6
ಅಂದರ್ ಬಾಹರ್ | ಓಡಿ ಹೋದವರು ಐದು ಜನ.. ಸಿಕ್ಕಿ ಬಿದ್ದವರು ಮೂರೇ ಜನ!

ರಸ್ತೆ ಪಕ್ಕ ಕುಳಿತು ಅಂದರ್ ಬಾಹರ್ ಆಡುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರನ್ನು ನೋಡಿದ ಉಳಿದ ನಾಲ್ವರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಜನವರಿ 19ರ ಸಂಜೆ ಮುಂಡಗೋಡಿನ ಪಿಎಸ್‌ಐ ಪರಶುರಾಮ ಮಿರ್ಚಗಿ ಅವರಿಗೆ ಇಸ್ಪೀಟ್ ಆಡುತ್ತಿದ್ದವರ ವಿರುದ್ಧ ದೂರು ಬಂದಿತ್ತು.…

ಶಿವಯೋಗಿ ಸಿದ್ದರಾಮೇಶ್ವರ ಸ್ಮರಣೆ: ಸರಿಯಾಗಿ ನಡೆದ ಸರ್ಕಾರಿ ಕಾರ್ಯಕ್ರಮ!

ಸರ್ಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ `ಶಿವಯೋಗಿ ಸಿದ್ದರಾಮೇಶ್ವರ ಜಯಂತಿ’ಯನ್ನು ಬೋವಿ ಮುಖಂಡರು ಪಟ್ಟು ಹಿಡಿದು ಗ್ರಾಮೀಣ ಭಾಗದಲ್ಲಿ ಆಚರಣೆ ಮಾಡಿದ್ದಾರೆ. ನೂರಾರು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸವನ್ನು ಆಹ್ವಾದಿಸಿದ್ದಾರೆ. ಆ ಮೂಲಕ ಶಿವಯೋಗಿ ಸಿದ್ದರಾಮೇಶ್ವರ ಅವರ ತತ್ವ-ಸಿದ್ದಾಂತಗಳ ಪ್ರಚಾರ ನಡೆದಿದೆ.…

ಗ್ರೀನ್‌ಕಾರ್ಡ ಹೊಂದಿದವರ ತಂಟೆಗೆ ಬಂದರೆ ಹುಷಾರ್!

ಅರಣ್ಯ ಹಕ್ಕು ಹೋರಾಟದಲ್ಲಿ ಸಕ್ರೀಯರಾಗಿರುವವರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ `ಗ್ರೀನ್ ಕಾರ್ಡ’ ಗುರುತಿನ ಚೀಟಿ ಕೊಡುತ್ತಿದೆ. ಗ್ರೀನ್ ಕಾರ್ಡ ಹೊಂದಿದ ಸದಸ್ಯರಿಗೆ ಕಾನೂನು ತರಬೇತಿಯನ್ನು ನೀಡಲಾಗುತ್ತಿದ್ದು, ಅರಣ್ಯ ಸಿಬ್ಬಂದಿ ದೌರ್ಜನ್ಯದ ವಿರುದ್ಧ ಅವರೆಲ್ಲರೂ ಕಾನೂನಾತ್ಮಕ ಹೋರಾಟ ನಡೆಸಲು ಸಿದ್ಧರಾಗಿದ್ದಾರೆ!…

ಬೆಳೆ ವಿಮೆ | ಇನ್ನೂ ಎರಡು ವಾರದೊಳಗೆ ಅಡಿಕೆ ಖಾತೆಗೆ ಹಣ!

ಅತಿವೃಷ್ಠಿಯಿಂದ ಅಡಿಕೆ ಬೆಳೆಗಾರರುತತ್ತರಿಸಿದರೂ ಈವರೆಗೂ ವಿಮಾ ಪರಿಹಾರ ಜಮಾ ಆಗಿಲ್ಲ. ಈ ಹಿನ್ನಲೆ ಜಿಲ್ಲೆಯ ಹಲವು ಕಡೆ ಪ್ರತಿಭಟನೆಗಳು ನಡೆದಿವೆ. ಅದರ ಬೆನ್ನಲ್ಲೆ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಶಿವರಾಮ ಹೆಬ್ಬಾರ್ `ಇನ್ನೂ 15 ದಿನದ ಒಳಗೆ ರೈತರ ಖಾತೆಗೆ ಬೆಳೆ…

ಜಾತ್ರೆಗೆ ಮುಗಿಸಿ ಮರಳುತ್ತಿದ್ದವರಿಗೆ ಕಾರು ಡಿಕ್ಕಿ: ಯುವತಿ ಸಾವು

ಜಾತ್ರೆ ಮುಗಿಸಿ ಬರುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕಿನಲ್ಲಿ ಹಿಂದೆ ಕೂತಿದ್ದ ಪೂಜಾ ಗೌಡ ಸಾವನಪ್ಪಿದ್ದಾರೆ. ಹೊನ್ನಾವರ ಅಪ್ಪಿಕೇರಿಯ ಪೂಜಾ ಗೌಡ ಹಾಗೂ ಸುರೇಶ ಗೌಡ ಭಾನುವಾರ ಮುರುಡೇಶ್ವರದ ಜಾತ್ರೆಗೆ ಹೋಗಿದ್ದರು. ಸೋಮವಾರ ಅವರು ಮರಳಿ ಊರ ಕಡೆ ಹೊರಟಿದ್ದರು.…

ಹೊಸ ಮನೆ.. ಹೊಸ ಮಳಿಗೆ: ಅದಾಗಿಯೂ ನೆಮ್ಮದಿಯಿಲ್ಲದೇ ಸಾವನಪ್ಪಿದ ಅಕ್ಕಸಾಲಿಗ!

