ಡಿ 16ಕ್ಕೆ ರಾಜ್ಯಮಟ್ಟದ ಕಬ್ಬಡ್ಡಿ ಸ್ಪರ್ಧೆ: ಎರಡು ದಿನದ ಜಟಾಪಟಿಗೆ ಸಿದ್ದಗೊಂಡ ಅಖಾಡ!
ಯಲ್ಲಾಪುರ: ಕಿರವತ್ತಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಬ್ಬಡ್ಡಿ ಸ್ಪರ್ಧೆಗೆ ಎಲ್ಲಾ ಬಗೆಯ ತಯಾರಿ ನಡೆಯುತ್ತಿದೆ. ಡಿಸೆಂಬರ್ 16 ಹಾಗೂ 17ರಂದು ರಾಜ್ಯ ದನಗರ ಗೌಳಿ ಪ್ರೋ ಕಬಡ್ಡಿ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ಸ್ಪರ್ಧಾಳುಗಳು ಕಬ್ಬಡಿ ಆಡಲು ಆಗಮಿಸಲಿದ್ದಾರೆ. ಈಗಾಗಲೇ ಸ್ಪರ್ಧಾಳುಗಳ…
ಗುಡುಗು-ಮಳೆ: ಕಪ್ಪುಮಶಿ ಕೆಂಡವಾದ ನಾಯ್ಕರ ಮನೆ ಟಿವಿ!
ಸಿದ್ದಾಪುರ: ಗುರುವಾರ ಸಂಜೆಯಿoದ ಜಿಲ್ಲೆಯ ವಿವಿಧ ಕಡೆ ಗುಡುಗು-ಮಳೆ ಶುರುವಾಗಿದೆ. ಸಿದ್ದಾಪುರ ತಾಲೂಕಿನ ಬೇಡ್ಕಣಿಯಲ್ಲಿ ಸಿಡಿಲು ಬಡಿದಿದೆ. ಪರಿಣಾಮ ದಯಾನಂದ ನಾಯ್ಕ ಅವರ ಮನೆಯಲ್ಲಿದ್ದ ವಿವಿಧ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಸಂಜೆ ವೇಳೆ ಮನೆ ಮೇಲೆ ಸಿಡಿಲು ಬಡಿದಿದ್ದು, ಮನೆ ಒಳಭಾಗದಲ್ಲಿಯೂ…
ಮಹಾದ್ವಾರ ನಿರ್ಮಾಣದ ವೇಳೆ ಅವಘಡ: ವಿದ್ಯುತ್ ಸ್ಪರ್ಶದಿಂದ ಆಘಾತಕ್ಕೆ ಒಳಗಾದ ಶಿಲ್ಪಿ!
ಮುಂಡಗೋಡ: ಭದ್ರಾಪುರ ಗ್ರಾಮದ ಕೊಡಂಬಿ ಕ್ರಾಸಿನಲ್ಲಿ ಮಹಾದ್ವಾರ ಕಟ್ಟುವ ವೇಳೆ ಅವಘಡ ನಡೆದಿದೆ. ಮಹಾದ್ವಾರ ನಿರ್ಮಿಸುತ್ತಿದ್ದ ಶಿಲ್ಪಿ ಹಾಗೂ ಕೆಲಸಗಾರರು ವಿದ್ಯುತ್ ಶಾಕ್ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾವಣಗೆರೆಯ ಬಸವರಾಜ ನಾಗರಾಜಪ್ಪ ಎಂಬಾತರು ಇಲ್ಲಿ ಮಹಾದ್ವಾರ ನಿರ್ಮಿಸುವ ಗುತ್ತಿಗೆ ಪಡೆದಿದ್ದರು. ಅವರು…
ಅಘನಾಶಿನಿ ಒಡಲು ಸೇರಿದ ಗೋದಾವರಿ ತ್ಯಾಜ್ಯ!
ಕುಮಟಾ: ಅಘನಾಶಿನಿ ನದಿಗೆ ಅಡ್ಡಲಾಗಿ ಗೋಕರ್ಣದ ಸಾಣೆಕಟ್ಟಾ ಬಳಿ ನಿರ್ಮಿಸುವ ಉಪ್ಪಿನ ಆಗರದ ಬಳಿ ಗೋದಾವರಿ ಹೊಟೇಲ್ ತ್ಯಾಜ್ಯ ಸುರಿಯುತ್ತಿರುವುದನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ. ಮಂಗಳವಾರ ರಾತ್ರಿ ಗೋದಾವರಿ ಎಂಬ ಟ್ಯಾಂಕರ್ ಮೂಲಕ ಹೊಸಲು ನೀರು ತಂದು ಉಪ್ಪಿನ ಆಗರದ ಬಳಿ…
ಬ್ಯಾಂಕಿಗೆ ಬರುವವನಿಗೆ ಗುದ್ದಿದ ಬೈಕ್ ಸವಾರ: ಆಂಬುಲೆನ್ಸ್ ಸೇವೆ ನೀಡಿದ ರಿಕ್ಷಾ ಚಾಲಕ!
