TSS | ಎಲ್ಲವೂ ಇಲ್ಲೆ: ಅವಧಿ ಮುಗಿದ ವಸ್ತುವಿಗೂ ಇಲ್ಲಿದೆ ಬೆಲೆ!
ಶಿರಸಿ: TSS ವ್ಯಾಪಾರ ಮಳಿಗೆಯಲ್ಲಿ ಅವಧಿ ಮೀರಿದ ಆರೋಗ್ಯಕ್ಕೆ ಸಂಬ0ಧಿಸಿದ ವಸ್ತು ಮಾರಾಟ ನಡೆಯುತ್ತಿದ್ದು, ಬುಧವಾರ ಇದನ್ನು ಪ್ರಶ್ನಿಸಿದ ಗ್ರಾಹಕರಿಗೆ ಸರಿಯಾಗಿ ಉತ್ತರಿಸಲು ಸಿಬ್ಬಂದಿ ತಡವರಿಸಿದರು. ಈ ವೇಳೆ ಅವಧಿ ಮುಗಿದ ಸಾಮಗ್ರಿಗಳು ರಾಶಿ ರಾಶಿ ಬಿದ್ದಿರುವುದನ್ನು ನೋಡಿ ಗ್ರಾಹಕರು ಕಂಗಾಲಾದರು!…
ನಾನು ನಂದಿನಿ…. ತಪ್ಪು ಮಾಡಿ ಸಿಕ್ಕಿ ಬಿದ್ದೀನಿ!
ಕುಮಟಾ: ಹೊಸ ಬಸ್ ನಿಲ್ದಾಣದ ಬಳಿಯಿರುವ ಮಹಾಸತಿ ಸರ್ಕಲ್ನಲ್ಲಿರುವ `ನಂದಿನಿ’ ಹಾಲಿನ ಮಳಿಗೆಯಲ್ಲಿ ಅವಧಿ ಮುಗಿದ ಹಾಲು ಹಾಗೂ ಬಿಸ್ಕತ್ ಮಾರಾಟ ಮಾಡುತ್ತಿರುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಪತ್ತೆ ಮಾಡಿದರು. ಯಶ್ವಂತ ಶಾನಭಾಗ ಎಂಬಾತರು ಈ ಮಳಿಗೆ…
ಸಮಸ್ಯೆ ಹೇಳಿ ಬೈಸಿಕೊಂಡ ಕಾಂಗ್ರೆಸ್ ಕಾರ್ಯಕರ್ತ!
ಗ್ರಾಮ ಪಂಚಾಯತಗಳಿಗೆ ಸರ್ಕಾರದಿಂದ ಸೂಕ್ತ ಅನುದಾನ ಬಾರದ ಬಗ್ಗೆ ಶಾಸಕ-ಸಚಿವರಲ್ಲಿ ಹೇಳಿಕೊಂಡ ಗ್ರಾ ಪಂ ಸದಸ್ಯರೂ ಆಗಿರುವ ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಎಂ ಕೆ ಭಟ್ಟ ಯಡಳ್ಳಿ ಅವರ ನಡೆಗೆ ಶಾಸಕ ಆರ್ ವಿ ದೇಶಪಾಂಡೆ ಗರಂ ಆದರು. ವೇದಿಕೆಯಲ್ಲಿ ಎಲ್ಲರ…
ಗಂಡನಿಗೆ ಕೊಡಲ್ಲ ಗೃಹಲಕ್ಷ್ಮಿ ಹಣ!
`ಸರ್ಕಾರ ನೀಡುವ ಗೃಹಲಕ್ಷ್ಮಿ ಹಣ ಮಹಿಳೆಯರ ಉಪಯೋಗಕ್ಕಾಗಿದ್ದು, ಅದನ್ನೂ ಯಾವುದೇ ಕಾರಣಕ್ಕೂ ಗಂಡನಿಗೆ ಕೊಡಬೇಡಿ. ಈ ವಿಷಯಕ್ಕಾಗಿ ಗಂಡನ ಜೊತೆ ಜಗಳವನ್ನು ಮಾಡಬೇಡಿ’ ಎಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ. `ಗೃಹಲಕ್ಷ್ಮಿ ಹಣ ಗಂಡನಿಗೆ ಕೊಡುತ್ತೀರಾ?…
ಸುಟ್ಟು ಕರಕಲಾದ ದೇಹ: ರೈಲು ನಿಲ್ದಾಣದ ಬಳಿ ದೊರೆತ ಅಪರಿಚಿತ ಶವ
ಕಾರವಾರ ರೈಲ್ವೆ ನಿಲ್ದಾಣದ ಬಳಿ ಮಹಿಳೆಯೊಬ್ಬರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುಷ್ಕರ್ಮಿಗಳು ಮಹಿಳೆಯನ್ನು ಕೊಂದು ಸಾಕ್ಷಿನಾಶಕ್ಕೆ ಪ್ರಯತ್ನಿಸಿದ ಅನುಮಾನಗಳು ದಟ್ಟವಾಗಿದೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರಬಹುದಾದ ಅನುಮಾನ ವ್ಯಕ್ತವಾಗಿದೆ. ಶಿರವಾಡದ ರೈಲು ನಿಲ್ದಾಣದ ಬಳಿ ಈ ಶವ ಪತ್ತೆಯಾಗಿದೆ. ಅಂದಾಜು…
ಗಣೇಶ ಉತ್ಸವ: ಸರ್ಕಾರಿ ನೌಕರರಲ್ಲಿಯೇ ಎರಡು ಬಣ!
