ಬೈಕಿನ ಸದ್ದಿಗೆ ಘರ್ಜಿಸಿದ ಚಿರತೆ!
ಹೊನ್ನಾವರ: ಚಲಿಸುತ್ತಿರುವ ಬೈಕಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಬೈಕ್ ಓಡಿಸುತ್ತಿದ್ದ ಸತ್ಯನಾರಾಯಣ ಹೆಗಡೆ ಬೈಕಿನ ವೇಗ ಹೆಚ್ಚಿಸಿ ಜೀವ ಉಳಿಸಿಕೊಂಡಿದ್ದಾರೆ. ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದಲ್ಲಿ ಚಿರತೆ ಸಂಚಾರ ನಡೆಸಿದೆ. ಹಿರೇಮಕ್ಕಿಯ ಸತ್ಯನಾರಾಯಣ ಹೆಗಡೆ ಅವರು ಬುಧವಾರ ತಮ್ಮ ತೋಟಕ್ಕೆ…
ನೀವು ಕುಡಿಯುವ ನೀರು ಸೇವನೆಗೆ ಯೋಗ್ಯವೇ? ಗುಣಮಟ್ಟ ಅಳೆಯುವಿಕೆ ಇದೀಗ ಸಂಪೂರ್ಣ ಉಚಿತ!
ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗಾಗಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಗಳಿಗೆ ಪರೀಕ್ಷಾ ಕಿಟ್ ವಿತರಿಸಲಾಗಿದೆ. ಸಾರ್ವಜನಿಕರು ಸಹ ತಾವು ಸೇವಿಸುವ ಕುಡಿಯುವ ನೀರಿನ ಗುಣಮಟ್ಟವನ್ನು ಗ್ರಾಮ ಪಂಚಾಯತ ಮೂಲಕ ಪರಿಕ್ಷಿಸಬಹುದು. ಈ ಸೇವೆ ಸಂಪೂರ್ಣ ಉಚಿತ! `ಜಿಲ್ಲೆಯಲ್ಲಿನ ಎಲ್ಲಾ…
ರಭಸ ನೀರಿಗೆ ರಸ್ತೆ ಕೊರೆತದ ಆತಂಕ: ಪಿಚ್ಚಿಂಗ್ ನಿರ್ಮಾಣಕ್ಕೆ ಆಗ್ರಹ
ಯಲ್ಲಾಪುರ: ಶಿರಸಿ-ಯಲ್ಲಾಪುರ ರಸ್ತೆಯ ತೂಕದಬೈಲ್ ಘಟ್ಟದ ಬಳಿ ಮಳೆ ನೀರಿಗೆ ರಸ್ತೆ ಕೊರೆಯುವ ಆತಂಕ ಎದುರಾಗಿದೆ. ಈಗಾಗಲೆ ರಸ್ತೆ ಅಂಚಿನ ಗಟಾರ ಕೊಚ್ಚಿ ಹೋಗಿದ್ದು, ಮುಂದಿನ ಮಳೆಯೊಳಗೆ ರಸ್ತೆ ಕೊರೆತ ಉಂಟಾಗದoತೆ ತಡೆಯಲು ಪಿಚ್ಚಿಂಗ್ ಕಟ್ಟಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿಕಾಸ…
ಮೂವರ ರಕ್ಷಣೆ.. ನಾಲ್ವರ ಸಾವು | ಮುರುಡೇಶ್ವರ ಪ್ರವಾಸ: ಒಂದು ದುರಂತ ಕಥೆ!
ಭಟ್ಕಳ: ಮುರುಡೇಶ್ವರ ಪ್ರವಾಸಕ್ಕೆ ಬಂದು ಅರಬ್ಬಿ ಸಮುದ್ರದಲ್ಲಿ ಕಣ್ಮರೆಯಾಗಿದ್ದ ಮೂವರ ಶವ ಬುಧವಾರ ಸಿಕ್ಕಿದೆ. ಮಂಗಳವಾರ ಒಬ್ಬರ ಶವ ಸಿಕ್ಕಿದ್ದು, ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ 46 ವಿದ್ಯಾರ್ಥಿಗಳಲ್ಲಿ ನಾಲ್ವರು ಸಾವನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ…
ಕಾಣದ ದೇವರನ್ನು ಹುಡುಕಿದ ಪೊಲೀಸರು: ದೇವಾನು ದೇವತೆಗಳಿಗೂ ಇದೀಗ ನ್ಯಾಯಾಂಗ ಬಂಧನ!
ಅoಕೋಲಾ: ಅಚವೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾಗಿರುವ ವಿಠ್ಠಲ ಬಾಂದಿ ಅವರು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ದೇವರ ಮೂರ್ತಿಗಳನ್ನು ಕಳ್ಳರು ದೋಚಿದ್ದು, ಆ ಕಳ್ಳರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಳ್ಳತನ ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ಮೂರ್ತಿಗಳೇ ಮುಖ್ಯ ಸಾಕ್ಷಿಯಾಗಿದ್ದು, 16 ಮೂರ್ತಿಗಳನ್ನು…
ರಾಮಕೃಷ್ಣ ಹೆಗಡೆ ಅವರ ಜೀವ ಉಳಿಸಿದ್ದು ಕೃಷ್ಣ.. ಹೆಗಡೆರ ತೋಟ ಕಾಪಾಡಿದ್ದು ಎಸ್ ಎಂ ಕೃಷ್ಣ!
ಮಂಗಳವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಉತ್ತರ ಕನ್ನಡ ಜಿಲ್ಲೆಯ ಜೊತೆ ಭಾವನಾತ್ಮಕ ಸಂಬoಧ ಹೊಂದಿದ್ದರು. ಹೀಗಾಗಿಯೇ ಜಿಲ್ಲೆಯ ಅನೇಕ ಗಣ್ಯರೊಂದಿಗೆ ಅವರು ವೇದಿಕೆ ಹಂಚಿಕೊoಡಿದ್ದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೂ ಎಸ್ ಎಂ ಕೃಷ್ಣ…
ಸಾರ್ವಜನಿಕ ಸೇವೆಗೆ ಸಂದ ಗೌರವ: ಯಲ್ಲಾಪುರದ ನ್ಯಾಯವಾದಿಗೆ ಶಿರಸಿ ನೆಮ್ಮದಿ ಕುಟೀರದಲ್ಲಿ ಸನ್ಮಾನ
ಯಲ್ಲಾಪುರ: 30 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿರುವ ಯಲ್ಲಾಪುರದ ನ್ಯಾಯವಾದಿ ಬೀಬಿ ಅಮೀನಾ ಶೇಖ್ ಅವರಿಗೆ ಶಿರಸಿಯ ನೆಮ್ಮದಿ ಕುಟೀರದಲ್ಲಿ ಮಂಗಳವಾರ ಸನ್ಮಾನಿಸಲಾಯಿತು. ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ `WHR ಆರ್ ಕೆ ಪೌಂಡೇಶನ್’ ನಡೆಸಿದ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಲಾಯಿತು. ಬೀಬಿ…
ಉತ್ತರಕುಮಾರನ ಮನೆಯಲ್ಲಿ ಕಳ್ಳತನ: ಪ್ರವರಕುಮಾರನಿಂದ ಪೊಲೀಸ್ ದೂರು!
ಕಾರವಾರ: ಮಲ್ಲಾಪುರದಲ್ಲಿರುವ ಕೈಗಾ ಟೌನ್ಶಿಪ್’ನಲ್ಲಿ ಕಳ್ಳತನ ನಡೆದಿದೆ. ಸಾಕಷ್ಟು ಭದ್ರತೆಯಿರುವ ಪ್ರದೇಶದೊಳಗೆ ನುಸುಳಿದ ಕಳ್ಳರು ಮನೆ ಬೀಗ ಒಡೆದು ಚಿನ್ನಾಭರಣ ದೋಚಿದ್ದಾರೆ. ಕೈಗಾ ಅಣು ಘಟಕದ ಉದ್ಯೋಗಿ ಉತ್ತರಕುಮಾರ ಅವರು ತಮ್ಮ ಊರಾದ ಬಿಹಾರಕ್ಕೆ ಹೋಗಿದ್ದರು. ಊರಿಗೆ ಹೋಗುವ ಮುನ್ನ ತಾವು…
ಮುಂದುವರೆದ ಮಟ್ಕಾ ದಾಳಿ: ಸಿಕ್ಕಿಬಿದ್ದವರು ಮತ್ತೆ ಮೂರು ಜನ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಟ್ಕಾ ಆಡಿಸುವವರ ಮೇಲೆ ಪೊಲೀಸ್ ದಾಳಿ ಮುಂದುವರೆದಿದೆ. ಈ ದಿನ ಭಟ್ಕಳದ ಸಂಶುದ್ಧೀನ್ ಸರ್ಕಲ್ ಬಳಿ ಇಬ್ಬರು ಕಾರವಾರದ ಸದಾಶಿವಗಡ ಬಳಿ ಒಬ್ಬರು ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಭಟ್ಕಳದ ಮುಟ್ಟಳ್ಳಿ ಗೌರಮಜ್ಜಿ ಮನೆ ಶಶಿಧರ ನಾಯ್ಕ…
ಸಚಿವರ ಕ್ಷೇತ್ರದಲ್ಲಿ ಇಲ್ಲ ಸುರಕ್ಷತೆ: ಮುರುಡೇಶ್ವರಕ್ಕೆ ಬಂದ ಮಕ್ಕಳು ನೀರು ಪಾಲು!
ಭಟ್ಕಳ: `ಸುರಕ್ಷತೆ ಇಲ್ಲದೇ ಪ್ರವಾಸೋದ್ಯಮ ಚಟುವಟಿಕೆ ನಡೆಸಬೇಡಿ’ ಎಂದು ಖಾಸಗಿ ಪ್ರವಾಸೋದ್ಯಮಿಗಳಿಗೆ ಸೂಚಿಸಿರುವ ಪ್ರವಾಸೋದ್ಯಮ ಇಲಾಖೆ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲಿಯೇ ಸುರಕ್ಷತೆಗೆ ಆದ್ಯತೆ ಕೊಟ್ಟಿಲ್ಲ. ಮಂಗಳವಾರ ಮುರುಡೇಶ್ವರ ಪ್ರವಾಸಕ್ಕೆ ಬಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ನೀರು ಪಾಲಾಗಿದ್ದು,…







