6
ಜಯ ಕರ್ನಾಟಕ | ಕಿರವತ್ತಿಯಲ್ಲಿ ಕನ್ನಡ ಕಲರವ

ಯಲ್ಲಾಪುರ: ಸಿದ್ದಿ ಸಮುದಾಯದ ಡಮಾಮಿ, ಗೌಳಿ ಜನರ ಸಾಂಪ್ರದಾಯಿಕ ನೃತ್ಯದೊಂದಿಗೆ ಕಿರವತ್ತಿಯಲ್ಲಿ ಬುಧವಾರ ಕನ್ನಡ ಗಾಯನಗಳು ಮೊಳಗಿದ್ದವು. ಮಹಿಳೆಯರ ಡೊಳ್ಳು ಕುಣತದ ವೇಳೆ ನೆರೆದಿದ್ದ ಗಣ್ಯರು ಕುಣಿದು ಕುಪ್ಪಳಿಸಿದರು. ಕನ್ನಡ ನಾಡು-ನುಡಿ ಸೇವೆಯಲ್ಲಿರುವ ಜಯ ಕರ್ನಾಟಕ ಸಂಘದವರು ಕಿರವತ್ತಿಯಲ್ಲಿ ಕನ್ನಡ ರಾಜ್ಯೋತ್ಸವದ…

ಮಿಸಳ್ ಬಾಜಿ ಜೊತೆ ಮೊಸರು ವಡೆ | ಆಡಳಿತ ಆಯೋಗದ ಅಧ್ಯಕ್ಷರ ಬಾಯಲ್ಲಿ ನೀರುಣಿಸಿದ ತೆಳ್ಳವು ದೋಸೆ!

ಹೊನ್ನಾವರ: ರಾಜ್ಯ ಆಡಳಿತ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಹಳ್ಳಿ ಸೊಗಡಿನ `ದುರ್ಗಾ ಕೆಫೆ’ಗೆ ತೆರಳಿ ಅಲ್ಲಿನ ತಿಂಡಿಗಳನ್ನು ಸವಿದರು. ಮೊದಲು ಮೊಸರು ವಡೆಯ ಸೇವಿಸಿದ ಅವರು ನಂತರ ಮಿಸಲ್ ಬಾಜಿ ರುಚಿ ನೋಡಿದರು. ಇದಾದ ಮೇಲೆ `ತೆಳ್ಳವು ದೋಸೆ’…

ನೌಕಾನೆಲೆಯಲ್ಲಿ ಅವಘಡ: ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

ಕಾರವಾರ: ಭಾರತೀಯ ನೌಕಾನೆಲೆಯಲ್ಲಿ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದ್ದು, ಕೆಲಸದ ಅವಧಿಯಲ್ಲಿ 4ನೇ ಮಹಡಿಗೆ ತೆರಳಿದ್ದ ಕಾರ್ಮಿಕ ಅಲ್ಲಿಂದ ಕಾಲುಜಾರಿ ಬಿದ್ದು ಸಾವನಪ್ಪಿದ್ದಾನೆ. ಪ್ರಸ್ತುತ ಕಾರ್ಮಿಕನ ಶವ ಶವ ಪತಂಜಲಿ ಆಸ್ಪತ್ರೆಯಲ್ಲಿದೆ. ಜಾರ್ಖಂಡ್ ಮೂಲದ ಮಹತಾಬ ಅನ್ಸಾರಿ (27) ಅಮದಳ್ಳಿ ಗಾಂವಕಾರವಾಡದಲ್ಲಿ…

SSLC ಪಾಸ್ ಆದವರಿಗೆ ಸುವರ್ಣ ಅವಕಾಶ: ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ!

ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿಯೂ ಸ್ವ ಉದ್ಯೋಗ ಮಾಡಲು ಆಸಕ್ತಿ ಹೊಂದಿದವರಿಗೆ ಅಂಚೆ ಇಲಾಖೆ ಅವಕಾಶವೊಂದನ್ನು ತೆರೆದಿಟ್ಟಿದೆ. ಅಂಚೆ ಜೀವ ವಿಮೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಹಾಗೂ ವಿಮಾ ಸೇವೆ ಒದಗಿಸುವ ಮೂಲಕ ಆದಾಯಗಳಿಸುವ ದಾರಿಯನ್ನು ಅಂಚೆ ಇಲಾಖೆ…

ಅಗ್ನಿ ಅನಾಹುತಕ್ಕೆ ಕರಕಲಾದ ಬಡ ಮಕ್ಕಳ ಮನೆ

ಶಿರಸಿ: ಆಕಸ್ಮಿಕ ಅಗ್ನಿ ಅವಘಡದ ಪರಿಣಾಮ ಬಡ ಕುಟುಂಬ ಬೀದಿಗೆ ಬಿದ್ದಿದೆ. ತಡರಾತ್ರಿ ನಡೆದ ದುರಂತದಲ್ಲಿ ನಾಗವೇಣಿ ಉಪ್ಪಾರ್ ಎಂಬಾತರ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಶಿರಸಿಯ ಗಿಡಮಾವಿನಕಟ್ಟೆ ಬಳಿ ನಾಗವೇಣಿ ಮಹೇಶ ಉಪ್ಪಾರ್ ತಮ್ಮ ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು.…

