6
ದಿಬ್ಬಕ್ಕೆ ಗುದ್ದಿದ ಕಾರು ಬೈಕಿಗೆ ಡಿಕ್ಕಿ: ಮೂವರಿಗೆ ಗಾಯ

ಸಿದ್ದಾಪುರ: ಶಿರಸಿ ಸಿದ್ದಾಪುರ ರಸ್ತೆಯ ನೀಡಗೋಡು – ಮಂಡ್ಲಿಕೊಪ್ಪ ಸೇತುವೆ ಬಳಿ ದಿಬ್ಬಕ್ಕೆ ಗುದ್ದಿದ ಕಾರು ನಂತರ ಅದೇ ಮಾರ್ಗವಾಗಿ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಕೊಡ್ಸೆ ಹೇಮಗಾರದ ಯೋಗೇಶ ಮಂಜುನಾಥ ಗೌಡ ಕಾರು ಚಲಾಯಿಸುತ್ತಿದ್ದರು.…

ಜಾಮೀನು ಸಿಕ್ಕಿದ ಖುಷಿಯಲ್ಲಿ ಶಾಸಕ: ಸೈಲ್.. ಜೈಲ್.. ಬೇಲ್!

ಕಾರವಾರ: ಅದಿರು ಕಳ್ಳತನ ಹಾಗೂ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ಶಾಸಕ ಸತೀಶ್ ಸೈಲ್ ಅವರಿಗೆ ಹೈಕೋರ್ಟ ಜಾಮೀನು ನೀಡಿದೆ. ಬೇಲೇಕೆರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್’ಗೆ ಜನಪ್ರತಿನಿಧಿಗಳ ನ್ಯಾಯಾಲಯ…

ಕಸಾಯಿಖಾನೆಗೆ ಹೋಗುತ್ತಿದ್ದ ಜಾನುವಾರುಗಳಿಗೆ ಗೋಶಾಲೆಯ ಆಶ್ರಯ

ಯಲ್ಲಾಪುರ: ಕಸಾಯಿಖಾನೆಗೆ ಸಾಗಿಸುತ್ತಿದ್ದ ಕೋಣ ಹಾಗೂ ಎತ್ತುಗಳನ್ನು ಪೊಲೀಸರು ಬಿಡಿಸಿದ್ದಾರೆ. ಬೆಳಗಾವಿಯ ಯಮನಕರಡಿಯಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಒಟ್ಟು 12 ಜಾನುವಾರುಗಳಿಗೆ ಪೊಲೀಸರು ಬಿಡುಗಡೆ ಭಾಗ್ಯ ನೀಡಿದರು. ರಾಷ್ಟೀಯ  ಹೆದ್ದಾರಿ ಮೂಲಕ ಈ ಪ್ರಮಾಣದಲ್ಲಿ ಜಾನುವಾರು ಸಾಗಾಟ ನಡೆಯುತ್ತಿದ್ದರೂ ದಾರಿ ನಡುವೆ…

ರಾತ್ರಿ ಜಗಳ: ಬಿಡಿಸಲು ಹೋದ ಅಜ್ಜಿಯ ಕೈ ಮುರಿತ!

ಹೊನ್ನಾವರ: ರಾತ್ರಿ ವೇಳೆ ಜಗಳಕ್ಕೆ ಬಂದ ಶ್ರೀಧರ ಮಂಜು ಗೌಡರಿಗೆ `ಬೆಳಗ್ಗೆ ಮಾತನೋಡೋಣ’ ಎಂದು ಸಮಾಧಾನ ಮಾಡಲು ಹೋಗಿದ್ದ ಮಾದೇವಿ ಗೌಡ ತಮ್ಮ ಕೈ ಮುರಿದುಕೊಂಡಿದ್ದಾರೆ. ಮೇಲಿನ ಇಡಗುಂಜಿ ಖಾರ್ವಾ ಬಳಿಯ ನಾತಗೇರಿ ಕುಳಿಮನೆಯ ಶ್ರೀಧರ ಗೌಡ ದೊಣ್ಣೆಯಿಂದ ಹೊಡೆದು ಮಾದೇವಿ…

ಗುರುಪ್ರಸಾದಗೆ ನಾಯಿ ಕಾಟ: ವಿದ್ಯುತ್ ಕಂಬಕ್ಕೆ ಸ್ಕೂಟರ್ ಗುದ್ದಿ ಗಾಯ

ಕಾರವಾರ: ಗೀತಾಂಜಲಿ ಸರ್ಕಲ್ ಕಡೆಯಿಂದ ಮುರುಳಿಧರ ಮಠದ ಕಡೆ ಸ್ಕೂಟರ್ ಮೇಲೆ ತೆರಳುತ್ತಿದ್ದ ಅಕ್ಕಸಾಲಿಗ ಗುರುಪ್ರಸಾದ ವರ್ಣೇಕರ್ (35) ಸ್ಕೂಟರನ್ನು ವಿದ್ಯುತ್ ಕಂಬಕ್ಕೆ ಗುದ್ದಿ ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ. ನ 10ರ ರಾತ್ರಿ 10 ಗಂಟೆ ವೇಳೆಗೆ ಅವರು ವೇಗವಾಗಿ ಸ್ಕೂಟರ್…

ಅಜ್ಜಿ ಹೋರಾಟಕ್ಕೆ ಸಿಕ್ಕಿದ ನ್ಯಾಯ!

