6
ಬಾಡಿಗೆ ವಿಷಯ: ರಿಕ್ಷಾ ಚಾಲಕರ ನಡುವೆ ಬಡಿದಾಟ!

ಅಂಕೋಲಾ: ಅವರ್ಸಾದ ಗೂಡ್ಸ ರಿಕ್ಷಾ ಚಾಲಕರ ನಡುವೆ ಪಾಳಿ ಹಚ್ಚುವ ವಿಷಯದಲ್ಲಿ ವಾಗ್ವಾದ ನಡೆದಿದ್ದು, ಅದು ಹೊಡೆದಾಟದ ಸ್ವರೂಪ ಪಡೆದಿದೆ. ಸಕಲಬೇಣದ ಸಂದೀಪ ಉಮೇಶ ತಳ್ಳೇಕರ್ ಅವರ ಮೇಲೆ ಕಾತ್ಯಾಯನಿ ದೇವಾಲಯ ಬಳಿಯ ಲಕ್ಷ್ಮಣ ಬೊಮ್ಮಯ್ಯ ನಾಯಕ ರಾಡಿನಿಂದ ಹೊಡೆದಿದ್ದಾರೆ. ಆಗ…

ಮಂಜುಗುಣಿ-ಗoಗಾವಳಿ ಸೇತುವೆ ಕೆಲಸ ಅಪೂರ್ಣ

ಕಾರವಾರ: ಅಂಕೋಲಾ-ಕುಮಟಾ ನಡುವಿನ ಸಂಪರ್ಕಕೊoಡಿಯಾದ ಮಂಜುಗುಣಿ-ಗoಗಾವಳಿ ಸೇತುವೆ ಕಾಮಗಾರಿ ಶುರುವಾಗಿ ಆರು ವರ್ಷ ಕಳೆದರೂ ಕೆಲಸ ಪೂರ್ಣಗೊಂಡಿಲ್ಲ. ಅದಾಗಿಯೂ ಅಧಿಕಾರಿಗಳು ವಾಹನ ಓಡಾಟಕ್ಕೆ ಅವಕಾಶ ನೀಡಿದ್ದು, ಕೂಡಲೇ ಬಾಕಿ ಕಾಮಗಾರಿ ಮುಗಿಸಬೇಕು ಎಂದು ಜಯಕರ್ನಾಟಕ ಜನಪರ ವೇದಿಕೆ ಆಗ್ರಹಿಸಿದೆ. `ಈ ಸೇತುವೆ…

ದನಕ್ಕೆ ಬೆದರಿ ಗದ್ದೆಗೆ ಹಾರಿದ ಲಾರಿ!

ಯಲ್ಲಾಪುರ: ಇಡಗುಂದಿ ರಾಮಲಿಂಗೇಶ್ವರ ದೇವಾಲಯದ ಬಳಿ ಲಾರಿಯೊಂದು ಗದ್ದೆಗೆ ಬಿದ್ದಿದೆ. ಮಹಾರಾಷ್ಟ್ರದ ರುಶಿಕೇಶ್ ಪಿಸಾಲ್ ಎಂಬಾತರ ಲಾರಿಯಲ್ಲಿ ಔಷಧಿ ಸರಬರಾಜಾಗುತ್ತಿತ್ತು. ಹುಬ್ಬಳ್ಳಿ – ಅಂಕೋಲಾ ಮಾರ್ಗವಾಗಿ ಈ ಲಾರಿ ಸಂಚರಿಸುತ್ತಿತ್ತು. ನ 9ರಂದು ರಾತ್ರಿ ಸಂತೋಷ ಪೆರಾಲ್ ಎಂಬಾತ ಔಷಧಿ ತುಂಬಿದ…

ಪೊಲೀಸ್ ಠಾಣೆಯಲ್ಲಿ ಬಾಲ್‌ಪೆನ್ನುಗಳ ರಾಶಿ!

ಉತ್ತರ ಕನ್ನಡ ಜಿಲ್ಲೆಯಲ್ಲಿನ ಮಟ್ಕಾ ಅಡ್ಡೆಗಳ ಮೇಲೆ ಪೊಲೀಸರ ದಾಳಿ ಮುಂದುವರೆದಿದೆ. ಶಿರಸಿಯ ಬನವಾಸಿ, ಕುಮಟಾ ತಾಲೂಕಿನ ಗೋಕರ್ಣ ಹಾಗೂ ಯಲ್ಲಾಪುರದ ಉಪಳೇಶ್ವರದಲ್ಲಿ ಜೂಜಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಸೋಮವಾರ ಸಂಜೆ ಬನವಾಸಿ ಬಳಿಯ ಚಂದ್ರು ಗಣಪತಿ ನಾಯ್ಕ…

ನಗರವಾಸಿಗಳಿಗೆ ವನ್ಯಜೀವಿ ಕಾಟ: ಆನೆ ಹೊಯ್ತು.. ಚಿರತೆ ಬಂತು!

ಶಿರಸಿ: ಅಧಿಕ ಪ್ರಮಾಣದಲ್ಲಿ ಕಾಡು ಹೊಂದಿರುವ ಉತ್ತರ ಕನ್ನಡ ಜಿಲ್ಲೆಗೆ ವನ್ಯಜೀವಿಗಳು ಹೊಸತಲ್ಲ. ಆದರೆ, ಕಾಡಿನಲ್ಲಿರಬೇಕಾದ ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿರುವುದನ್ನು ಜನರಿಂದ ಸಹಿಸಿಕೊಳ್ಳಲಾಗುತ್ತಿಲ್ಲ! ಕಳೆದ ಮೂರು ದಿನಗಳ ಹಿಂದೆ ಶಿರಸಿ ಸುತ್ತಲಿನ ಪ್ರದೇಶದಲ್ಲಿ ಕಾಡಾನೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಅರಣ್ಯ…

ತರಬೇತಿ ಜೊತೆ ಸಂಬಳ: ಪತ್ರಕರ್ತರಾಗಲು ಇಲ್ಲಿದೆ ಒಂದು ಅವಕಾಶ!

