ಆತ್ಮಹತ್ಯೆಗೆ ಶರಣಾದ ವ್ಯಸನಿ
ಕುಮಟಾ: ಬಗ್ಗೋಣದ ಗಣೇಶ ಜಟ್ಟಿ ಮುಕ್ರಿ (32) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಈಚೆಗೆ ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ. ಸದಾ ಸರಾಯಿ ಕುಡಿದು ನಶೆಯಲ್ಲಿರುತ್ತಿದ್ದರು. ನ 10ರಂದು ಮನೆಯಲ್ಲಿದ್ದ ಅವರು ಜಂತಿಗೆ ಸೀರೆಯಿಂದ ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾರೆ. ಗಣೇಶರ…
ಒಂದು ಗುಂಡು – ತಲೆ ಎರಡು ತುಂಡು | ಕರ್ತವ್ಯನಿರತ ಯೋಧ ಆತ್ಮಹತ್ಯೆ!
ಕಾರವಾರ: ಕೈಗಾ ಅಣು ವಿದ್ಯುತ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧರೊಬ್ಬರು ಸೋಮವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 28 ವಯಸ್ಸಿನ ಹರವಿಂದರ್ ಕುಮಾರ್ ರಾಮ್ ಭದ್ರತೆಗಾಗಿ ಮೀಸಲಿದ್ದ ಬಂದೂಕಿನಿoದ ತಲೆಗೆ ಗುಂಡು ಹಾರಿಸಿಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರವಿಂದರ್ ಕುಮಾರ್ ರಾಮ್ ಬಿಹಾರ ಮೂಲದವರು.…
ಕಿಡ್ನಿ ವೈಫಲ್ಯ: ನೋವುಂಡ ವ್ಯಕ್ತಿ ಆತ್ಮಹತ್ಯೆ
ಮುಂಡಗೋಡು: ಕಿಡ್ನಿ ವೈಪಲ್ಯ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ನಾಗಯ್ಯ ಈಳೆಗೇರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದೂರಿನ ನಾಗಯ್ಯ ಫಕೀರಯ್ಯ ಇಳಿಗೇರ್ (54) ವಿಪರೀತ ಸರಾಯಿ ಕುಡಿಯುತ್ತಿದ್ದರು. ಇದರ ಪರಿಣಾಮ ಅವರ ಕಿಡ್ನಿ ಹಾಳಾಗಿತ್ತು. ಈಚೆಗೆ ಹೊಟ್ಟೆನೋವಿನಿಂದಲೂ ಅವರು ಬಳಲುತ್ತಿದ್ದರು. ಈ ನೋವು…
ದನಕ್ಕೆ ಗುದ್ದಿದ ಬೈಕು: ಇಬ್ಬರಿಗೆ ಗಾಯ
ಹೊನ್ನಾವರ: ಮುರುಡೇಶ್ವರದಿಂದ ಹೊನ್ನಾವರ ಕಡೆ ಚಲಿಸುತ್ತಿದ್ದ ಬೈಕಿಗೆ ದನ ಡಿಕ್ಕಿಯಾಗಿದ್ದು, ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ನ 10ರ ಸಂಜೆ 6.30ಕ್ಕೆ ಬಂದರ್ ರೋಡಿನ ಫೈಜಲ್ ರೆಹಮಾನ್ ಶೇಖ್ ಎಂಬಾತರು ಶೇಖ್ ಹೈದರ್ ಮಹಮದ್ ರಫಿಕ್ ಎಂಬಾತರನ್ನು ಬೈಕಿನಲ್ಲಿ ಕೂರಿಸಿಕೊಂಡು ಹೊರಟಿದ್ದರು. ಹೆದ್ದಾರಿಯಲ್ಲಿ…
ಪ ಪಂ ಉಪಚುನಾವಣೆಗೆ ಜೆಸಿಬಿ ಆಪರೇಟರ್!
ಯಲ್ಲಾಪುರ: ಗೋಸಾವಿ ಗಲ್ಲಿಯನ್ನು ಪ್ರತಿನಿಧಿಸಿ ಪಟ್ಟಣ ಪಂಚಾಯತ ಸದಸ್ಯರಾಗುವ ಉದ್ದೇಶದಿಂದ ಪ್ರಕಾಶ ಗೋಸಾವಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಅವರು ಗ್ರಾಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ತಮ್ಮ ಉಮೇದುದಾರಿಕೆ ಸಲ್ಲಿಸಿದರು. ಕನ್ನಡ ಸಂಘಟನೆಯ ಮೂಲಕ ಹೋರಾಟದ ಬದುಕು…
ಮಲೆನಾಡಿನ ಅರಣ್ಯ ವಕ್ಟ್ ಆಸ್ತಿಯಾಗಿದ್ದು ಹೇಗೆ?
