6
ಮಳೆಗಾಲದ ಮಾನಿನಿ ಈ ಗೋಲಾರಿ ಜಲಪಾತ!

ಪಶ್ಚಿಮಘಟ್ಟದ ಕಾಡನ್ನು ಹೊದ್ದು ಹಸರಿಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಪಾತಗಳಿಗೇನೂ ಬರವಿಲ್ಲ. ಇಲ್ಲಿನ ಯಾವ ದಿಕ್ಕಿಗೆ ಹೋದರೂ ಒಂದಿಲ್ಲ ಒಂದು ಜಲಪಾತ ಸ್ವಾಗತಿಸುತ್ತದೆ. ನದಿ, ತೊರೆ, ಹಳ್ಳಗಳನ್ನು ಒಳಗೊಂಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹುಟ್ಟುವ ಸಣ್ಣ ಸಣ್ಣ ಜಲಪಾತಗಳು ಸಹ ಪ್ರವಾಸಿಗರನ್ನು ಆಕರ್ಷಿಸುತ್ತದೆ.…

ಪ್ರವಾಸಿಗರ ಸ್ವರ್ಗಕ್ಕೆ ನಿಮಗಿದೋ ಸ್ವಾಗತ!

ಉತ್ತರ ಕನ್ನಡ ಹಾಗೂ ಗೋವಾ ಗಡಿಯಲ್ಲಿರುವ ದೂದ್ ಸಾಗರ್ ಜಲಪಾತ ಪ್ರವಾಸಿಗರ ಪಾಲಿಗೆ ಸ್ವರ್ಗ! ವ್ಲಾಗರ್ ವಿನಯ್ ಹೆಗಡೆ ಅವರ ಜೊತೆ ಈ ಸ್ವರ್ಗ ಲೋಕದಲ್ಲಿ ಒಂದು ಸುತ್ತು ಹಾಕಿ ಬರೋಣ, ಬನ್ನಿ.. ದೂದ್ ಸಾಗರ್ ಜಲಪಾತದ ವಿಡಿಯೋ ಇಲ್ಲಿ ನೋಡಿ..

ಮುಂದುವರೆದ ವರ್ಗಾವಣೆ ಪರ್ವ: ಪೊಲೀಸರ ಸ್ಥಾನ ಬದಲು

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಇದೀಗ ಪಿಸೈ ವರ್ಗಾವಣೆ ನಡೆಯುತ್ತಿದೆ. ಜಿಲ್ಲೆಯ ಹಲವು ಪೊಲೀಸ್ ಠಾಣೆಯ ಪಿಸೈ ವರ್ಗಾವಣೆಯಾಗಿದ್ದು, ಇದರ ಆದೇಶ ಶೀಘ್ರದಲ್ಲಿಯೇ ಸಂಬoಧಿಸಿದ ಠಾಣೆಗಳಿಗೆ ಬರಲಿದೆ. ಒಳ್ಳೆಯ ಠಾಣೆ ಆಯ್ಕೆಗೆ ಪೊಲೀಸರ ನಡುವೆ ಪೈಪೋಟಿ ನಡೆದಿದ್ದರೂ…

ನದಿಗೆ ಬಿದ್ದ ಗ್ಯಾಸ್ ಟ್ಯಾಂಕರ್

ಕುಮಟಾ: ರಾಷ್ಟ್ರೀಯ ಹೆದ್ದಾರಿ 66ರ ಹೊನ್ಮಂವ್ ತಿರುವಿನಲ್ಲಿ ಬುಧವಾರ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ನದಿಗೆ ಬಿದ್ದಿದೆ. ಕುಮಟಾ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಟ್ಯಾಂಕರ್ ಇದಾಗಿತ್ತು. ನದಿಯ ಸೇತುವೆಗೆ ಗುದ್ದಿದ ಟ್ಯಾಂಕರ್ ನಂತರ ಕೆಳಗೆ ಬಿದ್ದಿದೆ. ಪರಿಣಾಮ ಚಾಲಕನಿಗೆ ಗಾಯವಾಗಿದೆ. ಅಗ್ನಿಶಾಮಕ ಸಿಬ್ಬಂದಿ…

ಮಸೀದಿ ಎದುರು ಅಮಲು ಸೇವನೆ: ಸುಳ್ಳು ಹೇಳಿ ಸಿಕ್ಕಿಬಿದ್ದ ಗಾಂಜಾ ಗಿರಾಕಿ!

ಯಲ್ಲಾಪುರ: ಪಟ್ಟಣದ ಬಿಲಾಲ್ ಮಸೀದಿ ಎದುರು ಗಾಂಜಾ ಸೇದುತ್ತಿದ್ದ 22 ವರ್ಷದ ತೌಫಿಕ್ ರಫೀಕ್ ಶೇಖ್ ಎಂಬಾತನ ಮೇಲೆ ಪಿಸೈ ಶ್ಯಾಮ್ ಪಾವಸ್ಕರ್ ದಾಳಿ ನಡೆಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಈತ ಗಾಂಜಾ ಸೇವಿಸಿದ್ದು ದೃಢಪಟ್ಟಿದೆ. ಶಾರದಾಗಲ್ಲಿಯ ತೌಫಿಕ್ ರಫೀಕ್ ಶೇಖ್ ಜುಲೈ…

ಮಳೆ ಹಾಗೂ ಸಂತ್ರಸ್ತರು: ಜಿಲ್ಲಾಧಿಕಾರಿ ಹೇಳಿದ್ದೇನು?

