6
ಯೋಗ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ದಾಂಡೇಲಿ: ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಗೆ ದಾಂಡೇಲಿಯ ಜನತಾ ವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಹಳಿಯಾಳದಲ್ಲಿ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಜನತಾ ವಿದ್ಯಾಲಯ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ವೇದಾಂತ್ ಶಣೈ ಪ್ರಥಮ ಸ್ಥಾನ ಪಡೆದಿದ್ದಾರೆ.…

ಈ ಶಿಕ್ಷಕ ತುಂಬಾ ಪ್ರಾಮಾಣಿಕ

ಕುಮಟಾ: ನಿವೃತ್ತ ಪೊಲೀಸ್ ಅಧಿಕಾರಿ ಮಧುಕರ ಶಂಕರ ಮಹಾಲೆ ರೈಲಿನಲ್ಲಿ ಹೋಗುವಾಗ ಕಳೆದುಕೊಂಡಿದ್ದ ಪರ್ಸನ್ನು ನಿವೃತ್ತ ಮುಖ್ಯ ಶಿಕ್ಷಕ ಸುಕ್ರು ದೇವು ಗೌಡ ಹಿಂತಿರುಗಿಸಿದ್ದಾರೆ. ಕಾರವಾರ ಮೂಲದ ಮಧುಕರ ಶಂಕರ ಮಹಾಲೆ ತಮ್ಮ ಪತ್ನಿಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ಮಂಗಳೂರು…

ಅಗಸ್ಟ 12: ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಈ ಕೆಲಸ ಕಡ್ಡಾಯ

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ `ನಶಾಮುಕ್ತ ಭಾರತ ಅಭಿಯಾನ’ಕ್ಕೆ ಕರೆ ನೀಡಿದ್ದು, ಈ ಹಿನ್ನಲೆ ಆಗಸ್ಟ್ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು ಹಾಗೂ ಇನ್ನಿತರ ಶೈಕ್ಷಣಿಕ ಸಂಸ್ಥೆಗಳಲ್ಲಿ `ಮಾದಕ ವಸ್ತು ಬಳಸಲ್ಲ’ ಎಂದು ಪ್ರತಿಜ್ಞೆ ಸ್ವೀಕರಿಸಲು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ಕರೆ…

ಸ್ಕೂಟಿಯಿಂದ ಬಿದ್ದ ಮಹಿಳೆ ಸಾವು

ಕುಮಟಾ: ಸ್ಕೂಟಿಯಿಂದ ಬಿದ್ದು ಗಾಯಗೊಂಡಿದ್ದ ಬೆಟ್ಕುಳ್ಳಿಯ ಗುಲ್ಬಾಮ್ (35) ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಜುಲೈ 30ರಂದು ಕುಮಟಾದಿಂದ ಅಂಕೋಲಾ ಕಡೆ ಆದಮ್ ಮುಲ್ಲಾ ಓಡಿಸುತ್ತಿದ್ದ ಸ್ಕೂಟಿಯಲ್ಲಿ ಆತನ ಪತ್ನಿ ಗುಲ್ಬಾಮ್ ಹಿಂದೆ ಕೂತಿದ್ದರು. ಬೆಟ್ಕುಳಿ ಗ್ರಾಮದ ಕಮಾನಿನ ಎದುರು ಸ್ಕೂಟಿ ಸ್ಕಿಡ್…

ಸ್ವಪಕ್ಷದ ವಿರುದ್ಧವೇ ಕಿಡಿಕಾರಿದ ಹೋರಾಟಗಾರ: ಅರಣ್ಯ ಸಚಿವ ಈಶ್ವರ ಖಂಡ್ರೆ ನಿಲುವಿಗೆ ನ್ಯಾಯವಾದಿ ರವೀಂದ್ರ ನಾಯ್ಕ ಆಕ್ಷೇಪ!

ಭಟ್ಕಳ: ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ನ್ಯಾಯವಾದಿ ರವೀಂದ್ರ ನಾಯ್ಕ ಸ್ವ ಪಕ್ಷದ ಸಚಿವ ಈಶ್ವರ ಖಂಡ್ರೆ ಆದೇಶದ ವಿರುದ್ಧ ಕಿಡಿಕಾರಿದ್ದಾರೆ. `ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಮಾನದಂಡ 2015ಕ್ಕೆ ನಿಗದಿಗೊಳಿಸಿ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಹೊರಡಿಸಿದ ಟಿಪ್ಪಣೆಯಿಂದ ಬಡವರಿಗೆ ನ್ಯಾಯ ಸಿಗುತ್ತಿಲ್ಲ’ ಎಂದವರು…

ನಾಗ ಪಂಚಮಿ: ಹಾವು ನೋಡಲು ಹೋದ ಮಹಿಳೆ ಬಾವಿಗೆ ಬಿದ್ದು ಸಾವು!

