6
ಕಾರವಾರದ ಪೋರಿ.. ಗೋವಾಗೆ ಪರಾರಿ!

ಕಾರವಾರ: ಗೋವಾದ ಟಿಸ್ಕ್ ಉಸ್ಗಾವೊದಲ್ಲಿ ಬಾಲ್ಯ ವಿವಾಹ ನಡೆದಿದೆ. ಕಾರವಾರದ ಬಾಲಕಿಯನ್ನು ಗೋವಾಗೆ ಕರೆದೊಯ್ದು ಮದುವೆ ಮಾಡಿಸಲಾಗಿದೆ. ಈ ಬಗ್ಗೆ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಗೋವಾದ ಪೋಂಡಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಎoಟು ದಿನಗಳ ಹಿಂದೆಯೇ ಈ ವಿವಾಹ…

1 ರೂಪಾಯಿಗೆ 70 ರೂ: ಮೈಕ್ ಹಿಡಿದು ಕೂಗುವುದು ಮಾತ್ರ ಬಾಕಿ!

ಭಟ್ಕಳ: ಬಸ್ ನಿಲ್ದಾಣದ ಬಳಿ ಸಾರ್ವಜನಿಕರ ಗುಂಪು ರಚಿಸಿಕೊಂಡು 1 ರೂಪಾಯಿಗೆ 70ರೂ ನೀಡುವುದಾಗಿ ವಾಗ್ದಾನ ನೀಡುತ್ತಿದ್ದ ಭಾಸ್ಕರ್ ಬಿ ಎಸ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಮುಟ್ಟಳ್ಳಿಯ ಭಾಸ್ಕರ ಬಿ ಎಸ್ ಪುರಸಭೆ ಎದುರಿನ ಹಳೆ ಬಸ್ ನಿಲ್ದಾಣದ ಬಳಿ…

ಪಿಗ್ಮಿ ಕಲೆಕ್ಟರ್’ಗೆ ಗುದ್ದಿದ ಬೈಕು

ಕುಮಟಾ: ಪಿಗ್ನಿ ಕಲೆಕ್ಟರ್ ಗೋಪಾಲ ಶೇಟ್ ಅವರಿಗೆ ಅಪಘಾತವಾಗಿದೆ. ಗಾಯಗೊಂಡ ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆರವಟ್ಟಾದ ಗೋಪಾಲ ನಾರಾಯಣ ಶೇಟ್ (58) ಅವರು ನ 12ರ ರಾತ್ರಿ ಬಸ್ ನಿಲ್ದಾಣದ ಕಡೆ ಬೈಕ್ ಓಡಿಸುತ್ತಿದ್ದರು. ಅವರು ಪಾಂಡುರoಗ ಹೊಟೇಲ್…

ಪೂಜಾರಿಗೆ ಸಿಗದ ತಂಗಿಮನೆ ತುತ್ತಿನ ಭಾಗ್ಯ!

ಶಿರಸಿ: ತಂಗಿ ಮನೆಗೆ ಹೋಗಿದ್ದ ರವಿ ಪೂಜಾರಿ (36) ಸಾವನಪ್ಪಿದ್ದಾರೆ. ಊಟ ಮಾಡುವುದಕ್ಕಾಗಿ ಕೈ ಕಾಲು ತೊಳೆದು ಕೂತಿದ್ದ ಅವರು ಎದೆನೋವಿನಿಂದ ಕೊನೆ ಉಸಿರೆಳೆದರು. ಸರನಗದ್ದೆ ಬಳಿಯ ಕೊಡ್ನಗದ್ದೆ ತಟ್ಟಿಗದ್ದೆಯ ರವಿ ಬಾಬು ಪೂಜಾರಿ (36) ನ 19ರ ಮಧ್ಯಾಹ್ನ ತಂಗಿ…

ಮದ್ಯದ ದಾಸ | 25ರ ವಯಸ್ಸಿಗೆ ಮುಗಿದ ಆಯಸ್ಸು!

ಶಿರಸಿ: ಮರಾಠಿಕೊಪ್ಪದ ಸುನೀಲ ಹರಿಜನ ತಮ್ಮ 25ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ವಿಪರೀತ ಮದ್ಯ ಸೇವನೆ ಪರಿಣಾಮ ಅವರು ಸಣ್ಣ ವಯಸ್ಸಿನಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ಶಿರಸಿ ಮರಾಠಿಕೊಪ್ಪ ಪುಟ್ಟನಮನೆಯ ಸುನೀಲ ಗೋಪಾಳ ಹರಿಜನ ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ, ಸರಾಯಿ ಕುಡಿಯುವುದಕ್ಕಾಗಿ ಅವರು…