ಅಂಕೋಲಾ: ಬ್ಯಾಂಕ್ ಕೆಲಸಕ್ಕೆ ಬಂದಿದ್ದ ದಯಾನಂದ ನಾಯಕ (40) ಅವರಿಗೆ ಬೈಕಿಗೆ ಇನ್ನೊಂದು ಬೈಕ್ ಗುದ್ದಿ ಪರಾರಿಯಾಗಿದೆ. ರಸ್ತೆ ನಡುವೆ ಬಿದ್ದು ಹೊರಳಾಡುತ್ತಿದ್ದ ದಯಾನಂದ ನಾಯಕ ಅವರನ್ನು ಹುಲಿ ದೇವರವಾಡದ ವಿಷ್ಣು ನಾಯ್ಕ ತಮ್ಮ ರಿಕ್ಷಾದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗುರುವಾರ ಆಂದ್ಲೆಯ…
ಪ್ರವಾಸೋದ್ಯಮದ ಹಣ ಗ್ರಾಮ ಪಂಚಾಯತ ಮಡಿಲಿಗೆ: ಆಯೋಗದ ಸೂಚನೆಗೆ ಬರುವುದೇ ಬೆಲೆ?
ಕಾರವಾರ: `ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣಗಳಿಂದ ಸಂಗ್ರಹವಾಗುವ ಆದಾಯದಲ್ಲಿ ಪಂಚಾಯತಿಗಳಿಗೆ ಯಾವುದೇ ರೀತಿಯ ಪಾಲು ಸಿಗುತ್ತಿಲ್ಲ’ ಎಂಬ ವಿಷಯ ಐದನೇ ಹಣಕಾಸು ಆಯೋಗದ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ. ಗುರುವಾರ ಜಿ ಪಂ ಸಭಾ ಭವನದಲ್ಲಿ ಹಣಕಾಸು ಆಯೋಗದ…
ಪುಠಾಣಿ ಮೇಲೆ ಬಿದ್ದ ನೆರೆಮನೆ ಗೇಟು: ಸಾವು
ಅಂಕೋಲಾ: ಕನಸಗದ್ದೆ ಸಮೀಪದ ಮುಲ್ಲಾ ವಾಡದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಬುಧವಾರ ಪಕ್ಕದಮನೆಯ ಗೇಟ್ ಕಳಚಿ ಬಿದ್ದಿದೆ. ಗಾಯಗೊಂಡ ಅಜಾಮ ಜಾವೇದ್ ಶೇಖ್ (6) ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನಪ್ಪಿದರು. ಡಿ 4ರ ಸಂe ಮನೆ ಅಂಗಳದ ಎದುರಿನಲ್ಲಿ ಅಜಾಮ್ ಆಟ…
ಮರದಡಿ ನಿಂತ ಕಾರಿಗೆ ಬೆಂಕಿ!
ಕಾರವಾರ: ಮರದ ನೆರಳಿನಲ್ಲಿ ನಿಂತಿದ್ದ ಕಾರಿಗೆ ಹಠಾತ್ ಬೆಂಕಿ ತಾಗಿದ್ದು, ಕಾರು ಹೊತ್ತಿ ಉರಿದಿದೆ. ವಿಲಾಸ್ ಅಣ್ವೇಕರ್ ಅವರು ಪೊಲೀಸ್ ಕ್ವಾಟರ್ಸ ಬಳಿ ಕಾರು ನಿಲ್ಲಿಸಿದ್ದರು. ಮರದ ನೆರಳಿನಲ್ಲಿ ತುಂಪು ಕಂಡ ಕಾರಣ ಅಲ್ಲಿಯೇ ಕಾರು ಬಿಟ್ಟಿದ್ದರು. ಗುರುವಾರ ದಿಢೀರ್ ಆಗಿ…
ಶಿರೂರು ವರದಿಯೂ ಇಲ್ಲ.. ಭೂ ಕಂಪನದ ಕಾರಣವೂ ಗೊತ್ತಾಗಿಲ್ಲ!
ಶಿರೂರು ಗುಡ್ಡ ಕುಸಿತದ ಕಾರ್ಯಾಚರಣೆಯಲ್ಲಿ ಸಿಕ್ಕದ ಮೂಳೆ ಯಾರದು? ಎಂಬ ಬಗ್ಗೆ ಈವರೆಗೂ ಉತ್ತರ ಬಂದಿಲ್ಲ. ಡಿಎನ್ಎ ಪರೀಕ್ಷೆಗೆ ಹೋದ ಮೂಳೆ ವರದಿ ಜಿಲ್ಲಾಡಳಿತಕ್ಕೆ ಸಿಕ್ಕಿಲ್ಲ. ಪ್ರಸ್ತುತ ಕಳೆದ ಭಾನುವಾರ ನಡೆದ ಭೂ ಕಂಪನಕ್ಕೆ ಕಾರಣ ಕುರಿತಾದ ವರದಿ ಸಹ ಇನ್ನೂ…
ರೆಸಾರ್ಟ ನಿರ್ಮಾಣದ ಆಸೆ: ಭೂ ಕುಸಿತದ ಆತಂಕ!
ಕುಮಟಾ: ಗೋಕರ್ಣದ ಓಂ ಕಡಲತೀರಕ್ಕೆ ಸಾಗುವ ಕುಡ್ಲೆ ಕಡಲತೀರ ಮಾರ್ಗದ ಅಂಚಿನಲ್ಲಿ ಭೂ ಕುಸಿತ ಉಂಟಾಗಿದೆ. ರಸ್ತೆ ಸಹ ಕುಸಿತಕ್ಕೆ ಒಳಗಾಗುವ ಸಾಧ್ಯತೆಗಳಿದೆ. ರೆಸಾರ್ಟ ನಿರ್ಮಾಣಕ್ಕಾಗಿ ಅವೈಜ್ಞಾನಿಕ ರೀತಿ ಗುಡ್ಡ ಕೊರೆದಿರುವುದೇ ಈ ಕುಸಿತಕ್ಕೆ ಕಾರಣ. ರಸ್ತೆ ಅಂಚಿನಲ್ಲಿಯೇ ಈ ಕುಸಿತ…







