ಸಮಸ್ಯೆ ಆಲಿಸಿದ ಸಂಸದ: 12ಮೀಟರಿನ ರಸ್ತೆಗೆ ಏಳು ಮೀಟರ್ ಸೇತುವೆ!
ಕರ್ನಾಟಕ ಮತ್ತು ಗೋವಾ ರಾಷ್ಟ್ರೀಯ ಹೆದ್ದಾರಿಯ ಅನಮೋಡ – ರಾಮನಗರ ಮಾರ್ಗದ ಕ್ಯಾಸರ್‌ಲಾಕ್ ರಸ್ತೆ 12 ಮೀಟರ್ ಅಗಲವಿದೆ. ಆದರೆ, 71ನೇ ಸಂಖ್ಯೆಯ ಸೇತುವೆಯನ್ನು ಮಾತ್ರ ಏಳು ಮೀಟರ್ ಅಗಲಕ್ಕೆ ನಿರ್ಮಿಸಲಾಗುತ್ತದೆ! ಇದಲ್ಲದೇ, ಸೇತುವೆ ಪ್ರದೇಶ ತಿರುವಿನಿಂದ ಕೂಡಿದ್ದು, 6 ಮೀಟರ್…
ಪ್ರಪಂಚ ಪರ್ಯಟನೆಗೆ ಹೊರಟ ಕಡಲಾಮೆಗಳ ಸಾಲು!
45 ದಿನಗಳ ಕಾಲ ಗೂಡಿನಲ್ಲಿ ಬೆಚ್ಚಗಿದ್ದ ಆಮೆ ಮರಿಗಳು ವಿಶಾಲವಾದ ಪ್ರಪಂಚ ನೋಡಲು ಭಾನುವಾರ ಸಮುದ್ರಕ್ಕಿಳಿದಿವೆ. ಕುಮಟಾ ಗಂಗೆಕೊಳ್ಳದ ಕಡಲತೀರದಲ್ಲಿ ಶಾಲಾ ಮಕ್ಕಳು ಆಮೆಗಳನ್ನು ಹಿಡಿದು ನೀರಿಗೆ ಬಿಟ್ಟರು. ಡಿಸೆಂಬರಿನಿoದ ಮಾರ್ಚ ಅವಧಿ ಕಡಲ ಆಮೆಗಳ ಪಾಲಿಗೆ ಸಂತಾನೋತ್ಪತ್ತಿ ಕಾಲ. ಈ…
ಜಯ ರಾಜನಿಗೆ ಒಲಿದ ರಾಷ್ಟ್ರಪತಿ ಪದಕ
ಮುಖ್ಯಮಂತ್ರಿ, ರಾಷ್ಟ್ರಪತಿ ಸೇರಿ ಹಲವು ಗಣ್ಯರಿಗೆ ಭದ್ರತೆ ಒದಗಿಸುತ್ತಿದ್ದ ಸಿಪಿಐ ಜಯರಾಜ ಅವರು ಇದೀಗ ರಾಷ್ಟ್ರಪತಿ ಪದಕ ಪಡೆಯಲು ಸಜ್ಜಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿಭಾಯಿಸಿದ್ದ ಜಯರಾಜ್ ಅವರ ಸೇವೆ ಗುರುತಿಸಿ ಇದೀಗ…
ವಿದ್ಯುತ್ ತಯಾರಿಕೆಗೆ ವಿದ್ಯುತ್ ಬಳಕೆ: ಸರ್ಕಾರದ ಮುಂದಿದೆ 8 ಸಾವಿರ ಕೋಟಿ ಖರ್ಚು ಮಾಡಿ ಕಾಡು ನಾಶ ಮಾಡುವ ಯೋಜನೆ!
`ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಜಲ ವಿದ್ಯುತ್ ಯೋಜನೆ ಕೈಗೆತ್ತಿಕೊಳ್ಳುವಂತಿಲ್ಲ’ ಎಂದು ಕೇಂದ್ರ ಪರಿಸರ ಸಚಿವಾಲಯ 2011ರಲ್ಲಿ ಸುತ್ತೋಲೆ ಹೊರಡಿಸಿದೆ. ಅದಾಗಿಯೂ 8005 ಕೋಟಿ ರೂ ವೆಚ್ಚ ಮಾಡಿ ಶರಾವತಿ ವನ್ಯಜೀವಿ ಧಾಮದ ಪರಿಸರದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆ…
ಸಪ್ತಪದಿ ಸಡಗರಕ್ಕೆ ಸಾಕ್ಷಿಯಾದ ಶ್ರೀಕ್ಷೇತ್ರದ ಸಮುದ್ರ: ವಿದೇಶಿ ಬೆಡಗಿಗೆ ಕರಗಿದ ಹಿಮಾಲಯದ ಹುಡುಗನ ಮನಸ್ಸು!
ಗೋಕರ್ಣ ಮುಖ್ಯ ಕಡಲತೀರದ ರಾಮಾ-ಸೀತಾ-ಲಕ್ಷ್ಮಣ ಮಂದಿರದಲ್ಲಿ ವಿದೇಶಿ ಬೆಡಗಿ ಹಾಗೂ ಹಿಮಾಚಲ ಪ್ರದೇಶ ಹುಡುಗ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದಿದ್ದಾರೆ. ಜಾತಿ, ಧರ್ಮ, ಪ್ರದೇಶದ ಹಂಗಿಲ್ಲದೇ ಅವರಿಬ್ಬರು ಕೂಡಿ ಬಾಳುವ ಶಪಥ ಮಾಡಿದ್ದಾರೆ. ಹಿಮಾಚಲ ಪ್ರದೇಶದ ಸಂಜಾತ ಅವರು ಇಲ್ಲಿನ ರೆಸಾರ್ಟವೊಂದರಲ್ಲಿ ನೌಕರಿ…
ತಾಳಗುಪ್ಪಾ-ಶಿರಸಿ-ಹುಬ್ಬಳ್ಳಿ: ರೈಲ್ವೆ ವರದಿಗೆ ಖಾಸಗಿ ಕಂಪನಿಯ ಗುತ್ತಿಗೆ!