ಹೊಲಿಗೆ ಶಿಬಿರಕ್ಕೆ ಚಾಲನೆ: ಮಹಿಳಾ ಸ್ವಾವಲಂಬನೆಗೆ ರೋಟರಿ ಗವರ್ನರ್ ಕರೆ

ಕಾರವಾರ: ರೋಟರಿ ಪ್ರಾಂತಪಾಲ ರೊಟೇರಿಯನ್ ಶರದ್ ಪೈ ಸೋಮವಾರ ಕಾರವಾರಕ್ಕೆ ಆಗಮಿಸಿದ್ದು, ಈ ವೇಳೆ ರೋಟರಿ ಕ್ಲಬ್ ಮಹಿಳೆಯರಿಗಾಗಿ ಆಯೋಜಿಸಿದ ಹೊಲಿಗೆ ಹಾಗೂ ಕಸೂತಿ ಶಿಬಿರಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು `ಶಾಂತಿ ನಿರ್ಮಾಣ, ಸಂಘರ್ಷ ತಡೆಗಟ್ಟುವಿಕೆ, ರೋಗ…

ದತ್ತ ಜಯಂತಿ | ಸುಂದರ ಪರಿಸರದಲ್ಲಿ ಭವ್ಯ ಮಂದಿರ: ಲೋಕಾರ್ಪಣೆಗೆ ದಿನಗಣನೆ!

ಯಲ್ಲಾಪುರ: ನಾಯ್ಕನಕೆರೆ ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ದತ್ತಮಂದಿರ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಡಿಸೆಂಬರ್ 14ರ ದತ್ತ ಜಯಂತಿ ದಿನ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಈ ಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಡಿಸೆಂಬರ್ 13ರಿಂದ 15ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗರ್ಭಗುಡಿಯ ಲೋಕಾರ್ಪಣಾ…

ಮಣಿಪಾಲ್’ಗೆ ಹೋದರೂ ಬದುಕದ ಮೀನುಗಾರ

ಅಂಕೋಲಾ: ಶಿರೂರಿನ ಸಿಮೆಂಟ್ ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದ ಸಂತೋಷ ಹರಿಕಂತ್ರ (34) ದನ ಅಡ್ಡ ಬಂದ ಪರಿಣಾಮ ಬಿದ್ದು ಸಾವನಪ್ಪಿದ್ದಾರೆ. ಮಾದನಗೇರಿಯ ಸಂತೋಷ ಹರಿಕಂತ್ರ ಅವರು ಮೀನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದರು. ನ 17ರಂದು ಅವರು ಶಿರೂರು ಭಾಗದಲ್ಲಿ ವೇಗವಾಗಿ ಬೈಕ್…

ಕೊಂಕಣ ರೈಲ್ವೆ | ಮೊಬೈಲ್ ಕಳ್ಳರಿದ್ದಾರೆ ಎಚ್ಚರ!

ಕುಮಟಾ: ಕೊಂಕಣ ರೈಲ್ವೆ ಪ್ರಯಾಣಿಕರ ಮೊಬೈಲ್ ಕಳ್ಳತನ ನಡೆದ ಬಗ್ಗೆ ದಾಖಲಾದ ಮತ್ತೆರಡು ಪ್ರಕರಣಗಳು ಜಿಲ್ಲಾ ಪೊಲೀಸ್ ಘಟಕಕ್ಕೆ ವರ್ಗವಾಗಿದೆ. ಅಕ್ಟೊಬರ್ 20ರಂದು ನೇತ್ರಾವತಿ ಎಕ್ಸಪ್ರೆಸ್’ನಲ್ಲಿ ಕೇರಳದ ಆಕಾಶ ಬಾಲಕೃಷ್ಣನ್ ಸಂಚರಿಸುತ್ತಿದ್ದರು. ಕುಮಟಾ ರೈಲು ನಿಲ್ದಾಣದ ಬಳಿ ಅವರ ಮೊಬೈಲನ್ನು ಕಳ್ಳರು…

ತಾ ಪಂ ಕಚೇರಿ: ಬೀಡು ಬಿಟ್ಟಿರುವ ಅಧಿಕಾರಿ-ಸಿಬ್ಬಂದಿ ವರ್ಗಾವಣೆಗೆ ಆಗ್ರಹ

ಯಲ್ಲಾಪುರ: `ತಾಲೂಕು ಪಂಚಾಯತ ಕಚೇರಿಗಳಲ್ಲಿ ಅನೇಕ ವರ್ಷಗಳಿಂದ ಬೀಡು ಬಿಟ್ಟಿರುವ ಅಧಿಕಾರಿ-ಸಿಬ್ಬಂದಿಯನ್ನು ಬೇರೆ ಕಡೆ ವರ್ಗಾಯಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಧೀರಜ ತಿನ್ನೇಕರ್ ಆಗ್ರಹಿಸಿದ್ದಾರೆ. ಈ ಕುರಿತು ತಾ ಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಅವರು ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಿಗೆ…

You cannot copy content of this page