ಪೊಲೀಸ್ ಕಾರಿಗೆ ಗುದ್ದಿದ ಬೈಕು: ಇಬ್ಬರಿಗೆ ಗಾಯ

ಅಂಕೋಲಾ: ಕಾರವಾರದಿಂದ ಅಂಕೋಲಾ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ಅಜಿತ್ ನಾಯ್ಕ ಎಂಬಾತರು ಎದುರಿನಿಂದ ಬರುತ್ತಿದ್ದ ಪೊಲೀಸ್ ನಿರೀಕ್ಷಕ ಪ್ರಕಾಶ ಯಾತನೂರು ಎಂಬಾತರ ಕಾರಿಗೆ ಬೈಕ್ ಗುದ್ದಿದ್ದು, ಈ ಅಪಘಾತದಲ್ಲಿ ಬೈಕಿನ ಮೇಲೆ ಹೊರಟಿದ್ದ ಇಬ್ಬರು ಗಾಯಗೊಂಡಿದ್ದಾರೆ. ಅಜಿತ್ ಗಣಪತಿ ನಾಯ್ಕ…

ಸರ್ಕಾರಿ ಕಚೇರಿಗೆ ರೈತನೇ ಒಡೆಯ!

ಕುಮಟಾ: ಸರ್ಕಾರಿ ಯೋಜನೆಗೆ ಭೂಮಿ ಕೊಟ್ಟ ರೈತನಿಗೆ ಪರಿಹಾರ ನೀಡದ ಕಾರಣ ನ್ಯಾಯಾಲಯ ಕುಮಟಾ ಉಪವಿಭಾಗಾಧಿಕಾರಿ ಕಚೇರಿಯನ್ನು ಜಪ್ತು ಮಾಡಲು ಆದೇಶಿಸಿದೆ. ಈ ಹಿನ್ನಲೆ ಸಂತ್ರಸ್ತ ರೈತ ಉದಯ ಬಾಳಗಿ ನ್ಯಾಯಾಲಯದ ಸಿಬ್ಬಂದಿ ಜೊತೆ ತೆರಳಿ ಕಚೇರಿಯ ಕಂಪ್ಯುಟರ್ ಹಾಗೂ ಪೀಠೋಪಕರಣಗಳನ್ನು…

ಹಗರಣಗಳಿಗೆ ಹೊಣೆ ಯಾರು? ನಾಗರಿಕನ ಪ್ರಶ್ನೆಗೆ ಬೇಕು ಉತ್ತರ

ಯಲ್ಲಾಪುರ: ರಾಜ್ಯಬಾರ ನಡೆಸುತ್ತಿರುವ ಸಚಿವರ ಮೇಲೆ ಸಾಲು ಸಾಲು ಹಗರಣಗಳ ಆರೋಪವಿದ್ದು, ಭ್ರಷ್ಟ ಸಚಿವರ ಪಟ್ಟಿ ಬೆಳೆಯುತ್ತಿರುವುದಕ್ಕೆ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಕಳವಳ ವ್ಯಕ್ತಪಡಿಸಿದ್ದಾರೆ. `ಮೊದಲು ಅಪೆಕ್ಸ ಬ್ಯಾಂಕ್ ಹಗರಣದಲ್ಲಿ ಸಹಕಾರ ಸಚಿವ ಕೆ ಎನ್ ರಾಜಣ್ಣ ಹೆಸರು…

ಹೆಸರಿಗೆ ಮೆಕಾನಿಕ್.. ಆದರೆ, ಬೈಕ್ ಓಡಿಸಲು ಬರಲ್ಲ!

ಶಿರಸಿ: ನೆಂಟರ ಮನೆಗೆ ಬಂದಿದ್ದ ವಾಸುದೇವ ಶೇಟ್ ಅವರಿಗೆ ಬೈಕ್ ಗುದ್ದಿದ್ದರಿಂದ ಅವರ ತಲೆ ಹಾಗೂ ಮುಖಕ್ಕೆ ಭಾರೀ ಪ್ರಮಾಣದಲ್ಲಿ ಪೆಟ್ಟಾಗಿದೆ. ಅಕ್ಟೊಬರ್ 30ರಂದು ಸಿದ್ದಾಪುರದ ಹಿತ್ಲಗೋಡಿನ ವಾಸುದೇವ ನಾಗೇಶ ಶೇಟ್ (65) ಅವರು ತಮ್ಮ ಪತ್ನಿ ಜಯಾ ಜೊತೆ ಬನವಾಸಿ…

ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಮಾಯ!

ಹೊನ್ನಾವರ: ದುರ್ಗಾಕೇರಿಯಲ್ಲಿ ಮನೆ ಮುಂದಿನ ಗೇಟ್ ಬಳಿ ನಿಲ್ಲಿಸಿಟ್ಟ ಸ್ಕೂಟರ್ ಕಳ್ಳತನವಾಗಿದೆ. ದುರ್ಗಾಕೇರಿಯ ಗಣಪತಿ ಸತ್ಯನಾರಾಯಣ ಶೇಟ್ (30) ಅವರು ಟಿವಿಎಸ್ ಜುಪಿಟರ್ ಸ್ಕೂಟರ್ ಹೊಂದಿದ್ದರು. ಅಕ್ಟೊಬರ್ 27ರಂದು ರಾತ್ರಿ 9 ಗಂಟೆಗೆ ಅದನ್ನು ಮನೆ ಮುಂದಿನ ಗೇಟಿನ ಬಳಿ ನಿಲ್ಲಿಸಿದ್ದರು.…

You cannot copy content of this page