6
Breaking
ಮಾವಳ್ಳಿ ಜಾತ್ರೆ: ಯಶಸ್ಸಿನ ಹಿಂದಿದೆ ನೂರಾರು ಸ್ವಯಂ ಸೇವಕರ ಶ್ರಮ!

ಯಲ್ಲಾಪುರ ತಾಲೂಕಿನ ಮಾವಳ್ಳಿಯಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಅಚ್ಚುಕಟ್ಟಾದ ವ್ಯವಸ್ಥೆಯ ಹಿಂದೆ ಇಲ್ಲಿನ ನೂರಾರು ಸ್ವಯಂ ಸೇವಕರ ಶ್ರಮ ಅಡಗಿದೆ. ಐದು ವರ್ಷಗಳಿಗೆ ಒಮ್ಮೆ ಮಾವಳ್ಳಿಯಲ್ಲಿ ಜಾತ್ರೆ ನಡೆಯುತ್ತದೆ. ಫೆ 19ರಿಂದ ಶುರುವಾದ ಮಾವಳ್ಳಿಯ ಜಾತ್ರೆ ಫೆ 27ರವರೆಗೆ ನಡೆಯಲಿದೆ.…

ಗುಜರಿ ವ್ಯಾಪಾರಿ ಅಪಹರಿಸಿದ ಉದ್ದಿಮೆದಾರರು!

ಕಾರವಾರದ ಶಿರವಾಡದಿಂದ ಗುಜುರಿ ವ್ಯಾಪಾರಿಯನ್ನು ಅಪಹರಿಸಿದ್ದ ಐದು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಹರಣಕ್ಕೆ ಒಳಗಾದ ಗುಜುರಿ ವ್ಯಾಪಾರಿಯನ್ನು ರಕ್ಷಿಸಿ ಅವರ ಕುಟುಂಬದವರೊಡನೆ ಕಳುಹಿಸಿಕೊಟ್ಟದ್ದಾರೆ. ಕಾರವಾರ ಕಾಜುಭಾಗದ ವಕೀಲೆ ನಫಿಸಾ ಮಜೀದ್ ಅವರು ತಮ್ಮ ಪತಿ ಅಬ್ದುಲ್ ಮಜೀದ್‌ರನ್ನು ಅಪಹರಣವಾಗಿರುವ ಬಗ್ಗೆ…

ಫೆ 24: ಈ ಊರಿನಲ್ಲಿ ನಿಷೇಧಾಜ್ಞೆ!

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ ಹಾಗೂ ಅಂಕೋಲಾ ಪುರಸಭೆಯ ಕೇಣಿ ಗ್ರಾಮದಲ್ಲಿ ಫೆ 24ರಂದು ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ. Geotechnical Investigation Work  ಕಾಮಗಾರಿ ಸಂಬoಧ ಶಾಂತಿ ಸುವ್ಯವಸ್ಥೆ ಕಾಪಾಡುವ…

ಪರಶಿವನ ಜಾತ್ರೆಗೆ ಯಾಣ ಸನ್ನಿದ್ಧ!

ಶಿವರಾತ್ರಿ ಸಮೀಪಿಸುತ್ತಿದ್ದಂತೆ ಪರಶಿವನ ಕ್ಷೇತ್ರದಲ್ಲಿ ಜಾತ್ರಾ ಸಡಗರ ಮನೆ ಮಾಡಿದೆ. ಪ್ರಸಿದ್ಧ ಶಿವಕ್ಷೇತ್ರ ಯಾಣದಲ್ಲಿಯೂ ಶಿವರಾತ್ರಿ ಆಚರಣೆಗೆ ಬರದ ಸಿದ್ಧತೆ ನಡೆಯುತ್ತಿದೆ. ದಟ್ಟ ಅರಣ್ಯದಲ್ಲಿನ ಬೃಹತ್ ಕಲ್ಪಂಡೆ ನಡುವೆ ನೆಲೆಸಿರುವ ಶಿವ ಸನ್ನಿಧಿ ಅನೇಕರ ಪಾಲಿಗೆ ನೆಚ್ಚಿನ ತಾಣ. ಯಾಣದ ಶ್ರೀ…

ಪ್ರೇಯಸಿಯ ಪತಿ ಕೊಂದು ಜೈಲು ಸೇರಿದ ಪ್ರೀತಂ!

ನಾಲ್ಕು ತಿಂಗಳ ಹಿಂದೆ ಪೂಜಾರನ್ನು ವರಿಸಿದ್ದ ಗಂಗಾಧರ ಶನಿವಾರ ಸಂಜೆ ಶಿರಸಿ ಬಸ್ಸಿನಲ್ಲಿ ಕೊಲೆಯಾಗಿದ್ದು, ಕೊಲೆ ಮಾಡಿದ ಪ್ರೀತಂ ಡಿಸೋಜಾ’ರನ್ನು ಪೊಲೀಸರು 30 ನಿಮಿಷದ ಒಳಗೆ ಬಂಧಿಸಿದ್ದಾರೆ. ಪ್ರೀತಂ ಹಾಗೂ ಪೂಜಾ ನಡುವಿನ ಹಳೆಯ ಪ್ರೇಮ ಪುರಾಣ ಗಂಗಾಧರ ಅವರ ಕೊಲೆಗೆ…

ಅಂದರ್ ಬಾಹರ್: ಏಳು ಜನವರ ವಿರುದ್ಧ ಕಾನೂನು ಕ್ರಮ!