ಹೊನ್ನಾವರ: ಕಳೆದ ವರ್ಷ ವಿವಾಹವಾಗಿದ್ದ ಅಕ್ಷತಾ ನಾಯ್ಕ (26) ತವರುಮನೆಯ ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಬಾವಿಯ ಬಳಿ ಹಾವು ಕಾಣಿಸಿಕೊಂಡಿದ್ದು, ಅದನ್ನು ನೋಡಲು ಓಡಿದ ಅವರು ಅದೇ ಬಾವಿಯಲ್ಲಿ ಕೊನೆ ಉಸಿರೆಳೆದಿದ್ದಾರೆ. ನಗರಬಸ್ತಿಕೇರಿಯ ಕುಂಟೋಡಿಯ ಅಕ್ಷತಾ ನಾಯ್ಕ ಅವರನ್ನು ಕಳೆದ ವರ್ಷ…

ಹೊಸ ಜೆಸಿಬಿಗೆ ರಕ್ತದ ಅಭಿಷೇಕ!

ಕುಮಟಾ: ಚಂದಾವರದಿoದ ಕುಮಟಾ ಕಡೆ ಜೆಸಿಬಿ ಓಡಿಸಿಕೊಂಡು ಬಂದ ಚಿದಾನಂದ ಕುಂಬಾರ್ ಎಂಬಾತ ಬೈಕಿನಲ್ಲಿ ಹೋಗುತ್ತಿದ್ದ ಮಂಜುನಾಥ ಹನುಮಂತ ನಾಯ್ಕ ಹಾಗೂ ಮಂಜುನಾಥ ನಾಗಪ್ಪ ನಾಯ್ಕ ಎಂಬಾತರಿಗೆ ತಾನು ಓಡಿಸುತ್ತಿದ್ದ ಹೊಸ ಯಂತ್ರವನ್ನು ಗುದ್ದಿದ್ದಾನೆ. ಪರಿಣಾಮ ಬೈಕಿನಲ್ಲಿದ್ದ ಇಬ್ಬರಿಗೂ ಗಾಯವಾಗಿ ಆಸ್ಪತ್ರೆ…

ವ್ಯಾಪಕ ಮಳೆ: ನೆರೆಯಿಂದ ಒಳ್ಳೆಯದಾಗಿದ್ದು ಇವರಿಗೆ ಮಾತ್ರ!

ಅತಿಯಾದ ಮಳೆ, ಗುಡ್ಡ ಕುಸಿತ, ನೆರೆ ಪ್ರವಾಹ, ಹಲವರ ಸಾವು ಸಂತ್ರಸ್ತರ ನೋವಿನ ನಡುವೆ ಈ ಮಳೆ ಕಟ್ಟಿಗೆ ಸಂಗ್ರಹಿಸುವ ಸವಾಲಿನ ಕೆಲಸ ಇದೀಗ ಸಲೀಸಾಗಿದೆ. ಕರಾವಳಿಯಲ್ಲಿ ಸುರಿದ ವ್ಯಾಪಕ ಪ್ರಮಾಣದ ಮಳೆಯಿಂದ ಸಾವಿರಾರು ಜನ ಸಂತ್ರಸ್ತರಾಗಿದ್ದರು. ನೂರಾರು ಗ್ರಾಮಗಳು ಜಲಾವೃತಗೊಂಡಿದ್ದವು.…

ಎಲೆ – ಅಡಿಕೆ ಹಾಕುವವರೇ ಹುಷಾರು: ಕವಳದ ವಿರುದ್ಧ ಕಠಿಣ ಕಾರ್ಯಾಚರಣೆ!

ಶಿರಸಿ: ಕಂಡ ಕಂಡಲ್ಲಿ ಕವಳ (ಎಲೆ – ಅಡಿಕೆ) ಉಗುಳುವವರ ಮೇಲೆ ಪೊಲೀಸರು `ಕಠಿಣ ಕ್ರಮ’ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ಎಲೆ ಅಡಿಕೆ ಹಾಕಿ ಅವರಿವರ ಮೇಲೆ ಉಗಿದರೆ ರಾಜಿಯೇ ಇಲ್ಲ. ಸಾರ್ವಜನಿಕ ಸ್ಥಳದಲ್ಲಿ ಕವಳ ಉಗಿದರೂ ಇನ್ಮುಂದೆ ನ್ಯಾಯಾಲಯ ಅಲೆದಾಟ ತಪ್ಪಿದ್ದಲ್ಲ!…

ಬರ ಅಟ್ಟಲು ಗಿಡ ನೆಟ್ಟ ಶಾಲಾ ಮಂಡಳಿ

ಕುಮಟಾ: ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲಾ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಗಿಡಗಳನ್ನು ನಾಟಿ ಮಾಡಿದರು. ವಿದ್ಯಾರ್ಥಿಗಳ ಶಾಲಾ ಸಂಸತ್ ಮತ್ತು ವಿವಿಧ ವಿಷಯ ಸಂಘಗಳ ಉದ್ಘಾಟನೆ ಹಾಗೂ ಅತಿಥಿಗಳ ಸಹಯೋಗದಲ್ಲಿ ಗಿಡ ನೆಡುವ ಕಾರ್ಯಕ್ರಮ ಒಟ್ಟಿಗೆ ನೆಡೆಯಿತು. ಶಾಲೆಯ ಮಾಜಿ ವಿದ್ಯಾರ್ಥಿ ಎಂ.…

You cannot copy content of this page