ಚದುರಿ ಹೋಗಿದ್ದ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಒಗ್ಗೂಡಿಸಿ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶ ಉತ್ಸವವನ್ನು ಹುಟ್ಟುಹಾಕಿದರು. ಆದರೆ, ಗಣಪತಿ ಪ್ರತಿಷ್ಠಾಪನೆಯನ್ನು ಪ್ರತಿಷ್ಠೆಯನ್ನಾಗಿಸಿಕೊಂಡ ಅಂಕೋಲಾದ ಸಾರಿಗೆ ನೌಕರರು ಇದೀಗ ಎರಡು ಬಣವಾಗಿದ್ದು, ಎರಡು ಕಡೆ ಪ್ರತ್ಯೇಕ ಗಣೇಶ ಉತ್ಸವ…
ಅತಿಕ್ರಮಣದಾರರ ರಕ್ಷಣೆಗೆ ಅಚವೆ ಶೆಟ್ಟರ ಹೋರಾಟ: ನ್ಯಾಯವಾದಿ ಜೊತೆ ಬೆಂಗಳೂರು ತಿರುಗಾಟ!
ಶಿರಸಿ: `ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾಗಿರುವ ಅರ್ಜಿದಾರರನ್ನು ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಬೇಕು. ಆ ಅತಿಕ್ರಮಣ ಪ್ರದೇಶದಲ್ಲಿ ಕಾಡು ಬೆಳಸಬೇಕು’ ಎಂದು ಎಂಟು ಪರಿಸರವಾದಿ ಸಂಘಟನೆಗಳು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿವೆ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ `ಅರಣ್ಯವಾಸಿಗಳ…
ಮುಳ್ಳಿನಲ್ಲಿ ಬಿದ್ದ ನವಜಾತ ಶಿಶು: ಹೆಣ್ಣಾಗಿ ಹುಟ್ಟಿದ್ದು ಆ ಕೂಸಿನ ತಪ್ಪಾ?
ಅದು ಯಾರು ಮಾಡಿದ ಪಾಪದ ಫಲವೋ ಗೊತ್ತಿಲ್ಲ. ಅನಾಥವಾಗಿದ್ದು ಮಾತ್ರ ನವಜಾತ ಶಿಶು! ಎರಡು ತಾಸಿನ ಹಿಂದೆ ಜನಿಸಿದ ಮಗುವನ್ನು ದುಷ್ಕರ್ಮಿಗಳು ಕಾರವಾರದಲ್ಲಿ ಪೊದೆ ಹಿಂದೆ ಎಸೆದಿದ್ದಾರೆ. ಕಾಜುಭಾಗದಿಂದ ಕೂರ್ಸೆವಾಡಕ್ಕೆ ತೆರಳುವ ದಾರಿ ಅಂಚಿನ ಪ್ರದೇಶದ ವಿಜಯವಾಡ ಎಂಬ ಪ್ರದೇಶದಲ್ಲಿ ಸಾಕಷ್ಟು…
ಸೆಲ್ಪಿ ಕಳುಹಿಸಿ.. ಹಣ ಗೆಲ್ಲಿ!
ಕಾರವಾರದ ಸಂಕಲ್ಪ ಕಮ್ಯುನಿಕೇಶನ್ ಪರಿಸರಕ್ಕೆ ಪೂರಕವಾದ ಮಣ್ಣಿನ ಗಣಪತಿ ವಿಗ್ರಹ ಪೂಜಿಸುವುದನ್ನು ಉತ್ತೇಜಿಸುವುದಕ್ಕಾಗಿ `ಸೆಲ್ಪಿ ವಿತ್ ಗಣೇಶ’ ಎಂಬ ಸ್ಪರ್ಧೆ ಆಯೋಜಿಸಿದೆ. ಕಳೆದ 5 ವರ್ಷಗಳಿಂದ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಗಣೇಶ ಉತ್ಸವದ ಅಂಗವಾಗಿ ಮಣ್ಣಿನ ಗಣಪನೊಂದಿಗೆ ನಿಂತು…
ಈ ಸೊಳ್ಳೆ ಜೀವಕ್ಕೆ ಮಾರಕ: ಒಂದು ನುಶಿ ಕಚ್ಚಿದರೂ ಬದುಕು ನರಕ!
ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳ ಮೂಲಕ ಆನೆಕಾಲು ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಕೊಳಚೆ ನೀರು ಈ ಸೊಳ್ಳೆಯ ಉತ್ಪಾದನಾ ಕೇಂದ್ರ! ಆನೆಕಾಲು ರೋಗಕ್ಕೆ ಕಾರಣವಾದ ಹುಳಗಳು ಮನುಷ್ಯನ ದುಗ್ಧರಸ ಗ್ರಂಥಿಗಳಲ್ಲಿ ವಾಸಿಸುತ್ತದೆ. ಅದರಲ್ಲೂ ಮುಖ್ಯವಾಗಿ ತೊಡೆ ಸಂಧಿಯಲ್ಲಿರುವ ದುಗ್ಧರಸ ಗ್ರಂಥಿ ಅಂದರೆ…







