ಡಿಕೆಶಿ ಮತ್ತೆ ಮುಂದಿನ ಬಾರಿಯೂ ಸಿಎಂ ಆಗಲಿದ್ದಾರೆ: ನೆಹರು ಓಲೆಕಾರ್
ಹಾವೇರಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರು ಕಾಂಗ್ರೆಸ್ ಸರ್ಕಾರವನ್ನು ಹೊಗಳುತ್ತಿದ್ದಾರೆ ಎಂದು ಮಾಜಿ ಶಾಸಕ ನೆಹರು ಓಲೆಕಾರ್ ಹೇಳಿದ್ದಾರೆ. ಇಡಿ ದಾಳಿ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹಲವು…
“ಸಿಎಂಗೆ ಹಾವೇರಿ ಕಾಣಲಿಲ್ವಾ?”ಮಾಜಿ ಶಾಸಕ ಅರುಣ್ ಕುಮಾರ್
ಕಾವೇರಿ ನೀರು, ಬರಗಾಲ ವಿಚಾರ: ಸರ್ಕಾರದ ವಿರುದ್ಧ ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ಆಕ್ರೋಶ ಹಾವೇರಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ, ಬರಗಾಲ ಘೋಷಣೆ ಹಾಗೂ ಬಿಜೆಪಿ ಪಾದಯಾತ್ರೆ ಕುರಿತು ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ಹಲವು…
ED ದಾಳಿ ಖಂಡಿಸಿ ಹಾವೇರಿಯಲ್ಲಿ ನಾಳೆ ಕಾಂಗ್ರೆಸ್ ಪ್ರತಿಭಟನೆ.
ಸತೀಶ್ ಜಾರಕಿಹೊಳಿ ಮನೆ ಮೇಲೆ ED ದಾಳಿ ಖಂಡಿಸಿ ನಾಳೆ ಹಾವೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ಹಾವೇರಿ: ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ **ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿರುವ…
ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!
ರಾಣೆಬೆನ್ನೂರು: ಮೋಡ ಬಿತ್ತನೆ ವಿಚಾರವಾಗಿ ಬಿಜೆಪಿ ನಾಯಕರಿಗೆ ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಟಾಂಗ್ ನೀಡಿದ್ದಾರೆ. ರೈತರ ವಿಚಾರದಲ್ಲಿ ರಾಜಕೀಯ ಮಾಡದೆ, ಮೋಡ ಬಿತ್ತನೆಗೆ ಸಂಬಂಧಿಸಿದ ಮಾನದಂಡಗಳನ್ನು ಸಡಿಲಗೊಳಿಸುವಂತೆ ತಮ್ಮ ಸರ್ಕಾರದ ಬಳಿ ಮನವಿ ಮಾಡುವಂತೆ ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಾರೆ.…
ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ
ಹಾವೇರಿ: ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ವಾದ ಮಂಡಿಸುವಲ್ಲಿ ಎಡವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾವೇರಿ ನೀರನ್ನು ಮುಖ್ಯವಾಗಿ ಕುಡಿಯುವ ಉದ್ದೇಶಕ್ಕೆ ಬಳಸಲಾಗುತ್ತಿದೆ. ಆದರೆ ತಮಿಳುನಾಡು…
ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್