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಪರಿಶಿಷ್ಟ್ಟ ಜಾತಿಯ ಅಭ್ಯರ್ಥಿಗಳಿಗೆ 12 ತಿಂಗಳ ಅವಧಿಗೆ ಅಪ್ರೆಂಟಿಸ್ ತರಬೇತಿ ನೀಡುತ್ತಿದೆ. ಇದಕ್ಕೆ ಅರ್ಜಿ ಸಲ್ಲಿಸಲು ನ 19ಕ್ಕೆ ಕೊನೆ ದಿನ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು…

ಗನ್ ಲೈಸನ್ಸ’ಗೆ ಈ ತರಬೇತಿ ಕಡ್ಡಾಯ!

ಹೊನ್ನಾವರ: ಆಯುಧ ಪರವಾನಿಗೆ ಪಡೆಯುವ ಪ್ರತಿಯೊಬ್ಬರಿಗೂ ನಾಗರಿಕ ಬಂದೂಕು ತರಬೇತಿ ಕಡ್ಡಾಯ. ಪೊಲೀಸ್ ಇಲಾಖೆಯಿಂದ ಆಗಾಗ ಸಾರ್ವಜನಿಕರಿಗೆ ಬಂದೂಕು ತರಬೇತಿ ನೀಡಲಾಗುತ್ತಿದ್ದು, ಪೊಲೀಸ್ ಹಾಗೂ ಸಾರ್ವಜನಿಕರ ನಡುವೆ ಸೌಹಾರ್ದತೆ ಹೆಚ್ಚಿಸಲು ಸಹ ಈ ತರಬೇತಿ ಸಹಾಯಕ. ಪ್ರಸ್ತುತ ಭಟ್ಕಳ ಉಪವಿಭಾಗದ ವ್ಯಾಪ್ತಿಯ…

ಜೈಲು ಹಕ್ಕಿಗಳಿಗೆ ಸೊಳ್ಳೆ ಕಾಟ!

ಕಾರವಾರ: ಜಿಲ್ಲಾ ಕಾರಾಗೃಹದಲ್ಲಿರುವ ಖೈದಿಗಳು `ತಮಗೆ ಸೊಳ್ಳೆ ಕಾಟದಿಂದ ಮುಕ್ತಿ ಕೊಡಿ’ ಎಂದು ಮಾನವ ಹಕ್ಕು ಆಯೋಗದ ಮೊರೆ ಹೋಗಿದ್ದಾರೆ. ರಾಜ್ಯ ಮಾನವ ಹಕ್ಕು ಆಯೋಗದ ನ್ಯಾಯಾಂಗ ಸದಸ್ಯ ಎಸ್ ಕೆ ವಂತಿಕೋಡಿ ಸೋಮವಾರ ಜೈಲಿಗೆ ಭೇಟಿ ನೀಡಿದಾಗ ಅಲ್ಲಿದ್ದವರು ಅಳಲು…

ಅಡಿಕೆ ವ್ಯಾಪಾರಿಗೆ ಆತಂಕ | ಫಸಲು ಕೊಯ್ಲಿಗೆ ರಾತ್ರಿ ಬಂದ ಕೊನೆಗೌಡ ಯಾರು ಗೊತ್ತಾ?

ಶಿರಸಿ: ತಿಲಕನಗರದ ಅಡಿಕೆ ವ್ಯಾಪಾರಿ ಲೋಕೇಶ ಹೆಗಡೆ ಅವರ ಮನೆ ಮುಂದೆ ಬೆಳೆದಿದ್ದ ಅಡಿಕೆ ಫಸಲು ಕಳ್ಳನ ಪಾಲಾಗಿದೆ! ನ 30ರ ರಾತ್ರಿ ಅವರ ಮನೆ ಕಪೌಂಡ್ ಹಾರಿದ ಕಳ್ಳ ಯಾವುದೇ ಅಳುಕಿಲ್ಲದೇ ಅಲ್ಲಿದ್ದ ಫಸಲು ಕದ್ದಿದ್ದಾನೆ. ಎಂಟು ವರ್ಷದ ಹಿಂದೆ…

ಬೈಕಿಗೆ ಗುದ್ದಿದ ಲಾರಿ: ಸವಾರನ ಸ್ಥಿತಿ ಗಂಭೀರ

ದಾoಡೇಲಿ: ಆಂದ್ರಪ್ರದೇಶ ನೊಂದಣಿಯ ಲಾರಿಯೊಂದು ಚಲಿಸುತ್ತಿದ್ದ ಬೈಕಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳು ಬಸವರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನ 10ರ ರಾತ್ರಿ ತಾಟಗೇರಾದ ಬಸವರಾಜ ದೇವಾನೆ ಕಕಡೊಳ್ಳಿ ಅವರು ಬೈಕಿನಲ್ಲಿ ಮನೆ ಕಡೆ ಹೊರಟಿದ್ದರು. ತಾಟಗೇರ…

You cannot copy content of this page