ತಾಳಗುಪ್ಪಾದಿಂದ ಶಿರಸಿ ಮಾರ್ಗವಾಗಿ ಹುಬ್ಬಳ್ಳಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆ ಕೇಂದ್ರ ಸರ್ಕಾರದ ಮುಂದಿದ್ದು, ಈ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಖಾಸಗಿ ಕಂಪನಿಗೆ ಸರ್ಕಾರ ಗುತ್ತಿಗೆವಹಿಸಿದೆ. ತಾಳಗುಪ್ಪ ಶಿರಸಿ ಹುಬ್ಬಳ್ಳಿ ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ ನಡೆಸುವಂತೆ ಗುತ್ತಿಗೆ…
ಸಾಲ ಕೊಡದ ಬ್ಯಾಂಕುಗಳಿಗೆ ತಪರಾಕಿ!
ಸರ್ಕಾರಿ ಯೋಜನೆ ಅನುಷ್ಠಾನಕ್ಕೆ ಸಾಲ ನೀಡದೇ ಸತಾಯಿಸುವ ಬ್ಯಾಂಕುಗಳ ವಿರುದ್ಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ್ ಕಾಂದೂ ಗರಂ ಆಗಿದ್ದಾರೆ. `ಪಿಎಂ ಸ್ವನಿಧಿ, ಪಿಎಂ ಉದ್ಯೋಗ ಸೃಜನಾ ಯೋಜನೆ, ಪಿಎಂಎಫ್‌ಎoಇ ಯೋಜನೆ ಅಡಿ ಅಗತ್ಯವಿದ್ದವರಿಗೆ ಸಾಲ ಕೊಡಿ’ ಎಂದು ಅವರು…
ಶಿರಸಿ ಶಾಸಕರ ವಿದೇಶಯಾನ: ಶಿವರಾಜಕುಮಾರ ಜೊತೆ ಮಾತುಕಥೆ!
ಶಿರಸಿ: ಶಾಸಕ ಭೀಮಣ್ಣ ನಾಯ್ಕ ಅವರು ವಿದೇಶ ಪ್ರವಾಸದಲ್ಲಿದ್ದು, ಅಮೇರಿಕಾದಲ್ಲಿ ಚಿತ್ರನಟ ಶಿವರಾಜಕುಮಾರ ಅವರನ್ನು ಭೇಟಿಯಾಗಿದ್ದಾರೆ. ಶಾಸಕರು ಮರಳುವವರೆಗೂ ಭೀಮಣ್ಣ ನಾಯ್ಕ ಅವರ ಪುತ್ರ ಅಶ್ವಿನ್ ನಾಯ್ಕ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದು, ಇಲ್ಲಿನ ಆಗು-ಹೋಗುಗಳ ಬಗ್ಗೆ ವಿದೇಶಕ್ಕೆ ವರದಿ ರವಾನಿಸುತ್ತಿದ್ದಾರೆ! ಶಾಸಕ ಭೀಮಣ್ಣ…
ಉತ್ತರ ಕನ್ನಡ | ಇಲ್ಲಿ ರೋಗಿಗಳಿದ್ದಾರೆ.. ವೈದ್ಯರೇ ಇಲ್ಲ!
ರೋಗಿ ಹಾಗೂ ವೈದ್ಯರ ನಡುವಿನ ಅಂಕಿ-ಸoಖ್ಯೆಗಳ ಬಗ್ಗೆ ಅಧ್ಯಯನ ನಡೆಸಿದಾಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಭವಿಷ್ಯದಲ್ಲಿ ವೈದ್ಯರ ಕೊರತೆ ಹೆಚ್ಚಾಗುವ ಸಾಧ್ಯತೆಗಳಿವೆ. `ಮುಂಬರುವ ವರ್ಷಳಲ್ಲಿ ಉತ್ತರಕನ್ನಡದ ವೈದ್ಯರು ಲಭ್ಯವಿರುವುದಿಲ್ಲ’ ಎಂದು ಸ್ವತಃ ವೈದ್ಯರಾಗಿರುವ ಡಾ ರವಿಕಿರಣ ಪಟವರ್ಧನ ಅವರು ಅಭಿಪ್ರಾಯಪಟ್ಟಿದ್ದಾರೆ. ಉತ್ತರ…
ನರಸಿಂಹ ಸ್ವಾಮಿ ದರ್ಶನ | ದ್ವೀಪದ ಜಾತ್ರೆಗೆ ಜನವೋ ಜನ!
ಕಾರವಾರ: ಅರಬ್ಬಿ ಸಮುದ್ರದ ನಡುವಿನ ದ್ವೀಪ ಕೂರ್ಮಗಡದಲ್ಲಿ ಸೋಮವಾರ ನಡೆದ ಜಾತ್ರೆಗೆ ದೇಶದ ನಾನಾ ಭಾಗದ ಭಕ್ತರು ಬಂದಿದ್ದು, ಇಡೀ ದಿನ ಮೀನುಹಾರರ ಆರಾಧ್ಯ ದೇವ ನರಸಿಂಹ ಸ್ವಾಮಿಯ ಆರಾಧನೆ ನಡೆಯಿತು. ಸಾವಿರಾರು ಸಂಖ್ಯೆಯ ಭಕ್ತರು ದೋಣಿಗಳ ಮೂಲಕ ದ್ವೀಪಕ್ಕೆ ತೆರಳಿ…







