6
ಕಾಸು ಕೊಟ್ಟರೂ ಕೆಲಸ ಮಾಡದ ಭೂ ಮಾಪನಾ ಇಲಾಖೆ!

ಹೊನ್ನಾವರ: ಪೋಡಿ ಸೇರಿದಂತೆ ಸರ್ಕಾರಿ ಕಚೇರಿಯಲ್ಲಿನ ಕೆಲಸಕ್ಕೆ ತೆರಳಿದವರಿಗೆ `ನಾಳೆ ಬಾ’ ಎಂಬ ಉತ್ತರ ಸಿಗುತ್ತಿದ್ದು, ಸಣ್ಣಪುಟ್ಟ ಕೆಲಸಗಳಿಗೂ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಡಿ ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. `ಭೂದಾಖಲೆಗಳ…

ರಾಮನಗುಳಿ ಸಹಕಾರಿ: ಒಬ್ಬರಿಗೆ ನಿವೃತ್ತಿ-ಮತ್ತಿಬ್ಬರಿಗೆ ಪದೋನ್ನತಿ!

ಅಂಕೋಲಾ: ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ 36 ವರ್ಷ ಕಾರ್ಯ ನಿರ್ವಹಿಸಿದ ಎಸ್ ಎನ್ ಹೆಗಡೆ ನಿವೃತ್ತರಾದರು. ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕರಾಗಿ ಉಪ ಮುಖ್ಯಕಾರ್ಯನಿರ್ವಾಹಕರಾಗಿದ್ದ ರವೀಂದ್ರ ವೈದ್ಯ ಅವರು ಅಧಿಕಾರವಹಿಸಿಕೊಂಡರು. ಪ್ರಸ್ತುತ ಉಪ ಮುಖ್ಯಕಾರ್ಯ ನಿರ್ವಾಹಕರಾಗಿ ಶಂಕರ್…

ಸಿದ್ದಿ ಜನರಿಗೆ ಕಳಪೆ ಆಹಾರ: ಕ್ರಮಕ್ಕೆ ಆಗ್ರಹ

ಕಾರವಾರ: `ಪರಿಶಿಷ್ಟ ಪಂಗಡದ ಸಿದ್ದಿ ಸಮುದಾಯದವರಿಗೆ ನೀಡುತ್ತಿರುವ ಆಹಾರ ಸಾಮಗ್ರಿ ಕಳಪೆಯಾಗಿದ್ದು, ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಮೂಲಕ ಇದನ್ನು ವಿತರಿಸಲಾಗಿದೆ. ಈ ಕಿಟ್ ಮೇಲೆ ಸಹ ಪೂರೈಕೆದಾರರ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ವೈಎಫ್‌ಐ ರಾಜ್ಯ ಸಮಿತಿ ಸದಸ್ಯರಾದ ಡಿ.ಸ್ಯಾಮಸನ್…

ಮಳೆ ಹಾನಿ: ಸಂತ್ರಸ್ತರಿಗೆ ಸಿಗದ ಸೂಕ್ತ ಪರಿಹಾರ

ಸಿದ್ದಾಪುರ: `ಮಳೆ ಹಾನಿಯಿಂದ ಮನೆ ಮುರಿದವರಿಗೆ ಸರ್ಕಾರ ನೀಡುವ 1.20 ಲಕ್ಷ ರೂ ಪರಿಹಾರ ಬಾಡಿಗೆ ಮನೆಯ ಜೀವನಕ್ಕೂ ಸಾಲುತ್ತಿಲ್ಲ’ ಎಂದು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದು, `ಅತಿವೃಷ್ಠಿ ಹಾಗೂ…

`ಆಶ್ರಯಮನೆ ಹಂಚಿಕೆಗೆ ಇಲ್ಲ ಗೊಂದಲ’

ದಾoಡೇಲಿ: `ನಗರವ್ಯಾಪ್ತಿಯಲ್ಲಿ ಜಿ +2 ಪಿಎಂಎವೈ ಯೋಜನೆಯ ಮನೆ ಹಂಚಿಕೆ ವಿಷಯವಾಗಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ’ ಎಂದು ನಗರಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು `108 ಮನೆಗಳ ಹಸ್ತಾಂತರವನ್ನು ಮಾಡಿದ್ದು, ಹಂಚಿಕೆ…

ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಅವಕಾಶ: ಜರ್ಮನ್ ಭಾಷೆ ಕಲಿಸಿ ಉದ್ಯೋಗ ಕೊಡುವ ಕಂಪನಿ!

ಜರ್ಮನಿಯ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗಾಗಿ `ಟಾಲೆಂಟ್ ಆರೆಂಜ್’ ಸಂಸ್ಥೆ ಅವಕಾಶ ಮಾಡಿಕೊಟ್ಟಿದ್ದು, ಅಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗಾಗಿ ಹುಡುಕಾಟ ನಡೆದಿದೆ. ಜರ್ಮನಿಯಲ್ಲಿ ಕೆಲಸ ನಿರ್ವಹಿಸಲು ಉತ್ಸುಕವಾದ ಅಭ್ಯರ್ಥಿಗಳಿಗೆ ಕೇರಳದ ತಿರುವನಂತಪುರದ ತರಬೇತಿ ಕೇಂದ್ರದಲ್ಲಿ 8 ತಿಂಗಳ ಕಾಲ ಜರ್ಮನ್…

ಕಾಡುವ ಅನಾರೋಗ್ಯ: ಆದರೂ ಎಲ್ಲದರಲ್ಲಿಯೂ ಅಚ್ಚುಕಟ್ಟು ಈ ಗಾಂವ್ಕಾರರು..