ಕಾರವಾರ: `ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮಳೆ ಕ್ಷೀಣಗೊಂಡಿದ್ದು, ಹೊನ್ನಾವರ ತಾಲೂಕಿನ 3 ಮತ್ತು ಕುಮಟಾದ 2 ಕಾಳಜಿ ಕೇಂದ್ರ ಸೇರಿದಂತೆ ಒಟ್ಟು 5 ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಎಲ್ಲಾ ಸಂತ್ರಸ್ಥರು ತಮ್ಮ ಮನೆಗಳಿಗೆ ತೆರಳಿದ್ದಾರೆ’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ…

ಪ್ಲಾಸ್ಟಿಕ್ ಬಳಕೆದಾರರಿಗೆ ದಂಡದ ಬಿಸಿ

ದಾಂಡೇಲಿ: ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಪ್ಲಾಸ್ಟಿಕ್ ಬಳಸುತ್ತಿದ್ದವರಿಂದ ದಂಡ ವಸೂಲಿ ಮಾಡಿ, ಅರಿವು ಮೂಡಿಸಿದರು. ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿದ್ದು, 125 ಕೆಜಿಗೂ ಅಧಿಕ ನಿಷೇಧಿತ ಪ್ಲಾಸ್ಟಿಕ್ ದೊರೆತಿದೆ. ಏಕಬಳಕೆಯ ಪ್ಲಾಸ್ಟಿಕ್ ಸ್ಟಾç, ಕಪ್ ಮತ್ತು ಕ್ಯಾರಿಬ್ಯಾಗ್…

ರಿಕ್ಷಾಗೆ ಗುದ್ದಿದ ಬೈಕ್: ದಂಪತಿಗೆ ಗಾಯ

ಯಲ್ಲಾಪುರ: ಮಂಚಿಕೇರೆಯಿoದ ಕುರಿಕೊಪ್ಪ ಕಡೆ ತೆರಳುತ್ತಿದ್ದ ಕುಮಾರ ನಾಯ್ಕ ಎಂಬಾತ ಎದುರಿನಿಂದ ಬಂದ ರಿಕ್ಷಾಗೆ ತನ್ನ ಬೈಕ್ ಗುದ್ದಿದ್ದು, ಇದರಿಂದ ಕುಮಾರ ನಾಯ್ಕ ಹಾಗೂ ಅವರ ಪತ್ನಿ ರಾಜೇಶ್ವರಿ ನಾಯ್ಕ’ಗೆ ಗಾಯವಾಗಿದೆ. ಹಿತ್ಲಳ್ಳಿ ಬಳಿಯಿರುವ ವಾಟೆಹಳ್ಳಿಯ ಕುಮಾರ್ ನಾಯ್ಕ ಜುಲೈ 9ರಂದು…

ಶಾಲಾ ಮಕ್ಕಳ ಬಿಸಿಯೂಟ ಸವಿದ ತಾಪಂ ಅಧಿಕಾರಿ

ಶಿರಸಿ: ತಾಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಹೆಗಡೆ ಬುಧವಾರ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಆಹಾರ ಸೇವಿಸಿ ಗುಣಮಟ್ಟ ಪರಿಶೀಲಿಸಿದರು. `ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮವಾದ ಆಹಾರ ನೀಡಬೇಕು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ಹೆಚ್ಚಿನ ಮುತುವರ್ಜಿ…

BSNL ನೆಟ್‌ವರ್ಕ ಇದೀಗ ವ್ಯಾಪ್ತಿ ಪ್ರದೇಶದ ಒಳಗೆ!

ಉತ್ತರ ಕನ್ನಡ ಜಿಲ್ಲೆಗೆ ಮಂಜೂರಾಗಿದ್ದ ಕೆಲ BSNL ಟವರ್ ನಿರ್ಮಾಣಕ್ಕೆ ಇದ್ದ ಕೆಲ ತಾಂತ್ರಿಕ ಅಡಚಣೆಗಳು ಇದೀಗ ದೂರವಾಗಿದೆ. ಟವರ್ ನಿರ್ಮಾಣಕ್ಕೆ ಕೆಲವಡೆ ಅರಣ್ಯ ಇಲಾಖೆ ಅನುಮತಿ ಸಿಕ್ಕಿರಲಿಲ್ಲ. ಅಲ್ಲಲ್ಲಿ ಸ್ಥಳಾವಕಾಶ ಸರಿಯಾಗಿರಲಿಲ್ಲ. ಇನ್ನೂ ಕೆಲವು ಕಡೆ ಟವರ್ ಮಂಜೂರಿ ಆಗಿದ್ದರೂ…

You cannot copy content of this page