ಸಾವಿರ ಸಾವಿರ ಪುಸ್ತಕಗಳ ಸರದಾರ: ಭಗವದ್ಗೀತೆ ಸಂದೇಶ ಸಾರುವ ಗುತ್ತಿಗೆದಾರ!
ಕಳೆದ 10 ವರ್ಷಗಳಿಂದ ಅಕ್ಷರ ಅಭಿಯಾನ ನಡೆಸುತ್ತಿರುವ ಶಿವಲಿಂಗಯ್ಯ ಅಲ್ಲಯ್ಯನವರಮಠ ಅವರು ಈವರೆಗೆ 50 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಓದುಗರಿಗೆ ಹಂಚಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ 38 ಸಾವಿರದಷ್ಟು ಭಗವದ್ಗೀತೆಯ ಪುಸ್ತಕವನ್ನು ಅವರು ಓದುಗರಿಗೆ ಉಚಿತವಾಗಿ ವಿತರಿಸಿದ್ದಾರೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿ ಸಹ…
ಆತ ವಿದ್ಯಾವಂತ.. ಪ್ರತಿಭಾವಂತ.. ವಿದೇಶಿ ಉದ್ಯೋಗಿ ಬೇರೆ.. ಆದರೆ, ಇದೀಗ ಅನಾಥ!
ಶಿರಸಿ: ಅಮೇರಿಕಾ, ಜರ್ಮನಿ ಸೇರಿ ವಿವಿಧ ದೇಶಗಳಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಶಿರಸಿ ಮೂಲದ ರಮೇಶ್ ಪಾಡುರಂಗ ಪಾವಸ್ವರ (65) ಇದೀಗ ಅನಾಥರಾಗಿದ್ದಾರೆ. ರಮೇಶ ಪಾವಸ್ವರ್ ಅವರ ಸಹೋದರಿ ಖ್ಯಾತ ವೈದ್ಯರು. ಅವರ ಮಗ ಸಹ ಮುಂಬೈಯಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ.…
ಕರೆಯದಿದ್ದರೂ ವೇದಿಕೆ ಏರಿದವರಿಗೆ ಮುಜುಗರ!
ಯಲ್ಲಾಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರೆಯದಿದ್ದರೂ ವೇದಿಕೆ ಏರಿದ ಇಬ್ಬರು ಗಣ್ಯರು ಮುಜುಗರ ಅನುಭವಿಸಿದರು. ಶಾಸಕ ಶಿವರಾಮ ಹೆಬ್ಬಾರ್ ಈ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದು, ನಿರ್ವಹಣೆ ಮಾಡುತ್ತಿದ್ದ ನಂದಿತಾ ಭಾಗ್ವತ್ ಅವರು…
ಯಕ್ಷಶ್ರೀ: ಯಕ್ಷರಂಗದ ಮಾಗಧ ಈ ಸುಬ್ರಾಯ ಹೆಗಡೆರು!
ಕಲೆ, ಸಾಹಿತ್ಯ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಯಲ್ಲಾಪುರದ ಕಳಚೆ ಊರಿನ ಸುಬ್ರಾಯ ಹೆಗಡೆ ಅವರು ಆಕರ್ಷಕ ಮುಖವರ್ಣಿಕೆ, ಹಿತಮಿತವಾದ ಮಾತಿನ ಮೂಲಕ ಯಕ್ಷಗಾನ ನೋಡುಗರ ಮನಗೆದ್ದಿದ್ದಾರೆ. ಹಿರಿಯ ಕಲಾವಿದರಾದ ಸೂತ್ರೆ ಅನಂತ ಭಟ್ರು, ಕೊಣೆಮನೆ ಮಹಾಬಲೇಶ್ವರ ಭಟ್ರು, ಗ ರಾ…
ಮೀನುಗಾರನ ಮೇಲೆ ಹಲ್ಲೆ
ಭಟ್ಕಳ: ಮೀನುಗಾರ ಮಂಜುನಾಥ ನಾಗಪ್ಪ ನಾಯ್ಕ ಎಂಬಾತರ ಮೇಲೆ ಮುಂಡಳ್ಳಿಯ ಮಾರುತಿ ಮೊಗೇರ ಎಂಬಾತ ಹಲ್ಲೆ ಮಾಡಿದ್ದು, ಪೊಲೀಸ್ ದೂರು ದಾಖಲಾಗಿದೆ. ಅಕ್ಟೊಬರ್ 11ರ ನಸುಕಿನಲ್ಲಿ ಮಂಜುನಾಥ ನಾಯ್ಕರು ಮೀನುಗಾರಿಕೆಗೆ ಹೊರಟಿದ್ದರು. ಅಳ್ವೆಕೊಡಿ ಬಂದರಿಗೆ ಅವರು ಹೋಗುತ್ತಿರುವಾಗ ಕನ್ನಡಶಾಲೆಯ ಬಳಿ ಮಾರುತಿ…
ನವ ವಿವಾಹಿತೆಯ ಬದುಕು ಕಿತ್ತುಕೊಂಡ ಬ್ರೇನ್ ಟ್ಯೂಮರ್
ಅಂಕೋಲಾ: ಬಹ್ಮೂರಿನ ಶಾಂತಲಾ ಗುರುಮೂರ್ತಿ ಹೆಗಡೆ (28) ಬ್ರೇನ್ ಟ್ಯೂಮರಿನಿಂದ ಶುಕ್ರವಾರ ಸಾವನಪ್ಪಿದ್ದಾರೆ. ಎರಡು ವರ್ಷದ ಹಿಂದೆ ಶಾಂತಲಾ ಅವರು ಬ್ರಹ್ಮೂರಿನ ಗುರುಮೂರ್ತಿ ಹೆಗಡೆ ಅವರನ್ನು ಮದುವೆ ಆಗಿದ್ದರು. ಕಳೆದ 2-3 ತಿಂಗಳಿನಿoದ ಅನಾರೋಗ್ಯಕ್ಕೆ ಒಳಗಾದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅಕ್ಟೊಬರ್…
ಈ ಊರಿಗೆ ಸೇತುವೆ ಇದ್ದರೂ ರಸ್ತೆ ಇಲ್ಲ: ಕಾಳಿ ನದಿಯಲ್ಲಿ ಶವ ಸಾಗಿಸಿ ಅಂತ್ಯ ಸಂಸ್ಕಾರ!