ಹಳಿಯಾಳ ಪಟ್ಟಣದ ಗೋರಿಖಾನ್ ಪೆಟ್ರೋಲ್ ಬಂಕ್ ಬಳಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಐದು ಜನ ಜೂಜುಕೋರರು ಸಿಕ್ಕಿ ಬಿದ್ದಿದ್ದು, ಇಬ್ಬರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಪೊಲೀಸರು ಅವರನ್ನು ಸಹ ಹುಡುಕುತ್ತಿದ್ದಾರೆ. ಫೆ 22ರ…

ಸಾಕ್ಷಿ ಹೇಳಲು ಹೊರಟವನಿಗೆ ಕೊಲೆ ಬೆದರಿಕೆ!

ಪ್ರಕರಣವೊಂದರ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಹೊರಟಿದ್ದ ಕೃಷ್ಣಮೂರ್ತಿ ಭಟ್ಟ ಅವರಿಗೆ ಕೊಲೆ ಬೆದರಿಕೆ ಬಂದಿದೆ. ಹೀಗಾಗಿ ಅವರು ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಶಿರಸಿ ಕೆಎಚ್‌ಸಿ ಕಾಲೋನಿಯ ಕೃಷ್ಣಮೂರ್ತಿ ಭಟ್ಟ ಅವರಿಗೆ ಮರಾಠಿಕೊಪ್ಪದ ಪರಮೇಶ್ವರ ಪಿಳ್ಳೆ ಬೆದರಿಕೆ ಒಡ್ಡಿದ್ದಾರೆ. 2023ರಲ್ಲಿ…

ಮಿತಿಮೀರಿದ ಹುಚ್ಚುನಾಯಿ ಕಾಟ: ಮತ್ತೆ ಮೂವರಿಗೆ ಕಡಿತ!

ಕಳೆದ ಭಾನುವಾರ ಮುಂಡಗೋಡದಲ್ಲಿ ಮೂವರು ಮಕ್ಕಳ ಮೇಲೆ ದಾಳಿ ಮಾಡಿದ್ದ ಹುಚ್ಚು ನಾಯಿಗಳ ಗುಂಪು ಈ ಭಾನುವಾರವೂ ಮತ್ತೆ ಮೂವರ ಮೇಲೆ ಆಕ್ರಮಣ ನಡೆಸಿದೆ. ಈ ದಿನ ಮುಂಡಗೋಡು ಪಟ್ಟಣದ ನಂದೀಶ ನಗರದಲ್ಲಿ ಹುಚ್ಚು ನಾಯಿಗಳು ಓಡಾಡುತ್ತಿವೆ. ಅಲ್ಲಿ ಆಟವಾಡುತ್ತಿದ್ದ ಅರುಣಿತಾ…

ಹೆಬ್ಬಾರರ ಗುಡುಗಿಗೆ ನಡುಗಿದ ವಿಮಾ ಕಂಪನಿ!

ಅತಿವೃಷ್ಠಿ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ಬೆಳೆ ಹಾನಿಯಾದರೂ ವಿಮಾ ಕಂಪನಿ ಅಡಿಕೆ ಬೆಳೆಗಾರರಿಗೆ ಪರಿಹಾರ ವಿತರಿಸಿಲ್ಲ. ವಿಮಾ ಪರಿಹಾರಕ್ಕಾಗಿ ಆಗ್ರಹಿಸಿ ರೈತರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದರೂ ವಿಮಾ ಕಂಪನಿ ಸ್ಪಂದಿಸಿಲ್ಲ. ವಿವಿಧ ರೋಗ, ಕೂಲಿ ಕಾರ್ಮಿಕರ ಕೊರತೆ, ಪೃಕೃತಿ…

ಬಸ್ಸಿನಲ್ಲಿ ನಡೀತು ಭೀಕರ ಕೊಲೆ!

ಶಿರಸಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಕೊಲೆ ನಡೆದಿದೆ. ಪ್ರಯಾಣಿಕರಿಬ್ಬರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಶನಿವಾರ ಸಂಜೆ ಅಂಕೋಲಾದಿoದ ಹೊರಟ ಬಸ್ಸು ದಾವಣಗೆರೆ ಮೂಲಕ ಬೆಂಗಳೂರು ತಲುಪಬೇಕಿತ್ತು. ಆ ಬಸ್ಸಿನಲ್ಲಿ ಸಾಗರದ ಗಂಗಾಧರ ಎಂಬಾತರು ತಮ್ಮ ಪತ್ನಿ ಜೊತೆ ಪ್ರಯಾಣ…

You cannot copy content of this page