ಹಾವೇರಿ: ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಿ.ಸಿ. ಪಾಟೀಲ್ ಅವರು ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಕುರಿತು ಮಾತನಾಡಿದ್ದು, ನಾಗೇಂದ್ರ ವಿಚಾರವನ್ನೇ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ರಾಜ್ಯಾದ್ಯಂತ ಬರ ಪರಿಸ್ಥಿತಿ ಉಂಟಾಗಿದ್ದು, ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.…
ಸಭಾಪತಿಯಾದ ಬಳಿಕ ಸವಣೂರಿಗೆ ಸಲೀಂ ಅಹ್ಮದ್ ಮೊದಲ ಭೇಟಿ
ಸವಣೂರು: ವಿಧಾನ ಪರಿಷತ್ ಸಭಾಪತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಲೀಂ ಅಹ್ಮದ್ ಅವರು ಹಾವೇರಿ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿದರು. ಸವಣೂರು ಪಟ್ಟಣಕ್ಕೆ ಆಗಮಿಸಿದ ಅವರು ಸವಣೂರು ಹಾಗೂ ಮರಘಾ ಮಠ ಸೇರಿದಂತೆ ವಿವಿಧ ಮಠಗಳಿಗೆ ಭೇಟಿ ನೀಡಿ ಮಠಾಧೀಶರ…
ರೈತರ ನೆರವಿಗೆ “ರಾಣೇಬೆನ್ನೂರು ಕಾ ರಾಜಾ”
ರೈತರ ನೆರವಿಗೆ ‘ರಾಣೇಬೆನ್ನೂರು ಕಾ ರಾಜಾ’ ಮಹಾಗಣಪತಿ ಉತ್ಸವದ ವಿಶೇಷ ಸಂಕಲ್ಪ ರಾಣೇಬೆನ್ನೂರು: ರೈತರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ರಾಣೇಬೆನ್ನೂರಿನ ವಂದೇಮಾತರಂ ಸ್ವಯಂಸೇವಾ ಸಂಸ್ಥೆ ವತಿಯಿಂದ ಈ ಬಾರಿ ವಿನೂತನವಾಗಿ ಗಣೇಶೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಕಳೆದ 17 ವರ್ಷಗಳಿಂದ ‘ರಾಣೇಬೆನ್ನೂರು ಕಾ…
ಗುರುರಾಯಪಟ್ಟಣದ 150 ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವ: ಹಕ್ಕುಪತ್ರ ವಿತರಿಸಿದ ಶಾಸಕ ಮಾನೆ ಶ್ರೀನಿವಾಸ
ಹಾನಗಲ್: ಹಲವು ದಶಕಗಳಿಂದ ಮನೆ ಮಾಲಿಕತ್ವದ ಹಕ್ಕಿಲ್ಲದೆ ಆತಂಕದಲ್ಲಿದ್ದ ಗುರುರಾಯಪಟ್ಟಣ ಗ್ರಾಮದ 150 ಕುಟುಂಬಗಳಿಗೆ ಇದೀಗ ಹೊಸ ಬೆಳಕು ಮೂಡಿದೆ. ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಮಾನೆ ಶ್ರೀನಿವಾಸ ಅವರು 150 ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವದ ಹಕ್ಕುಪತ್ರಗಳನ್ನು…
ಅಪಘಾತಕ್ಕೆ ಕಾರಣವಾಯ್ತು ಹೆದ್ದಾರಿ ಪಕ್ಕ ನಿಂತ ಲಾರಿ: ಎರಡು ಲಾರಿ ನಡುವೆ ಸಿಕ್ಕಿಬಿದ್ದ ಟೆಂಪೋ ಟ್ರಾವೆಲರ್ ಅಪ್ಪಚ್ಚಿ!
ಯಲ್ಲಾಪುರದ ಇಡಗುಂದಿ ಬಳಿ ಹೆದ್ದಾರಿ ಅಂಚಿನಲ್ಲಿ ಲಾರಿ ನಿಂತಿದ್ದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಂಗಳವಾರ ಮಧ್ಯಾಹ್ನ ನಡೆದ ಈ ಅಪಘಾತದಲ್ಲಿ 14 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಬಳ್ಳಾರಿ ಸಂಜಯಗಾoಧಿ ಡಿಪ್ಲೊಮೊ ಕಾಲೇಜಿನ ವಿದ್ಯಾರ್ಥಿಗಳು ಮುರುಡೇಶ್ವರ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿಂದ ಮರಳುವಾಗ…
















