ಮದುವೆ ಮರುದಿನವೇ ಕರೆಯೋಲೆ: ಮದರಂಗಿ ಬಣ್ಣ ಮಾಸುವ ಮುನ್ನವೇ ಈ ಯೋಧ ಕರ್ತವ್ಯಕ್ಕೆ ಹಾಜರು!
ಛತ್ತಿಸ್‌ಘಡದಲ್ಲಿನ ಬೆಟಾಲಿಯನ್’ನಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಸಿದ್ದಾಪುರದ ಯೋಧ ಜಯಂತ್ ಅವರಿಗೆ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಕರೆ ಬಂದಿದೆ. ಮದುವೆ ಮುಗಿಸಿ ಪತ್ನಿ ಜೊತೆ ಊಟಿಗೆ ಹೊರಟಿದ್ದ ಅವರು ಹನಿಮೂನ್ ಮೊಟಕುಗೊಳಿಸಿ ದೇಶ ಸೇವೆಗೆ ಹಾಜರಾಗಿದ್ದಾರೆ. ಮೇ 1ರಂದು ಜಯಂತ್ ಅವರಿಗೆ ಮದುವೆಯಾಯಿತು.…
ದೇಶಸೇವೆಗೆ ಸಿದ್ದರಾಗಿ.. ನೀವು ಸೈನಿಕರಾಗಿ!
ಯುದ್ಧದಂಥಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಇದೀಗ ನಾಗರಿಕ ಸೈನಿಕರ ಸಹಾಯ ಯಾಚಿಸಿದೆ. ಸಿವಿಲ್ ಡಿಫೆನ್ಸ್ ಆಕ್ಟ್ 1968ರಲ್ಲಿ ಪ್ರತಿ ನೂರು ನಾಗರಿಕರಿಗೆ ಒಬ್ಬರಂತೆ ಸ್ವಯಂ ಸೇವಕ ಸೈನಿಕರ ನೋಂದಣಿಗೆ ಅವಕಾಶವಿದ್ದು, ದೇಶದ ರಕ್ಷಣೆಗಾಗಿ ನಾವು-ನೀವೆಲ್ಲರೂ ಇದೀಗ ಸೈನಿಕರಾಗಿ ಕರ್ತವ್ಯ ನಿಭಾಯಿಸಲು…
ರಜೆಯಲ್ಲಿದ್ದ ಸೈನಿಕರಿಗೆ ಸರ್ಕಾರದ ಕರೆಯೋಲೆ!
ಪಾಕಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಭಾರತ ದಾಳಿ ನಡೆಸಿದ್ದು, ಯುದ್ಧ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆ ರಜೆ ಮೇಲೆ ಊರಿಗೆ ಬಂದಿದ್ದ ಸೈನಿಕರನ್ನು ಸರ್ಕಾರ ಕರ್ತವ್ಯಕ್ಕೆ ಕರೆದಿದೆ. ರಜೆಯನ್ನು ಮೊಟಕುಗಳಿಸಿದ ಉತ್ತರ ಕನ್ನಡ ಜಿಲ್ಲೆಯ ಸೈನಿಕರು ಶತ್ರುಗಳ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ.…
ಆಪರೇಶನ್ ಸಿಂಧೂರ: ಮೀನುಗಾರರು ಇದೀಗ ಸಮುದ್ರ ಸೈನಿಕರು!
ಪಾಪಿ ದೇಶ ಪಾಕಿಸ್ತಾನದವರು ಸಮುದ್ರದ ಮೂಲಕ ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆ ಹಿನ್ನಲೆ ಕಡಲ ಮಕ್ಕಳಾದ ಮೀನುಗಾರರನ್ನು ಸಮುದ್ರ ಸೈನಿಕರಾಗಿ ಸಜ್ಜುಗೊಳಿಸಿದೆ. ದೇಶದಲ್ಲಿ 11098 ಕಿಮೀ ಕರಾವಳಿ ತೀರವಿದ್ದು, ಎಲ್ಲಿಯೇ ಅನುಮಾನಾಸ್ಪದ ವ್ಯಕ್ತಿಗಳು ಕಾಣಿಸಿದರೂ ತಕ್ಷಣ ಮಾಹಿತಿ ನೀಡುವಂತೆ ಮೀನುಗಾರರಿಗೆ…
ಯುದ್ಧದ ಆತಂಕ: ಕಾರವಾರದಲ್ಲಿ ಸಮರಾಭ್ಯಾಸ!
ಭಾರತ-ಪಾಕಿಸ್ತಾನ ನಡುವೆ ಯುದ್ಧ ನಡೆಯುವ ಸಾಧ್ಯತೆ ಹಿನ್ನಲೆ ರಾಜ್ಯದ ಮೂರು ಕಡೆ ಸಮರಾಭ್ಯಾಸ ನಡೆಸುವ ಸಿದ್ಧತೆ ನಡೆದಿದೆ. ಅದರ ಪ್ರಕಾರ ಕಾರವಾರದಲ್ಲಿ ಸಹ ಮೇ 7ರಿಂದ ಈ ಸಮರಾಭ್ಯಾಸ ನಡೆಯಲಿದೆ. ಈ ಅಣಕು ಕಾರ್ಯಾಚರಣೆಯಲ್ಲಿ ಯುದ್ಧ ನಡೆದರೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮದ…
ತಾಯಿ ಹೆಸರಿನಲ್ಲಿ ವೃಕ್ಷಮಾತೆಯ ಫೋಷಣೆ: ಶಿರಸಿಯಲ್ಲಿ ಮತ್ತೆ ಮೂರು ದೇವತೆಯ ಸ್ಥಾಪನೆ!