ಕಾರವಾರ: ಉಮಳೆಜೂಗ ದ್ವೀಪದ ಜನರಿಗೆ ಸರ್ಕಾರ ಸೇತುವೆ ನಿರ್ಮಿಸಿದೆ. ಆದರೆ, ಖಾಸಗಿಯವರ ಅಡ್ಡಗಾಲಿನಿಂದ ಆ ಊರಿಗೆ ರಸ್ತೆ ನಿರ್ಮಾಣವಾಗಿಲ್ಲ. ಹೀಗಾಗಿ ದ್ವೀಪದ ಜನ ನಿತ್ಯ ಪರದಾಡುತ್ತಿದ್ದು, ಗುರುವಾರ ದೋಣಿ ಮೂಲಕ ಸ್ಮಶಾನಕ್ಕೆ ಶವ ಸಾಗಿಸಿದರು! 45 ಎಕರೆ ಪ್ರದೇಶದ ಉಮಳೆಜೂಗದಲ್ಲಿ 30ಕ್ಕೂ…
ಬೈಕಿಗೆ ಗುದ್ದಿದ ಟಾಟಾಎಸ್: ಸವಾರ ಸಾವು
ಶಿರಸಿ: ಮುಂಡಗೋಡು – ಶಿರಸಿ ರಸ್ತೆ ನಡುವೆ ನಡೆದ ಅಪಘಾತದಲ್ಲಿ ಬಿಸಿಲಕೊಪ್ಪದ ಉಂಡಾಡಿಕಟ್ಟೆ ಬಳಿಯ ರವಿ ಭಟ್ಟ ಎಂಬಾತರು ಸಾವನಪ್ಪಿದ್ದಾರೆ. ಶುಕ್ರವಾರ ಬೆಳಗ್ಗೆ ಮುಂಡಗೋಡಿನಿ0ದ ಶಿರಸಿ ಮಾರ್ಗವಾಗಿ ಬೈಕಿನಲ್ಲಿ ಸಂಚರಿಸುತ್ತಿದ್ದ ರವಿ ಅವರಿಗೆ ಮಾವಿನಕೊಪ್ಪಾ ಬಳಿ ಎದುರಿನಿಂದ ಬಂದ ಟಾಟಾಎಸ್ ವಾಹನ…
ಅಪರಿಚಿತ ಶವದ ಮೇಲೆ ಹಲವು ಅನುಮಾನ: ಸಾಕ್ಷಿದಾರನ ಮೇಲೆ ಸುಳ್ಳು ದೂರಿನ ಆರೋಪ
ಕುಮಟಾ: `ಎರಡು ವರ್ಷದ ಹಿಂದೆ ಯಾಣದಲ್ಲಿ ಅಪರಿಚಿತ ಶವ ದೊರೆತಿದ್ದು, ಆ ಪ್ರಕರಣವನ್ನು ಎಲ್ಲರೂ ನಿರ್ಲಕ್ಷಿಸಿದ್ದಾರೆ. ಅಪರಿಚಿತ ಶವ ಪ್ರಕರಣ ತನಿಖೆ ನಡೆದಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ಸಿಕ್ಕಿ ಬೀಳಲಿದ್ದಾರೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಅಧ್ಯಕ್ಷ ನಾಗರಾಜ ಶೇಟ್…
ಭಕ್ತಿ ಸಂಗೀತ: ಗೆಜ್ಜೆ ಸದ್ದಿನಲ್ಲಿ ಹೆಜ್ಜೆ ಹಾಕಿದ ಶಾಸಕ!
ಹಳಿಯಾಳ: ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ತಮ್ಮ 77 ವರ್ಷದ ವಯಸ್ಸು ಮರೆತು ಕುಣಿದು ಕುಪ್ಪಳಿಸಿದರು. ಕೈಯಲ್ಲಿ ಎರಡು ಕೋಲು ಹಿಡಿದು ಅವರು ಕೋಲಾಟ ನಡೆಸಿದರು. ಗುರುವಾರ ರಾತ್ರಿ ಆರಾಧ್ಯದೈವ ತುಳಿಜಾಭವಾನಿ ದರ್ಶನ ಪಡೆದ ಅವರು ಗಂಟೆಗಳ…








