6
ರಾತ್ರಿ ಬರ್ತಾರೆ.. ಕಾರು ತರ್ತಾರೆ.. ಗೋವು ಕದಿತಾರೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋ ಕಳ್ಳರ ಅಟ್ಟಹಾಸ ಮಿತಿಮೀರಿದೆ. ಐಷಾರಾಮಿ ಕಾರುಗಳಲ್ಲಿ ಬರುವ ಕಳ್ಳರು ಬೀದಿಯಲ್ಲಿನ ಗೋವುಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ! ಕೆಲ ದಿನಗಳ ಹಿಂದೆ ಕಾರವಾರದ ಮಾಜಾಳಿಯಲ್ಲಿ ಕಾರಿನಲ್ಲಿ ಗೋವು ಕದ್ದೊಯ್ದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದೀಗ ಶಿರಸಿಯಲ್ಲಿ ಸಹ ಇದೇ…

ಟಿಕೆಟು ಕೊಡಲ್ಲ.. ಪಕ್ಷದಲ್ಲಿಯೂ ಇಟ್ಟುಕೊಳ್ಳಲ್ಲ.. ಶಿವರಾಮ ಹೆಬ್ಬಾರ್ ಇನ್ಮುಂದೆ ಬಿಜೆಪಿಗರಲ್ಲ!

ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿದೆ. ಶಿವರಾಮ ಹೆಬ್ಬಾರ್ ಅವರು ಬಿಜೆಪಿ ಪಕ್ಷದಿಂದ ಆಯ್ಕೆ ಆಗಿದ್ದರೂ ಈ ಉಚ್ಚಾಟನೆಯಿಂದ ಅವರ ಶಾಸಕ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ! ಶಿವರಾಮ ಹೆಬ್ಬಾರ್ ಅವರು ಈಗಾಗಲೇ ಬಿಜೆಪಿಯಿಂದ…

ಐಟಿ ಪಾರ್ಕ ಸ್ಥಾಪನೆ ವಿಷಯ: ಹೋರಾಟಗಾರರನ್ನು ಸ್ವರ್ಣವಲ್ಲಿ ಶ್ರೀಗಳ ಬಳಿ ಕಳುಹಿಸಿದ ಮಾಗೋಡು ಮಾರುತಿ!

ಯಲ್ಲಾಪುರದ ಮಾಗೋಡಿನಲ್ಲಿ 500 ಎಕರೆಗೂ ಅಧಿಕ ಪ್ರದೇಶ ಹಾಳುಬಿದ್ದಿದ್ದು, ಈ ಪ್ರದೇಶದಲ್ಲಿ `ಐಟಿ ಪಾರ್ಕ’ ಸ್ಥಾಪನೆಯ ಕೂಗು ಕೇಳಿ ಬಂದಿದೆ. `ಗ್ರಾಮೀಣ ಭಾಗದ ಯುವಕರು ಉದ್ಯೋಗ ಅರೆಸಿ ಮಹಾನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಈ ಯೋಜನೆ ಜಾರಿಗೆ ತರಬೇಕು’ ಎಂದು ಅಲ್ಲಿನ…

ಬಾರಕೋಲು ಬಾರಿಸಿ ಚಕ್ಕಡಿ ಓಡಿಸಿದ ಶಾಸಕ ಭೀಮಣ್ಣ!

ಬಿಡುವು ಸಿಕ್ಕಾಗಲೆಲ್ಲ ಕೃಷಿ ಚಟುವಟಿಕೆಯಲ್ಲಿ ತೊಡಗುವ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಸೋಮವಾರ ಬಾರಕೋಲು ಹಿಡಿದು ಚಕ್ಕಡಿ ಗಾಡಿ ಓಡಿಸಿದರು. ಶಾಸಕರು ಹೈ ಹೈ ಎನ್ನುವಾಗ ನೆರೆದಿದ್ದ ಜನರು ಜೈ ಜೈ ಎಂದು ಕೂಗಿದರು! ಶಾಸಕ ಭೀಮಣ್ಣ ನಾಯ್ಕ…

ಗ್ರಾಸಿಂ ಗೆಸ್ಟ್ ಹೌಸು.. ರೂಂ ನಂ 20!

ಕಾರವಾರದ ಗ್ರಾಸಿಂ ಗೆಸ್ಟ್ ಹೌಸಿನಲ್ಲಿ ಉಳಿದುಕೊಂಡಿದ್ದ ನೆರೆ ರಾಜ್ಯದ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಕಾರವಾರದ ಬಿಣಗಾದಲ್ಲಿರುವ ಗ್ರಾಸಿಂ ಇಂಡಸ್ಟ್ರಿಯಲ್ಲಿ ಸ್ಟೆಪೋಲ್ಡಿಂಗ್ ಪೇಂಟಿoಗ್ ಎಂಬ ಕೆಲಸ ನಡೆಯುತ್ತಿದೆ. ಈ ಕೆಲಸದ ಉಸ್ತುವಾರಿ ನೋಡಿಕೊಳ್ಳಲು ಮಹಾರಾಷ್ಟದಿಂದ ರಾಜೇಂದ್ರ ಚೌದರಿ ಎಂಬಾತರು ಆಗಮಿಸಿದ್ದರು. ಮೋನಾರ್ಕ ಇಂಡಸ್ಟ್ರಿಯಲ್…

ಕಾನ್ಸರ್ ಕೋಶದ ಮೇಲೆ ಬೋರಾನ್ ಅಣು ಪ್ರಯೋಗ: ಗೋಕರ್ಣ `ಚಾಮಿ’ ಸಾಧನೆಗೆ ಅಮೇರಿಕಾದವರ ಅಚ್ಚರಿ!