ಶಿರಸಿ ಅರಣ್ಯ ಕಾಲೇಜಿನ ಆವರಣದಲ್ಲಿ ಉಪರಾಷ್ಟçಪತಿ ಜಗದೀಪ್ ಧನಕರ್ ಅವರು ತಮ್ಮ ತಾಯಿ ಕೇಸರಿ ದೇವಿ ಅವರ ಹೆಸರಿನಲ್ಲಿ ಗಿಡ ನೆಟ್ಟಿದ್ದಾರೆ. ಈ ವೇಳೆ ಅವರ ಪತ್ನಿ ಸುದೇಶ ಧನಕರ್ ಅವರು ತಮ್ಮ ತಾಯಿ ಭಗವತಿ ದೇವಿ ಹೆಸರಿನಲ್ಲಿ ಗಿಡ ನಾಟಿ…
ಸರ್ವೆ ಸಿಬ್ಬಂದಿಯಿಂದ ಜಾಗೃತಿ ಯುದ್ಧ: ಪಾಪಿಸ್ತಾನಕ್ಕೆ ಪರ್ಯಾಯ ಪಾಠ!
ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ದಾಳಿ ಖಂಡಿಸಿ ಅಂಕೋಲಾದಲ್ಲಿ ಕೆಲಸ ಮಾಡುವ ಸರ್ಕಾರಿ ಸಿಬ್ಬಂದಿಯೊಬ್ಬರು ವಿಭಿನ್ನವಾಗಿ ಜನ ಜಾಗೃತಿ ನಡೆಸುತ್ತಿದ್ದಾರೆ. ಭೂ ಮಾಪನಾ ಇಲಾಖೆಯ ನೌಕರ ರಾಘವ ನಾಯಕ ಅವರು ಅಂಕೋಲಾದ ಹಲವು ಕಡೆ ಪಾಕಿಸ್ತಾನದ ವಿರುದ್ಧ ಚಿತ್ರ ಬಿಡಿಸಿದ್ದಾರೆ. ಪಾಕಿಸ್ತಾನದವರನ್ನು ಅಶ್ಲೀಲ…
ಆಗಿನ ಚಾಕಲೇಟು ವ್ಯಾಪಾರಿ ಇದೀಗ ಭಯ-ಉತ್ಪಾದಕ: ಮಕ್ಕಳ ಹುಟ್ಟಿಸುವುದೇ ಈತನ ಉಪಕಸುಬು!
ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಉಗ್ರನನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮೋಸಿನ್ ಯಾನೆ ಇಮ್ತಿಯಾಜ್ ತಂದೆ ಅಬ್ದುಲ್ ಶಕೂರ್ ಹೊನ್ನಾವರ ಬಂಧಿತ ವ್ಯಕ್ತಿ. 2019ರಲ್ಲಿ ಶಿರಸಿಯಲ್ಲಿ ಅಸ್ಲಾಂ ಎಂಬಾತರ ಕೊಲೆ ನಡೆದಿತ್ತು. ಈ ಕೊಲೆಯ ಆರೋಪಿಗಳ ಪೈಕಿ…
ಪರಿಸರ ಸೂಕ್ಷ್ಮ ವರದಿ ರೂವಾರಿ: ಕಸ್ತೂರಿ ರಂಗನ್ ಇನ್ನಿಲ್ಲ..
ಉತ್ತರ ಕನ್ನಡ ಜಿಲ್ಲೆಯನ್ನು ಸೇರಿ ಪಶ್ಚಿಮಘಟ್ಟದ ವಿವಿಧ ಪ್ರದೇಶಗಳನ್ನು `ಪರಿಸರ ಸೂಕ್ಷ್ಮ’ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ವಿಜ್ಞಾನಿ ಕೆ ಕಸ್ತೂರಿ ರಂಗನ್ (84) ಅವರು ಶುಕ್ರವಾರ ನಿಧನರಾಗಿದ್ದಾರೆ. ಕಸ್ತೂರಿ ರಂಗನ್ ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದರು. ಭಾರತೀಯ…
ಉತ್ತರ ಕನ್ನಡ: ಇಲ್ಲಿರುವ ಪಾಕ್ ಪ್ರಜೆಗಳಿಗೆ ಸದ್ಯಕ್ಕಿಲ್ಲ ಆತಂಕ!
ಕರ್ನಾಟಕದಲ್ಲಿ ಒಟ್ಟು 88 ಪಾಕಿಸ್ತಾನಿ ಪ್ರಜೆಗಳಿದ್ದು, ಅದರಲ್ಲಿ ಹೆಚ್ಚಿನವರು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದಾರೆ. ಆ ಪೈಕಿ ಭಟ್ಕಳದಲ್ಲಿ 14 ಜನ ಹಾಗೂ ಕಾರವಾರದಲ್ಲಿ ಒಬ್ಬರು ನೆಲೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವವರೆಲ್ಲರೂ ದೀರ್ಘಕಾಲಿಕ ಅವಧಿಯ ವೀಸಾ ಪಡೆದಿರುವ ಕಾರಣ ಮತ್ತೆ ಪಾಕಿಸ್ತಾನಕ್ಕೆ…
