ಶಿರಸಿ: ಅರಣ್ಯದಂತಿರುವ ಪ್ರದೇಶ ವಕ್ಟ್ ಆಸ್ತಿಯಾಗಿ ಪರಿವರ್ತನೆಯಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದಾಖಲೆಗಳು ಹರಿದಾಡುತ್ತಿವೆ. ಕಳೆದ ಎರಡು ದಿನಗಳಿಂದ ಶಿರಸಿಯ ಅರಣ್ಯ ಜಾಗ ವಕ್ಟ್ ಆಸ್ತಿ ಎಂದು ನಮೂದಾದ ಪಹಣಿ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ. ಇದಕ್ಕೆ ಒಬ್ಬೊಬ್ಬರು ಒಂದೊoದು…
ಮನೆ ಮುರಿದ ಕಳ್ಳರಿಗೆ ಜೈಲು | ಎಗ್‌ರೈಸ್ ಅರ್ಜುನನಿಗೆ ಸಿಕ್ಕಿದ ನ್ಯಾಯ
ಮುಂಡಗೋಡು: ಎಗ್‌ರೈಸ್ ವ್ಯಾಪಾರಿ ಅರ್ಜುನ್ ಸಿಂಗ್ ಮನೆಯಲ್ಲಿ ಕಳ್ಳತನ ಮಾಡಿದವರನ್ನು ಪೊಲೀಸರು ಹಿಡಿದಿದ್ದಾರೆ. ಅಕ್ಟೊಬರ್ 28ರಂದು ಭಾರತನಗರದ ಅರ್ಜುನ್ ಸಿಂಗ್ ಠಾಕೂರ್ ಅವರ ಮನೆಯಲ್ಲಿ 50 ಸಾವಿರ ರೂ ಹಣದ ಜೊತೆ ಚಿನ್ನಾಭರಣವನ್ನು ಕಳ್ಳರು ದೋಚಿದ್ದರು. ತನಿಖೆ ನಡೆಸಿದ ಪೊಲೀಸರು ಸುಭಾಸನಗರದ…
ರೈತರ ಬಾಯಿಗೆ ಸಕ್ಕರೆ: ಕಬ್ಬು ಬೆಳೆಗಾರರಿಗೆ ಖುಷಿ ಸುದ್ದಿ ಕೊಟ್ಟ ಜಿಲ್ಲಾಧಿಕಾರಿ!
ಹಳಿಯಾಳ: ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಇಬ್ಬರಿಗೂ ಅನ್ಯಾಯವಾಗದಂತೆ ಸಮತೋಲನದ ನಿರ್ಣಯ ಕೈಗೊಂಡಿದ್ದಾರೆ. 2023-24ರ ಅವಧಿಯಲ್ಲಿ ಪ್ರತಿ ಟನ್ ಕಬ್ಬಿಗೆ ರೈತರಿಗೆ 3678ರೂ ನೀಡಬೇಕು ಎಂದು ಸರ್ಕಾರ ಸೂಚಿಸಿತ್ತು. ಕಾರ್ಖಾನೆಯವರು ಕಟಾವು ಹಾಗೂ…
ಪೊಲೀಸ್ ಅಧೀಕ್ಷಕರಿಂದಲೂ ಸತ್ಯ ಶೋಧನೆ: ಅದು ಕಳ್ಳ ಪಕ್ಷಿ ಅಲ್ಲ.. ಒಳ್ಳೆಯ ಹಕ್ಕಿ!
ಕಾರವಾರ: `ಮಹಾರಾಷ್ಟ್ರದ ಅರಣ್ಯ ಇಲಾಖೆಯವರು ಅಧ್ಯಯನಕ್ಕಾಗಿ ರಣಹದ್ದಿನ ಮೇಲೆ ಜಿಪಿಎಸ್ ಹಾಗೂ ಸೋಲಾರ್ ಪ್ಲೇಟ್ ಅಳವಡಿಸಿದ್ದು, ಜನ ಆತಂಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹೇಳಿದ್ದಾರೆ. ನಗರದ ಹಲವು ಭಾಗದಲ್ಲಿ ಕಾಣಿಸಿಕೊಂಡಿರುವ ರಣಹದ್ದು ಕಾಣಿಸಿಕೊಂಡಿದ್ದು, ವಿವಿಧ ಸಾಮಾಜಿಕ…
ಸಾವಿಗೂ ಮುನ್ನ ಸತ್ಯ ಹೇಳಿದ ವೃದ್ಧೆ: ಎರಡುವರೆ ಸಾವಿರದ ಆಸೆಗೆ ಕೊಲೆ!
ಹೊನ್ನಾವರ: ಹತ್ತು ವರ್ಷದ ಹಿಂದೆ ಪಾರ್ಶವಾಯುವಿಗೆ ಒಳಗಾಗಿದ್ದ 74ರ ವೃದ್ಧೆಯನ್ನು 2500ರೂ ಹಣದ ಆಸೆಗೆ ನೆರೆಮನೆಯಾತ ಕೊಲೆಗೆ ಪ್ರಯತ್ನಿಸಿದ್ದು, ಸಾಯುವ ಮುನ್ನ ವೈದ್ಯರಲ್ಲಿ ಈ ವಿಷಯ ಹೇಳಿ ಕಾಶಿ ತಾಂಡೇಲ್ ಸಾವನಪ್ಪಿದ್ದಾರೆ! ಹೊನ್ನಾವರದ ಕಾಸರಕೋಡಿನ ಶಂಕರ್ ಮಾದೇವ ತಾಂಡೇಲ್ (42) ತಮ್ಮ…








