ಮುರುಡೇಶ್ವರ | ಈ ದಿನ ಮದ್ಯ ಮಾರಾಟ ನಿಷೇಧ!
ಭಟ್ಕಳ: ಮುರುಡೇಶ್ವರದ ದೇವಸ್ಥಾನದ ಮಹಾರಥೋತ್ಸವ ಜನವರಿ 19ರಂದು ನಡೆಯಲಿದೆ. ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆಯಿದ್ದು, ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಎಚ್ಚರಿಕೆವಹಿಸಿದೆ. ಈ ಹಿನ್ನೆಲೆ ಆ ದಿನ ಮದ್ಯ ಮಾರಾಟವನ್ನು ಸಹ ನಿಷೇಧಿಸಲಾಗಿದೆ. ಜನವರಿ 19ರ ಬೆಳಗ್ಗೆ 6 ಗಂಟೆಯಿoದ ಮರುದಿನ…
ಇದೇ ಮೊದಲಲ್ಲ.. ಇದಕ್ಕೆ ಕೊನೆಯೂ ಇಲ್ಲ: ಇಲ್ಲದ ಕಚೇರಿಗೆ ಸಚಿವರ ಪ್ರವಾಸ!
ಕಾರವಾರ: ಕಾಂಗ್ರೆಸ್ ಚಿಹ್ನೆಯ ಅಡಿ ಆಯ್ಕೆಯಾದ ಶಾಸಕ ಸತೀಶ್ ಸೈಲ್ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಕಚೇರಿಯನ್ನು ಹೊಂದಿಲ್ಲ. ಅದಾಗಿಯೂ ಕಾರವಾರಕ್ಕೆ ಭೇಟಿ ನೀಡುವ ಸಚಿವರೆಲ್ಲರೂ `ಕಾಂಗ್ರೆಸ್ ಕಚೇರಿಗೆ ಭೇಟಿ’ ಎಂದು ಸಮಯ ನಿಗದಿ ಮಾಡುತ್ತಿದ್ದು, ಇಲ್ಲದ ಕಚೇರಿಗೆ ಸಚಿವರು…
ಅನಂತಕುಮಾರ ಹೆಗಡೆ ಇದೀಗ ಹಸಿರು ಉದ್ಯಮಿ!
ಶಿರಸಿ: ಎಲ್ಲರಿಗಿಂತಲೂ 10 ವರ್ಷ ಮುಂಚಿತವಾಗಿ ಯೋಚಿಸಿ ಮನಸಲ್ಲಿ ಅಂದುಕೊoಡಿದ್ದನ್ನು ಸಾಧಿಸಿ ತೋರಿಸುವ ಉತ್ತರ ಕನ್ನಡ ಮಾಜಿ ಸಂಸದ ಅನಂತಕುಮಾರ ಹೆಗಡೆ ಇದೀಗ ನ್ಯಾನ್ಯೋ ಟೆಕ್ನಾಲಜಿ ಹಿಂದೆ ಬಿದ್ದಿದ್ದಾರೆ. ರಾಜಕೀಯ ಪಡಸಾಲೆಯಿಂದ ದೂರವಿರುವ ಅವರು ಗ್ರೀನ್ ನ್ಯಾನೋ ಟೆಕ್ ಕ್ಷೇತ್ರದಲ್ಲಿ ಕ್ರಾಂತಿ…
ಶಿರಸಿ ಶಾಸಕರ ವಿದೇಶಯಾನ: ಶಿವರಾಜಕುಮಾರ ಜೊತೆ ಮಾತುಕಥೆ!
ಶಿರಸಿ: ಶಾಸಕ ಭೀಮಣ್ಣ ನಾಯ್ಕ ಅವರು ವಿದೇಶ ಪ್ರವಾಸದಲ್ಲಿದ್ದು, ಅಮೇರಿಕಾದಲ್ಲಿ ಚಿತ್ರನಟ ಶಿವರಾಜಕುಮಾರ ಅವರನ್ನು ಭೇಟಿಯಾಗಿದ್ದಾರೆ. ಶಾಸಕರು ಮರಳುವವರೆಗೂ ಭೀಮಣ್ಣ ನಾಯ್ಕ ಅವರ ಪುತ್ರ ಅಶ್ವಿನ್ ನಾಯ್ಕ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದು, ಇಲ್ಲಿನ ಆಗು-ಹೋಗುಗಳ ಬಗ್ಗೆ ವಿದೇಶಕ್ಕೆ ವರದಿ ರವಾನಿಸುತ್ತಿದ್ದಾರೆ! ಶಾಸಕ ಭೀಮಣ್ಣ…
ಅಕ್ಕಸಾಲಿಗನ ಜೊತೆ ಚಾಲಕನ ಅಂದರ್ ಬಾಹರ್: ಜೊತೆಗೆ ಸಿಕ್ಕಿಬಿದ್ದ ಕೆಲಸದ ಆಳು!
ಮುಂಡಗೋಡ: ಓಣಿಕೇರಿಯ ಮಾರುತಿ ದೇವಸ್ಥಾನದ ಬಳಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಪೊಲೀಸರಿಗೆ 52 ಇಸ್ಪಿಟ್ ಎಲೆಗಳ ಜೊತೆ ಅಲ್ಲಿ ಹರಡಿಕೊಂಡಿದ್ದ 7400ರೂ ಹಣ ಸಿಕ್ಕಿದೆ. ಬೆಳಗಾವಿಯಲ್ಲಿ ಬಂಗಾರದ ಕೆಲಸ ಮಾಡುವ ಅರುಣ ಅಕ್ಕಸಾಲಿಗ…
ತಂಗಿಮನೆಗೆ ಹೊರಟವನಿಗೆ ಕಾಣಿಸಿತು ರಕ್ತಸಿಕ್ತ ಶವ!