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮೂಲದ ಡಾ ನಾರಾಯಣ ಹೊಸ್ಮನೆ ಅವರು ಕಾನ್ಸರ್ ರೋಗದ ವಿರುದ್ಧ ಹೋರಾಟದಲ್ಲಿ ಹೊಸ ಸಂಶೋಧನೆ ನಡೆಸಿದ್ದಾರೆ. ಅವರ ಈ ಸಾಧನೆಯನ್ನು ಅಮೇರಿಕಾ ಮೆಚ್ಚಿಕೊಂಡಿದ್ದು, `ಉನ್ನತ ವಿದ್ವಾಂಸ’ ಎಂದು ಗುರುತಿಸಿದೆ. ಬೋರಾನ್ ಆಧಾರಿತ ಸಂಶೋಧನೆಯಿAದ ಕಾನ್ಸರ್ ಗುಣಮುಖ…

ಸ್ಕೂಟಿಗೆ ಗುದ್ದಿದ ದೆಹಲಿಯ ಕಾರು: ಸವಾರ ಸಾವು!

ದಂಪತಿಸಹಿತ ಸಂಬoಧಿಕರ ಮನೆಗೆ ಹೋಗಿ ಮರಳುತ್ತಿದ್ದ ವೃದ್ಧರಿಗೆ ಕಾರು ಗುದ್ದಿದೆ. ಪರಿಣಾಮ ಜೊಯಿಡಾ ರಾಮನಗರ ಬಳಿಯ ಬಾಳಕೃಷ್ಣ ಗಾವಡಾ ಸಾವನಪ್ಪಿದ್ದಾರೆ. ಮೊನ್ನೆ ಕಾಮ್ರಾ ಗ್ರಾಮದ ಬಾಳಕೃಷ್ಣ ಗಾವಡಾ (70) ಅವರು ತಮ್ಮ ಪತ್ನಿ ರಾಧಿಕಾ ಗಾವಡಾ ಅವರ ಜೊತೆ ಕುರವೈ ಗ್ರಾಮದ…

ತಬ್ಬಲಿ ಜೀವಕ್ಕೆ ಮುಕ್ತಿ ನೀಡಿದ ನಾಗರಾಜ: ಅನಾಥರ ಪಾಲಿಗೆ ಈತನೇ ಆಪತ್ಬಾಂದವ!

40 ವರ್ಷಗಳಿಂದ ಮೂರ್ತಿ ಕೆತ್ತುವ ಕೆಲಸ ಮಾಡಿಕೊಂಡಿದ್ದ ಪೊನ್ನಪ್ಪ ಎ ಎಂಬಾತರು ಇಳಿ ವಯಸ್ಸಿನಲ್ಲಿ ಸಿದ್ದಾಪುರದ ಪುನೀತ್ ರಾಜಕುಮಾರ್ ಆಶ್ರಯಧಾಮ ಸೇರಿದ್ದು, ಭಾನುವಾರ ರಾತ್ರಿ ಅವರು ನಿಧನರಾದರು. ಅನಾಥಾಶ್ರಮದ ಮುಖ್ಯಸ್ಥ ನಾಗರಾಜ ನಾಯಕ ಅವರು ಅಂತ್ಯ ಸಂಸ್ಕಾರ ನಡೆಸಿದರು. ಕೇರಳ ಮೂಲಕ…

ಕಂಡ ಕಂಡಲ್ಲಿ ಗುಂಡಿ: ಮಹಿಳಾ ಅಧಿಕಾರಿಗೆ ಕಾನೂನು ಪಾಠ!

ಕಂಡ ಕಂಡಲ್ಲಿ ಗುಂಡಿ ತೆಗೆಯುವ ಅರಣ್ಯ ಇಲಾಖೆ ಕ್ರಮವನ್ನು ಅರಣ್ಯ ಭೂಮಿ ಹಕ್ಕು ಹೋರಾಟಾಗಾರರ ವೇದಿಕೆ ಪ್ರಶ್ನಿಸಿದೆ. ಹೊನ್ನಾವರದ ವಲಯ ಅರಣ್ಯಾಧಿಕಾರಿ ಸವಿತಾ ದೇವಡಿಗ ಅವರಿಗೆ ಸ್ಪಷ್ಠೀಕರಣಬಯಸಿ ಸೋಮವಾರ ಹೋರಾಟಗಾರರ ಪತ್ರ ನೀಡಿದ್ದಾರೆ. ಈಚೆಗೆ ಅರಣ್ಯ ಸಿಬ್ಬಂದಿ 1988ರ ಪೂರ್ವದ ಮಂಜೂರಿ…

ದಾಂಡೇಲಿ: ಸಮಗ್ರ ಅಭಿವೃದ್ಧಿ ಆಗುವುದು ಯಾವಾಗ?

ದಾಂಡೇಲಿಯ ಸಮಗ್ರ ಅಭಿವೃದ್ಧಿಗಾಗಿ ಅಲ್ಲಿನ ಹೋರಾಟಗಾರರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಅದರ ಪರಿಣಾಮವಾಗಿ ಇದೀಗ ಕೆಲ ಆಶಾದಾಯಕ ಬೆಳವಣಿಗೆಗಳು ನಡೆದಿದೆ. ದಾಂಡೇಲಿಯಲ್ಲಿನ ಬಡವರಿಗೆ ಜಿ+ ಮನೆ ನಿರ್ಮಾಣವಾಗಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದರು. ಈ ಬಗ್ಗೆ ನಗರಸಭೆ ಪೌರಾಯುಕ್ತರ ಮೂಲಕ ಸರ್ಕಾರಕ್ಕೆ ಮನವಿ…

You cannot copy content of this page