಿಸ್!

ಹೊನ್ನಾವರ: ಲಿಂಗನಮಕ್ಕಿ ಹಾಗೂ ಗೇರಸೊಪ್ಪ ಜಲಾಶಯಗಳಿಂದ ನೀರು ಹೊರಬಿಡುವ ಸಾಧ್ಯತೆ ಹೆಚ್ಚಿದ್ದು, ನೆರೆ ಪ್ರದೇಶದ ಜನರಿಗೆ ಸ್ಥಳದಿಂದ ಹೊರ ಹೋಗುವಂತೆ ಸೂಚಿಸಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಗರಬಸ್ತಿಕೇರಿ, ಉಪೋಣಿ, ಹೆರಂಗಡಿ ಹಾಗೂ ಜಲವಳಿ ಪಂಚಾಯತಿ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು, ಅಲ್ಲಿ…

ಹಳ್ಳಕ್ಕೆ ಬಿದ್ದ ರೈತ ಸಾವು

ಶಿರಸಿ: ಗದ್ದೆಗೆ ಹೋಗಿದ್ದ ರಾಜೇಶ ಗಣಪತಿ ನಾಯ್ಕ (38) ಹಳ್ಳದಲ್ಲಿ ಬಿದ್ದು ಸಾವನಪ್ಪಿದ್ದಾರೆ. ತಾರಗೋಡು ಬಳಿಯ ಸದಾಶಿವಳ್ಳಿ ಗುಡೆಕೊಪ್ಪದ ರಾಜೇಶ ನಾಯ್ಕ ಜುಲೈ 28ರಂದು ಕೃಷಿ ಚಟುವಟಿಕೆ ನಡೆಸಲು ತಮ್ಮ ಗದ್ದೆಗೆ ತೆರಳಿದ್ದರು. ಭತ್ತದ ನಾಟಿಗೆ ತಯಾರಿ ಮಾಡುತ್ತಿದ್ದ ವೇಳೆ ಅವರು…

ಅರಣ್ಯ ಅತಿಕ್ರಮಣ ವಿಷಯದಲ್ಲಿ ಗೊಂದಲ: ಆತಂಕ ಬೇಡ ಎಂದ ಹೋರಾಟಗಾರ

ಶಿರಸಿ: `ಅರಣ್ಯ ಭೂಮಿ ಹಕ್ಕು ಕಾಯಿದೆಗೆ ತಿದ್ದುಪಡಿ ವಿಷಯವಾಗಿ ವಿಧಾನ ಮಂಡಲ ಸದನ ಇತ್ತೀಚೆಗೆ ತೆಗೆದುಕೊಂಡ ನಿರ್ಣಯಗಳು ಗೊಂದಲಕ್ಕೆ ಕಾರಣವಾಗಿದ್ದು, ಕಾಯಿದೆ ಅರಣ್ಯವಾಸಿಗಳ ಪರವಾಗಿದ್ದರಿಂದ ಭೂಮಿ ಹಕ್ಕಿನ ಕಾಯಿದೆಗೆ ತಿದ್ದುಪಡಿ ಅಗತ್ಯವಿಲ್ಲ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಅಧ್ಯಕ್ಷ…

ಶ್ರೀಗಳ ದರ್ಶನ ಪಡೆದ ಶಾಸಕ

ಭಟ್ಕಳ: ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕರಿಕಲ್ ಶ್ರೀರಾಮ ಧ್ಯಾನ ಮಂದಿರದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ನಡೆಸುತ್ತಿದ್ದಾರೆ. ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. `ಜನರಲ್ಲಿ ಧಾರ್ಮಿಕ…

ಯೋಗ ಶಿಕ್ಷಕನಿಗೆ ಒಲಿದ ಚಿನ್ನದ ಪದಕ

ಯಲ್ಲಾಪುರ: ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಹುಟಕಮನೆ ಶಾಲೆಯ ಶಿಕ್ಷಕ ಸುಬ್ರಾಯ ಭಟ್ ಚಿನ್ನದ ಪದಕ ಪಡೆದಿದ್ದಾರೆ. ಯೋಗ ಪೆಡರೇಶನ್ ಆಫ್ ಇಂಡಿಯಾದವರು ಈ ಸ್ಪರ್ಧೆ ಆಯೋಜಿಸಿದ್ದರು. 50-60 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಅವರು ಈ ಬಹುಮಾನ ಪಡೆದಿದ್ದಾರೆ. ಸುಬ್ರಾಯ…

ನಾಲ್ಕು ಮಕ್ಕಳ ಜೀವ ಉಳಿಸಿದ ಪುಣ್ಯಾತ್ಮ!

ನದಿ ಅಂಚಿನಲ್ಲಿ ಮೀನು ಹಿಡಿದು ಬದುಕುವ ಹೂವಾ ಗೌಡ ಅದ್ಬುತ ಈಜುಗಾರ. ಅವರು ಬಾಲ್ಯದಲ್ಲಿ ಕಲಿತ ಈ ವಿದ್ಯೆ ಇದೀಗ ನಾಲ್ಕು ಮಕ್ಕಳ ಜೀವ ಕಾಪಾಡಿದೆ! ಶಿರೂರು ಗುಡ್ಡ ಕುಸಿತದ ಅವಧಿಯಲ್ಲಿ ಮಕ್ಕಳು ನದಿ ನೀರಿನಲ್ಲಿ ತೇಲಿ ಹೋಗುವುದನ್ನು ನೋಡಿದ ಹೂವಾ…

You cannot copy content of this page