ಸಿದ್ದಾಪುರ: ಸ್ನೇಹಿತರ ಜೊತೆ ತಂಗಿ ಮನೆಗೆ ಹೊರಟಿದ್ದ ಚಂದ್ರಶೇಖರ ನಾಯ್ಕ ಅವರಿಗೆ ರಸ್ತೆ ಪಕ್ಕ ರಕ್ತ ಗೋಚರಿಸಿದ್ದು, ಅದನ್ನು ಬೆನ್ನತ್ತಿ ಹೋದಾಗ ರಕ್ತದ ಮಡವಿನಲ್ಲಿ ಬಿದ್ದ ವ್ಯಕ್ತಿಯ ಶವ ಕಾಣಿಸಿದೆ. ಮಾವಿನಗುಂಡಿ ಬಸವನಬೈಲಿನ ಚಂದ್ರಶೇಖರ ನಾಯ್ಕ ಅವರು ಜನವರಿ 14ರ ರಾತ್ರಿ…
ವಾಲಿಬಾಲ್ ಪಂದ್ಯ | ಆಟ ಆಡಿ.. ಬಹುಮಾನ ಗೆಲ್ಲಿ!
ಯಲ್ಲಾಪುರ: ಬೆಡಸಗದ್ದೆಯ ಸಮಾನ ಮನಸ್ಕರೆಲ್ಲರೂ ಸೇರಿ ಜಿಲ್ಲಾ ಮಟ್ಟದ `ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ’ ಆಯೋಜಿಸಿದ್ದಾರೆ. ಜನವರಿ 18ರ ಶನಿವಾರ ಮಧ್ಯಾಹ್ನ 3 ಗಂಟೆಗೆ ವನಶ್ರೀ ಕ್ರೀಡಾಂಗಣದಲ್ಲಿ ಈ ಆಟ ಶುರುವಾಗಲಿದೆ. ಹೀಗಾಗಿ ಜನವರಿ 17ಕ್ಕೆ ಹೆಸರು ನೊಂದಾಯಿಸಲು ಕೊನೆ ದಿನ.…
ಎದೆನೋವು ಎಂದು ಕೈ ಕುಯ್ದುಕೊಂಡ ವ್ಯಕ್ತಿ ಸಾವು!
ಮುಂಡಗೋಡ: 14 ವರ್ಷಗಳಿಂದ ಎದೆನೋವಿನಿಂದ ಬಳಲುತ್ತಿದ್ದ ಮಂಜುನಾಥ ಗೆಜ್ಜೆಹಳ್ಳಿ ಅದೇ ನೋವಿನಲ್ಲಿ ಕೈ ಕೊರೆದುಕೊಂಡಿದ್ದು, ಚಿಕಿತ್ಸೆಗೆ ದಾಖಲಿಸಿದರೂ ಸ್ಪಂದಿಸದೇ ಸಾವನಪ್ಪಿದ್ದಾರೆ. ಮುಂಡಗೋಡಿನ ರಾಮಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಗೆಜ್ಜೆಹಳ್ಳಿ (34) ಎದೆನೋವಿನ ಕಾರಣ ಹಲವು ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಆದರೆ, ಎಲ್ಲಿಯೂ…
ಪ್ರತಿಭಾನ್ವಿತರಿಗೆ ಗೌರವಿಸಿದ ಗೋಮಾಂತಕ ಸಮಾಜ
ಯಲ್ಲಾಪುರ: ಹುಬ್ಬಳ್ಳಿಯ ಉತ್ತರ ಕನ್ನಡ ವೈಶ್ಯ ಸಮಾಜ ಭವನದಲ್ಲಿ ನಡೆದ ಗೊಮಾಂತಕ ಸಮಾಜ ಸೇವಾ ಸಂಘದ ವಾರ್ಷಿಕ ಕಾರ್ಯಕ್ರಮದಲ್ಲಿ ಉತ್ತರ ಕನ್ನಡದ ಪ್ರತಿಭೆಗಳಿಗೆ ಸನ್ಮಾನಿಸಲಾಗಿದೆ. ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದವರನ್ನು ಗೊಮಾಂತಕ ಸಮಾಜ ಗುರುತಿಸಿ ಗೌರವಿಸಿದೆ. ಕಳೆದ 40…
ಪತ್ನಿ ದೂರವಾದ ಚಿಂತೆ: ನೇಣಿಗೆ ಶರಣಾದ ವ್ಯಸನಿ
ಜೊಯಿಡಾ: ಕಳೆದ 20 ವರ್ಷಗಳಿಂದ ಸರಾಯಿ ಕುಡಿಯುತ್ತಿದ್ದ ಡುಮ್ಮಿಂಗ್ ಫರ್ನಾಂಡಿಸ್ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಯರಮುಖದ ಡುಮ್ಮಿಂಗ್ ಫರ್ನಾಂಡಿಸ್’ಗೆ `ಸರಾಯಿ ಕುಡಿಯುವುದು ಒಳ್ಳೆಯದಲ್ಲ’ ಎಂದು ಸಾಕಷ್ಟು ಬಾರಿ ಕುಟುಂಬದವರು ಹೇಳಿದ್ದರು. ಒಮ್ಮೆ ಕಾರವಾರಕ್ಕೆ ಕರೆದೊಯ್ದು ಕುಡಿಯುವ ಚಟವನ್ನು ಬಿಡಿಸಿದ್ದರು. ಅದಾಗಿಯೂ…