ಉತ್ತರಕನ್ನಡ ಜಿಲ್ಲೆಯ ತಾಳಮದ್ದಳೆ ಕ್ಷೇತ್ರದಲ್ಲಿ ಅಗಾಧ ಅಧ್ಯಯನ, ಅಸಾಧ್ಯ ನೆನಪಿನ ಶಕ್ತಿ, ಪ್ರಸಂಗಪದ್ಯದ ಚೌಕಟ್ಟಿನಿಂದ ಒಂದಿಷ್ಟು ಹೊರಸಾರದೆ ಪಾತ್ರ ಪೋಷಣೆ ಮಾಡುವ ಶಿಸ್ತುಬದ್ಧ ಅರ್ಥಗಾರಿಕೆ ಶೈಲಿಯಿಂದ ಮಿಂಚಿದವರು ಬಾಳಂತನಪಾಲ ನಾರಾಯಣ ಗಾಂವ್ಕಾರರು. ಶ್ರುತಿ ಬದ್ಧತೆ, ಗುಣಾಡ್ಯತೆ, ಶುದ್ಧ ಚಾರಿತ್ರದಿಂದ ಸರ್ವಮಾನ್ಯರಾಗಿ ಸ್ಥಾನ…

ತಲೆಕೆಟ್ಟ ತಟ್ಟಿಹಳ್ಳದ ಅಧಿಕಾರಿಗಳು: ಮುನ್ಸೂಚನೆ ಕೊಡದೇ ನೀರು ಬಿಟ್ಟವರಿಗೆ ತರಾಟೆ

ತಟ್ಟಿಹಳ್ಳ ಅಣೆಕಟ್ಟಿನಿಂದ ನೀರು ಹೊರಬಿಡುವ ಬಗ್ಗೆ ಮುನ್ಸೂಚನೆ ನೀಡುವಂತೆ ತಿಳಿಸಿದ್ದರೂ ಅದನ್ನು ಪಾಲಿಸದ ಅಣೆಕಟ್ಟು ಅಧಿಕಾರಿಗಳು ಏಕಾಏಕಿ ನೀರು ಹೊರಬಿಡುವ ಮೂಲಕ ಉದ್ದಟತನ ಮೆರೆದಿದ್ದಾರೆ. ಅಗಷ್ಟ 1ರಂದು ಯಾವುದೇ ಎಚ್ಚರಿಕೆಯನ್ನು ನೀಡದೇ ಅಣೆಕಟ್ಟಿನಿಂದ 20 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ತಕ್ಷಣ…

ದಾಂಡೇಲಿಗೆ ಬಂದವರ ದಣಿವಾರಿಸುವ ಸಿಂಥೇರಿ

ದಾಂಡೇಲಿಯಲ್ಲಿರುವ ಸಿಂಥೇರಿ ರಾಕ್ಸ್ ಹಲವು ವಿಶೇಷಗಳೊಂದಿಗೆ ಗಮನ ಸೆಳೆಯುತ್ತದೆ. ನಿತ್ಯ ಇಲ್ಲಿ ನೂರಾರು ಪ್ರವಾಸಿಗರು ಬರುತ್ತಿದ್ದು, ವಾರಾಂತ್ಯದಲ್ಲಿ ಬರುವವರ ಸಂಖ್ಯೆ ಇನ್ನೂ ಅಧಿಕ. ಸಿಂಥೇರಿ ರಾಕ್ಸ್ ವಿಶೇಷಗಳ ಬಗ್ಗೆ ಸೌಕನ್ಯಾ ದೇಸಾಯಿ ಅವರು ವಿವರಿಸಿದ ವಿಡಿಯೋ ಇಲ್ಲಿ ನೋಡಿ..

ಅಕ್ರಮ ಅಡ್ಡೆಗೆ ದೊಡ್ಡವರ ಆಶೀರ್ವಾದ: ಸರಾಯಿ ಅಂಗಡಿ ನಾಶಕ್ಕೆ ಅಂಗಲಾಚಿದ ಮಹಿಳೆಯರು!

ಮುಂಡಗೋಡ: ಆನಂದನಗರದಲ್ಲಿ ಅನಧಿಕೃತವಾಗಿ ಸರಾಯಿ ಮಾರಾಟ ಅಂಗಡಿಯಿರುವ ಬಗ್ಗೆ ಎಲ್ಲರಿಗೂ ಅರಿವಿದ್ದರೂ ಅದನ್ನು ತೆರವು ಮಾಡುವ ಧೈರ್ಯ ಯಾರಿಗೂ ಇಲ್ಲ! ಕಳೆದ ಅನೇಕ ವರ್ಷಗಳಿಂದ ದೇವಸ್ಥಾನದ ಅಂಚಿನಲ್ಲಿ ಸರಾಯಿ ಅಡ್ಡೆಯಿದ್ದರೂ ಅದನ್ನು ಜನಪ್ರತಿನಿಧಿಗಳು ಪ್ರಶ್ನಿಸಿಲ್ಲ. ಜನಸ್ಪಂದನಾ ಸಭೆಯಲ್ಲಿ ಈ ಬಗ್ಗೆ ಅಲ್ಲಿನ…

You cannot copy content of this page