ಹೊಸ ಮನೆ ನಿರ್ಮಾಣ ಸಾಹಸಕ್ಕೆ ಕೈ ಹಾಕಿದ್ದ ಅರುಣ ಶೇಟ್ ಅದೇ ಮನೆ ಮುಂದಿನ ಹೊಸ ಮಳಿಗೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಟ್ಕಳ ವಿಟಿ ರೋಡಿನ ಸೋನಾರಕೇರಿಯಲ್ಲಿ ಅರುಣ ಶೇಟ್ ವಾಸವಾಗಿದ್ದರು. ಚಿನ್ನದ ಕೆಲಸ ಮಾಡುತ್ತಿದ್ದ ಅವರು ಅಕ್ಕಸಾಲಿಗ ವೃತ್ತಿಯಿಂದ ಬೆಳೆದಿದ್ದರು. ಈಚೆಗೆ…

ಗುತ್ತಿಗೆದಾರನ ಕೋಣ ಕೊಂದ ಉದಯ ಸಿದ್ದಿ!

ಸಿವಿಲ್ ಗುತ್ತಿಗೆದಾರ ಅಬ್ದುಲ್ ರಹಮಾನ್ ಸಾಕಿದ್ದ ಕೋಣ ಸಾವನಪ್ಪಿದೆ. ಆಳ್ವೇಸರದ ಉದಯ ಸಿದ್ದಿ ತಮ್ಮ ಬೈಕ್ ಗುದ್ದಿ ಕೋಣದ ಸಾವಿಗೆ ಕಾರಣರಾಗಿದ್ದಾರೆ! ಯಲ್ಲಾಪುರದ ಮಂಚಿಕೇರಿ ಚರ್ಚ ರಸ್ತೆಯ ಅಬ್ದುಲ್ ರೆಹಮಾನ್ ಕೋಣವನ್ನು ಸಾಕಿದ್ದರು. ಎರಡು ವರ್ಷ ಪ್ರಾಯದ ಕೋಣ ದಷ್ಟಪುಷ್ಟವಾಗಿ ಬೆಳೆದಿತ್ತು.…

ನಿನ್ನೆ ಪ್ರಶಸ್ತಿ.. ಇಂದು ಪರಲೋಕವಾಸಿ!

ಅಪಘಾತರಹಿತ ಚಾಲನೆ, ಉತ್ತಮ ನಡವಳಿಕೆ ಹಾಗೂ ಸರ್ಕಾರಿ ಸಾರಿಗೆ ಸಂಸ್ಥೆಯ ಆದಾಯ ಹೆಚ್ಚಿಸಿದ ಕಾರಣ ಭಾನುವಾರ ಪ್ರಶಸ್ತಿ ಪಡೆದಿದ್ದ ಎಸ್ ಎನ್ ಶೇಖ್ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ! ಜಮಖಂಡಿ ಮೂಲದ ಎಸ್ ಎನ್ ಶೇಖ್ ಕಳೆದ 30 ವರ್ಷಗಳಿಂದ ಶಿರಸಿ ಕೆಎಸ್‌ಆರ್‌ಟಿಸಿ…

ಹಸು ಕೊಂದ ದುಷ್ಕರ್ಮಿ ಬಂಧನಕ್ಕೆ ಆಗ್ರಹ

`ಹೊನ್ನಾವರದ ಸಾಲ್ಕೋಡ ಗ್ರಾಮ ಸಮೀಪದ ಕೊಂಡುಕುಳಿ ಗ್ರಾಮದಲ್ಲಿ ಹಸುವಿನ ತಲೆ ಕಡಿದು ವಿಕೃತಿ ಮೆರೆದವರನ್ನು ಕೂಡಲೇ ಬಂಧಿಸಬೇಕು’ ಎಂದು ಉತ್ತರ ಕನ್ನಡ ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ದಿಲೀಪ್ ಅರ್ಗೇಕರ್ ಹೇಳಿದ್ದಾರೆ. `ಗ್ರಾಮೀಣ ಭಾಗದ ಜನ ತಾವು ಸಾಕಿದ ಹಸುಗಳನ್ನು ಮೇವಿಗಾಗಿ…

ಕೊರಗಿ ಕೊರಗಿ ನೇಣಿಗೆ ಶರಣಾದ ಎಪಿಎಂಸಿ ನಿವೃತ್ತ ನೌಕರ!

ಕಳೆದ ಮೂರು ವರ್ಷಗಳಿಂದ ಬಿಪಿ – ಶುಗರ್ ಹೆಚ್ಚಳದಿಂದ ಕೊರಗುತ್ತಿದ್ದ ಗಿರೀಶ ಭಾನಾವಳಿ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ. ಶಿರಸಿ ಬಿಸಲಕೊಪ್ಪದ ಗಿರೀಶ ಭಾನಾವಳಿ (62) ಕಾರವಾರದ ಬಾಡ ಚಂದ್ರದೇವವಾಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರೀಶ ಭಾನಾವಳಿ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ…

You cannot copy content of this page