ಕುಮಟಾ: ಸಂಧ್ಯಾ ಸುರಕ್ಷಾ ಯೋಜನೆ ಅಡಿ ಮಾಸಾಶನ ಪಡೆಯಲು ನೀಲಾವತಿ ನಾಯ್ಕ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ವಿಧವಾ ವೇತನ ದೊರೆಯುತ್ತಿದ್ದ ಕಾರಣ ಅವರಿಗೆ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ `ವಿಧವಾ ವೇತನ ರದ್ಧುಗೊಳಿಸಿ’ ಎಂದು ಅವರು…

ಪರಸ್ತ್ರೀ ಮೇಲೆ ಮೋಹ | ಪೊಲೀಸ್ ಠಾಣೆಯಲ್ಲಿ ರಾಜಿ: ರಾತ್ರಿ ನಡೆದದ್ದು ದೊಡ್ಡ ಕಾಳಗ!

ಹೊನ್ನಾವರ: ಚಂದಾವರದ ಜನತಾ ಪ್ಲಾಟ್ ಕೇರಿಯ ಫೈಸಲ್ ಅವರ ಮನೆಯ ಮೇಲೆ ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. 20ಕ್ಕೂ ಅಧಿಕ ಜನ ದಾಳಿಯಲ್ಲಿದ್ದು, ಆ ಪೈಕಿ ಸಿಕ್ಕಿಬಿದ್ದ ಒಬ್ಬನ್ನನ್ನು ಹಿಡಿದ ಸ್ಥಳೀಯರು ಆತನನ್ನು ಹಗ್ಗದಿಂದ ಕಟ್ಟಿ ಥಳಿಸಿದ್ದಾರೆ. ಬೈಕಿನಲ್ಲಿ ಬಂದ…

ಈ ಚಿರತೆ ನರಭಕ್ಷಕ | ವ್ಯಾಘ್ರನ ಬಾಯಿಗೆ ಸಿಕ್ಕಿಬಿದ್ದ ಶಿಕ್ಷಕ: ಆತ ಬಚಾವಾಗಿದ್ದು ಪವಾಡ!

ಹೊನ್ನಾವರ: ಜಾನುವಾರುಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುತ್ತಿದ್ದ ಚಿರತೆ ಇದೀಗ ಮನುಷ್ಯರ ಮೇಲಿನ ದಾಳಿಗೆ ಮುನ್ನುಡಿಯಿಟ್ಟಿದೆ. ಮನುಷ್ಯನ ಮಾಂಸನ ರುಚಿ ನೋಡಿದ ಚಿರತೆ ಮತ್ತೆ ಎಂದಿಗೂ ಬೇರೆ ಜೀವಿಯನ್ನು ಭಕ್ಷಿಸುವುದಿಲ್ಲ. ಹೀಗಾಗಿ ನರಭಕ್ಷಕ ಚಿರತೆಯ ಬಗ್ಗೆ ಹೊನ್ನಾವರದಲ್ಲಿ ಆತಂಕ ಹುಟ್ಟಿಕೊಂಡಿದೆ. ಸoತೇಗುಳಿ ಸಮೀಪ…

ಮಂಚಿಕೇರಿ | ಮುಂದುವರೆದ ಮಟ್ಕಾ ದಾಳಿ: ಓಸಿ ಆಟಗಾರನಿಗೆ ಲಾಠಿ ಬಿಸಿ!

ಯಲ್ಲಾಪುರ: ಉಮ್ಮಚ್ಗಿ ಬಳಿಯ ಟೇಲಿಫೋನ್ ಕಚೇರಿ ಹತ್ತಿರ ಓಸಿ ಆಡಿಸುತ್ತಿದ್ದ ಉಮೇಶ ನಾಯ್ಕ’ಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಉಮ್ಮಚ್ಗಿ ಜನತಾ ಕಾಲೋನಿಯ ಉಮೇಶ ತಿಮ್ಮಯ್ಯ ನಾಯ್ಕ ನ 12ರ ಸಂಜೆ 7 ಗಂಟೆಗೆ ಸಾರ್ವಜನಿಕ ಸ್ಥಳದಲ್ಲಿ ನಿಂತು ಜೂಜಾಟದ ಹಣ ಸಂಗ್ರಹಿಸುತ್ತಿದ್ದ.…

ವಕ್ಟ್ ಸಚಿವನ ವಿರುದ್ಧ ವಾಗ್ದಾಳಿ: ಜಮೀನು ಕಬಳಿಸುವವನೇ ಜೋಕರ್ ಜಮೀರ!

ಯಲ್ಲಾಪುರ: ಅಲ್ಪಸಂಖ್ಯಾತರ ಸಚಿವ ಜಮೀರ ಅಹ್ಮದ್ ಖಾನ್ ವಿರುದ್ಧ ಬಿಜೆಪಿ ಮುಖಂಡ ರಾಮು ನಾಯ್ಕ ವಾಗ್ದಾಳಿ ನಡೆಸಿದ್ದಾರೆ. ಹಿಂದುತ್ವ ಹಾಗೂ ಬಿಜೆಪಿ ಪ್ರಮುಖರನ್ನು ಪದೇ ಪದೇ ನಿಂದಿಸುವ ಜಮೀರ್ ನಡವಳಿಕೆ ಬಗ್ಗೆ ಕಿಡಿಕಾರಿದ್ದಾರೆ. `ರಾಜಕೀಯ ತೆವಲಿಗಾಗಿ ಹಾಗೂ ಬೇರೆಯವರನ್ನು ಮೆಚ್ಚಿಸಲು ಜಮೀರ್…

You cannot copy content of this page